More

    ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಿ

    ಸಿಂಧನೂರು; ಎನ್‌ಡಿಎ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ, ಕರ್ನಾಟಕ ರೈತ ಸಂಘ ಹಾಗೂ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಜಂಟಿ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.

    ಇದನ್ನೂ ಓದಿ: ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಿ

    ರೈತರ ಆದಾಯವನ್ನು ಕಾನೂನು ಬದ್ಧ ಖಾತರಿಯೊಂದಿಗೆ ದ್ವಿಗುಣಗೊಳಿಸಬೇಕು. ಬೀಜದ ಮೇಲಿನ ಸಬ್ಸಿಡಿಯನ್ನು ಶೇ.50 ಹೆಚ್ಚಳ ಮಾಡಬೇಕು. ಉತ್ಪಾದನಾ ವೆಚ್ಚ ಕಡಿಮೆ ಮಾಡಲು ರಸಗೊಬ್ಬರ, ವಿದ್ಯುತ್ ಸಬ್ಸಿಡಿ ಒದಗಿಸಬೇಕು.

    ರಾಷ್ಟ್ರೀಯ ಕನಿಷ್ಠ ವೇತನ ತಿಂಗಳಿಗೆ 31,000 ನಿಗದಿ, ಕಾರ್ಮಿಕ ದ್ರೋಹಿ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಉದ್ಯೋಗ ಖಾತರಿ ಕಾರ್ಮಿಕರ ದಿನಗೂಲಿ ರೂ. 500, ಹಾಗೂ ವರ್ಷಪೂರ್ತಿ ಕೆಲಸ ಒದಗಿಸಬೇಕು.

    ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಿ, ಖಾಯಂ ಕೆಲಸ ಒದಗಿಸಬೇಕು. ತೋಟ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕೆಲಸದ ಸುರಕ್ಷತೆ ನೀಡಬೇಕು. ಪ್ರಜಾಪ್ರಭುತ್ವ, ಮಾನವ ಹಕ್ಕುಗಳನ್ನು ನಾಶಗೊಳಿಸುತ್ತಿರುವ, ಸಂವಿಧಾನದ ಆಶಯವನ್ನು ಗಾಳಿಗೆ ತೂರಿದ ಕೇಂದ್ರ ಸರ್ಕಾರವನ್ನು ತೆರವುಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಮುಂದಾಗಬೇಕು.

    2020ರ ರೈತ ಚಳುವಳಿಯಲ್ಲಿ ಮೃತರಾದ, 780 ಜನ ರೈತ ಕುಟುಂಬಗಳಿಗೆ ಪರಿಹಾರ ನೀಡಿ, ಪೊಲೀಸ್ ಮಿಲಿಟರಿ ಪಡೆಗಳಿಂದ ಗಾಯಗೊಂಡ ರೈತ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

    ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ, ಶ್ರಮಜೀವಿ ಎಪಿಎಂಸಿ ಹಮಾಲರ ತಾಲೂಕು ಸಂಘದ ಅಧ್ಯಕ್ಷ ಮಾಬುಸಾಬ ಬೆಳ್ಳಟ್ಟಿ, ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷೆ ಅಂಬಮ್ಮ ಬಸಾಪುರ, ಹನುಮಂತಪ್ಪ ಗೋಡ್ಯಾಳ, ಎಚ್.ಆರ್.ಹೊಸಮನಿ, ಮುದಿಯಪ್ಪ, ದವಲಸಾಬ, ನಾಗಪ್ಪ, ತುಂಗಭದ್ರಾ ಕಾರ್ಕಿಕರಾದ, ರುಕ್ಮಿಣೇಮ್ಮ, ನಿಂಗಮ್ಮ, ತುಳಸಮ್ಮ, ಹಂಪಮ್ಮ, ಲಕ್ಷ್ಮೀ, ಭೀಬಿ ಪಾತಿಮಾ, ವಿಘ್ನೇಶಮ್ಮ, ದುರುಗಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts