ಅವರಿಬ್ಬರ ನಡುವೆ 'ಅವನು' ಬಂದ: ಪೊಲೀಸರ ಸಮ್ಮುಖದಲ್ಲಿ ಗಂಡನ ಬಿಟ್ಟು 'ಆತನನ್ನು' ವಿವಾಹವಾದ ಪತ್ನಿ

odisha
Published on

ಸೋನೆಪುರ್: ಮೈದುನನೊಂದಿಗೆ ಪರಾರಿಯಾಗಿದ್ದ ಮಹಿಳೆಯೊಬ್ಬಳು ಪತಿಯ ಮುಂದೆಯೇ ಆತನನ್ನು ವಿವಾಹವಾಗಿರುವ ವಿಚಿತ್ರ ಘಟನೆ ಒಡಿಶಾದ ಸೋನೆಪುರ್​​ದ ಸುಬಲಯ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಕೆಲಸದಿಂದ ಹೊರ ಹಾಕಿದ್ದಕ್ಕೆ ಬಾರ್​ಗೆ ಬೆಂಕಿ ಹಚ್ಚಿದ ಕಾರ್ಮಿಕ: 11 ಸಾವು

ಮೂರು ವರ್ಷಗಳ ಹಿಂದೆ 22 ವರ್ಷದ ಜಿಲ್ಲಿ ಎಂಬಾಕೆ ಮಾಧಬ್ ಪ್ರಧಾನ್​ನನ್ನು ವಿವಾಹವಾಗಿದ್ದಳು. ಮುದುವೆಯ ಬಳಿಕ ಅನ್ಯೋನ್ಯವಾಗಿದ್ದ ಜಿಲ್ಲಿ ಗಂಡನ ಮನೆಯಲ್ಲಿ ಸುಖವಾಗಿಯೇ ಇದ್ದಳು. ಮಾಧಬ್ ಅವರ ಸೋದರಸಂಬಂಧಿ ಪರಮೇಶ್ವರ್ ಈ ದಂಪತಿಗಳ ಮನೆಗೆ ಭೇಟಿ ನೀಡುವವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಇದಾದ ಬಳಿಕ ದಂಪತಿಗಳ ನಡುವೆ ಕಲಹ ಆರಂಭ ಶುರುವಾಗತೊಡಗಿತು.

ಈ ನಡುವೆ ಜಿಲ್ಲಿ ಹಾಗೂ ಪರಮೇಶ್ವರ್​ ನಡುವ ಪ್ರೇಮಾಂಕುರವಾಗಿ, ಮಾಧಬ್‌ಗೆ ತಿಳಿಯದಂತೆ ಇಬ್ಬರು ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಮಾಧಬ್ ಅನುಪಸ್ಥಿತಿಯಲ್ಲಿ ಪರಸ್ಪರ ಭೇಟಿಯಾಗುತ್ತಿದ್ದ ಇವರಿಬ್ಬರ ಪ್ರೇಮಕಥೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ತಿಳಿದ ನಂತರ ಈ ವಿಷಯವು ವಿಕೋಪಕ್ಕೆ ತಿರುಗಿದೆ. ಇದಾದ ಬಳಿಕ ಇಬ್ಬರೂ ಒಟ್ಟಿಗೆ ಓಡಿಹೋಗಿ ಕಳೆದ ವಾರದಿಂದ ತಲೆಮರೆಸಿಕೊಂಡಿದ್ದರು.

ಕೊನೆಗೆ ಮಾಧಬ್ ಈ ಕುರಿತು ಪೊಲೀಸ್​​ ಮೆಟ್ಟಿಲೇರಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ಕೊನೆಗೆ ಕುಟುಂಬಸ್ಥರು ಇಬ್ಬರಿಗೂ ತಿಳುವಳಿಕೆ ಹೇಳಿದ್ದು, ಇಬ್ಬರು ಅದನ್ನು ನಿರ್ಲಕ್ಷಿಸಿ ಪರಸ್ಪರ ಮದುವೆಯಾಗುವುದಾಗಿ ಹಟ ಹಿಡಿದಿದ್ದಾರೆ. ಕುಟುಂಬಸ್ಥರ ಪ್ರಯತ್ನ ವಿಫಲವಾದ ಬಳಿಕ ಪೊಲೀಸ್ ಠಾಣೆಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇಬ್ಬರ ವಿವಾಹ ನೆರವೇರಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net