ಮೆಕ್ಸಿಕೊ: ಕೆಲಸದಿಂದ ಹೊರ ಹಾಕಿದ್ದಕ್ಕೆ ಬಾರ್ಗೆ ಬೆಂಕಿ ಹಚ್ಚಿದ ಪರಿಣಾಮ 11 ಜನರು ಮೃತಪಟ್ಟಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ.
ಇದನ್ನೂ ಓದಿ: ವ್ಯಕ್ತಿಯ ಮುಖ, ದೇಹಕ್ಕೆ ಮಲ ಸುರಿದು ವಿಕೃತಿ: ಅಮಾನವೀಯ ಕೃತ್ಯ ಎಸಗಿದ ಆರೋಪಿಯ ಬಂಧನ
ಅಮೆರಿಕಾ ಸಂಯುಕ್ತ ಸಂಸ್ಥಾನದ ಗಡಿಯಲ್ಲಿರುವ ಉತ್ತರ ರಾಜ್ಯ ಸೊನೊರಾದಲ್ಲಿರುವ ಸ್ಯಾನ್ ಲೂಯಿಸ್ ರಿಯೊ ಕೊಲೊರಾಡೊ ಪಟ್ಟಣದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಏಳು ಪುರುಷರು ಮತ್ತು ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಇತರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯರನ್ನು ಅಗೌರವದಿಂದ ನಡೆಸಿಕೊಂಡಿದ್ದಕ್ಕಾಗಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಕಾರ್ಮಿಕನೊಬ್ಬನನ್ನು ಬಾರ್‌ನಿಂದ ಹೊರಹಾಕಲಾಯಿತು. ಇದೇ ಸಿಟ್ಟಿನಲ್ಲಿ ಹೊರ ಹೋಗಿದ್ದ ಕಾರ್ಮಿಕ, ಕೆಲ ಸಮಯದ ಬಳಿಕ ನಿಷೇಧಿತ ಮೊಲೊಟೊವ್ ಕಾಕ್‌ಟೈಲ್‌ನಿಂದ ನಿರ್ಮಿಸಿದ ಉರಿಯುತ್ತಿರುವ ವಸ್ತುವೊಂದನ್ನು ಬಾರ್ರೊಳಗೆ ಎಸೆದು ಬಾಗಿಲನ್ನು ಹಾಕಿಕೊಂಡಿದ್ದಾನೆ.
ಕೂಡಲೇ ಜ್ವಾಲೆಯು ಇಡೀ ಬಾರ್ನ್ನು ಸುಟ್ಟು ಹಾಕಿದ್ದು ಒಳಗಡೆ ಕುಳಿತಿದ್ದ ಎಲ್ಲರು ಸುಟ್ಟುಕರಕಲಾಗಿದ್ದಾರೆ. ಕೃತ್ಯವನ್ನು ಎಸಗಿದ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಗರದ ಮೇಯರ್ ಸ್ಯಾಂಟೋಸ್ ಗೊನ್ಜಾಲೆಜ್ ಹೇಳಿದ್ದಾರೆ. (ಏಜೆನ್ಸೀಸ್)