ಸಂಪತ್ತಿನ ಆಸೆಗಾಗಿ 9 ವರ್ಷದ ಬಾಲಕನ ನರಬಲಿ, ಬೆಚ್ಚಿಬಿದ್ದ ಗ್ರಾಮಸ್ಥರು

nasik black magic
Published on

ನಾಸಿಕ್​: 9 ವರ್ಷದ ಬಾಲಕನನ್ನು ಅಪಹರಿಸಿ ನರಬಲಿ ಕೊಡಲಾಗಿದೆ ಎಂಬ ಆರೋಪಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮಾಲೆಗಾಂವ್ ಮೂಲದ ಉಮಾಜಿ ಮೋರೆ (42), ರೋಮಾ ಮೋರೆ (25), ರಮೇಶ ಸೋನವಣೆ (21), ಗಣೇಶ್ ಸೋನವಣೆ (19) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಲಕ್ಷ್ಮಣ್ ಸೋನಾವಣೆ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 8 ರೋಗಿಗಳ ಸಾವು..?

ಜುಲೈ 16ರಂದು 9 ವರ್ಷದ ಬಾಲಕ ಕೃಷ್ಣ ಎಂಬಾತ ತಮ್ಮ ಜಮೀನಿಗೆ ಹೋಗಲು ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದಾನೆ. ಕುಟುಂಬಸ್ಥರು ಆತನಿಗಾಗಿ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದ್ದು ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಕೊನೆಗೆ ಎರಡು ದಿನಗಳ ನಂತರ ಜುಲೈ 18ರಂದು ಪೋಹನೆ ಗ್ರಾಮದ ಹೊರವಲಯದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದ್ದು, ಆತನ ಗಂಟಲನ್ನು ಸೀಳಿ ಭೀಕರವಾಗಿ ಕೊಲೆಗೈದು ಮೂಢನಂಬಿಕೆಯ ಭಾಗವಾಗಿ ದೇಹವನ್ನು ನೆಲದಲ್ಲಿ ಅರ್ಧ ಹೂತಿಟ್ಟಿದ್ದರು.

ಈ ಕುರಿತು ಮಾತನಾಡಿರುವ ಪೊಲೀಸರು, ಅದೇ ಗ್ರಾಮದ ನಿವಾಸಿಗಳಾಗಿರುವ ಆರೋಪಿಗಳು ಗುಪ್ತ ನಿಧಿಯ ಹುಡುಕಾಟದಲ್ಲಿದ್ದರು. ಇದರ ಆಚರಣೆಯ ಭಾಗವಾಗಿ ಬಾಲಕನನ್ನು ಕೊಂದಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net