ವ್ಯಕ್ತಿಯ ಮುಖ, ದೇಹಕ್ಕೆ ಮಲ ಸುರಿದು ವಿಕೃತಿ: ಅಮಾನವೀಯ ಕೃತ್ಯ ಎಸಗಿದ ಆರೋಪಿಯ ಬಂಧನ

arrest
ಸಾಂದರ್ಭಿಕ ಚಿತ್ರ
Published on

ಛತ್ತರ್‌ಪುರ: ತನ್ನ ಮುಖ ಮತ್ತು ದೇಹಕ್ಕೆ ಮಲವನ್ನು ಬಳಿದಿದ್ದಾನೆ ಎಂದು ದಲಿತ ವ್ಯಕ್ತಿಯೊಬ್ಬ ಆರೋಪಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಸಂಪತ್ತಿನ ಆಸೆಗಾಗಿ 9 ವರ್ಷದ ಬಾಲಕನ ನರಬಲಿ, ಬೆಚ್ಚಿಬಿದ್ದ ಗ್ರಾಮಸ್ಥರು

ದೂರಿನ ಆಧಾರದ ಮೇಲೆ ಘಟನೆಗೆ ಸಂಬಂಧಿಸಿದಂತೆ ರಾಮಕೃಪಾಲ್​ ಪಟೇಲ್​ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಸಂತ್ರಸ್ತನನ್ನು ದಶರತ್ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಶುಕ್ರವಾರ ಛತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ಪಂಚಾಯತ್‌ಗೆ ಚರಂಡಿ ನಿರ್ಮಾಣದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದ್ದು, ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಗ್ರೀಸ್​​ನ್ನು ಸ್ಪರ್ಶಿಸಿದ್ದಾನೆ.

ಆಗ ಆರೋಪಿಯು ಸಮೀಪದ ಹ್ಯಾಂಡ್ ಪಂಪ್‌ನಲ್ಲಿ ಸ್ನಾನ ಮಾಡುತ್ತಿದ್ದ. ಈ ವೇಳೆ ಪಟೇಲ್ ಸಮೀಪದಲ್ಲೆ ಸ್ನಾನಕ್ಕೆ ಬಳಸುವ ಚೊಂಬಿನಲ್ಲಿ ಮಾನವ ಮಲವನ್ನು ತಂದು ತನ್ನ ತಲೆ ಮತ್ತು ಮುಖ ಸೇರಿದಂತೆ ಮೈಮೇಲೆ ಬಳಿದಿದ್ದಾರೆ ಅಲ್ಲದೇ ತನಗೆ ಜಾತಿ ನಿಂದನೆ ಮಾಡಿದ್ದಾನೆ ಎಂದು ಸಂತ್ರಸ್ತ ಹೇಳಿದ್ದಾನೆ. ಅಲ್ಲದೇ, ತಾನು ಈ ವಿಷಯವನ್ನು ಪಂಚಾಯತ್‌ಗೆ ತಿಳಿಸಿದ್ದೆ, ಈ ವೇಳೆ ತನಗೆ ಶುಕ್ರವಾರದಂದು 600 ರೂ. ದಂಡವನ್ನು ಪಂಚಾಯಿತಿ ವಿಧಿಸಿದೆ ಎಂದು ಅಹಿರ್ವಾರ್ ಆರೋಪಿಸಿದ್ದಾನೆ. ಈ ಕುರಿತು ಶುಕ್ರವಾರ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಂತ್ರಸ್ತ, ತನ್ನ ಕೆಲಸವನ್ನು ಮಧ್ಯದಲ್ಲಿ ಬಿಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 8 ರೋಗಿಗಳ ಸಾವು..?

ರಾಮಕೃಪಾಲ್ ಪಟೇಲ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, ಅಶ್ಲೀಲ ಕೃತ್ಯಗಳು ಮತ್ತು ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಅಹಿರ್ವಾರ್ ಇತರರೊಂದಿಗೆ ಕೆಲಸ ಮಾಡುತ್ತಿದ್ದಾಗ, ಅವರು ಸಮೀಪದಲ್ಲಿ ಸ್ನಾನ ಮಾಡುತ್ತಿದ್ದ ಪಟೇಲ್ ಅವರೊಂದಿಗೆ ತಮಾಷೆ ಮಾಡುತ್ತಿದ್ದರು. ಅಹಿರ್ವಾ‌-ಪಟೇಲ್  ತಮಾಷೆಯಾಗಿ ಪರಸ್ಪರ ವಸ್ತುಗಳನ್ನು ಎಸೆಯುತ್ತಿದ್ದರು. ಈ ವೇಳೆ ಪಟೇಲ್ ಮಾನವ ಮಲವನ್ನು ಕೈಯಿಂದ ಎತ್ತಿಕೊಂಡು ಅಹಿರ್ವಾರ್ ಅವರ ಬೆನ್ನಿನ ಮೇಲೆ ಎಸೆದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net