More

    ಧಾರವಾಡ, ಗದಗ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಟ್ರೇಲರ್ ಕದಿಯುತ್ತಿದ್ದವರ ಬಂಧನ

    ಕುಂದಗೋಳ: ತಾಲೂಕಿನಲ್ಲಿ ಬಹು ದಿನಗಳಿಂದ ಟ್ರ್ಯಾಕ್ಟರ್ ಟ್ರೇಲರ್​ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರ ಪತ್ತೆಗೆ ಮುಂದಾಗಿದ್ದಾರೆ.

    ನಾಲ್ಕೈದು ತಿಂಗಳಿಂದ ರೈತರು ತಮ್ಮ ಹಿತ್ತಲು, ಬಯಲು ಜಾಗ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್​ಗಳನ್ನು ಈ ಖದೀಮರು ಎಗರಿಸುತ್ತಿದ್ದರು. ಕುರಿತು ಕುಂದಗೋಳ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕುಂದಗೋಳ ಪೊಲೀಸ್ ಠಾಣೆಯ ಸಿಪಿಐ ಶಿವಾನಂದ ಅಂಬಿಗೇರ ಹಾಗೂ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿಸಿ ಅವರನ್ನು ವಿಚಾರಣೆಗೊಳಪಡಿಸಿ ಕಳವು ಮಾಡಿದ್ದ 6 ಟ್ರೇಲರ್ ಹಾಗೂ 1 ನೀರಿನ ಟ್ಯಾಂಕರ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಟ್ರ್ಯಾಕ್ಟರ್ ಇಂಜಿನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿಗಳು ಕುಂದಗೋಳ, ಬೆನಕನಹಳ್ಳಿ, ಶಿರೂರ, ಇನಾಂಕೊಪ್ಪ, ಹುಬ್ಬಳ್ಳಿ ತಾಲೂಕಿನ ಅದರಗುಂಚಿ, ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಹಾಗೂ ಮಲ್ಲಾಪೂರ ಗ್ರಾಮಗಳಲ್ಲಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

    ಶುಕ್ರವಾರ ಬೆಳಗ್ಗೆ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಪ್ರಕರಣ ಬೇಧಿಸುವಲ್ಲಿ ಜಿಲ್ಲಾ ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್ಪಿ, ಎನ್.ಎ. ಭರಮನಿ, ಡಿವೈಎಸ್​ಪಿ ಶಿವಾನಂದ ಕಟಗಿ ಮಾರ್ಗದರ್ಶನ ನೀಡಿದ್ದು, ಸ್ಥಳಿಯ ಠಾಣೆಯ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್​ಐಗಳಾದ ಆರ್.ಸಿ.ದೊಡ್ಡಮನಿ, ಮಂಜುಳಾ ಸದಾರಿಯವರ, ಇಮ್ರಾನ ಪಠಾಣ, ಸಿಬ್ಬಂದಿ ಚಂದ್ರು ಬಡಿಗೇರ, ಬಸವರಾಜ ಶಿರಕೋಳ, ಮಡಿವಾಳ ಜೋಡಗೇರಿ, ಪರಮೇಶ ಗೊಂದಿ, ಶಂಕರ್ ಮುತ್ತಲಗೇರಿ, ಮಲಗೌಡ ಪಾಟೀಲ, ಮೌನೇಶ ಗಲಗ, ಮಣಿಚಂದ್ರ ಗೋಣೇನವರ, ಅರುಣ ಹಾವಾಡಿ, ಉದಯ ಕಮ್ಮಾರ, ತಾಂತ್ರಿಕ ವಿಭಾಗದ ಅರೀಫ್ ಗೋಲಂದಾಜ, ವಿಠಲ ಡಂಗನವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts