More

    ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಿ

    ರಾಯಚೂರು: ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಗ್ರಾಮೀಣ ಭಾರತ ಬಂದ್ ಮುಷ್ಕರದ ಅಂಗವಾಗಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಟಿಯುಸಿಐನಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
    ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಎಲ್ಲ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಘೋಷಣೆ ಮಾಡಿದ್ದ ಬಿಜೆಪಿ ಸರ್ಕಾರ ಅಕಾಧಿರಾವಯಲ್ಲಿ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡದೇ ದ್ರೋಹ ಬಗೆದಿದೆ.
    ರೈತರ ಆದಾಯವನ್ನು ಕಾನೂನು ಬದ್ಧ ಖಾತ್ರಿಯೊಂದಿಗೆ ದ್ವಿಗುಣಗೊಳಿಸಬೇಕು. ಬಿತ್ತನೆ ಬೀಜದ ಮೇಲಿನ ಸಬ್ಸಿಡಿಯನ್ನು ಶೇ.50ಕ್ಕೆ ಹೆಚ್ಚಳ ಮಾಡಬೇಕು. ಉತ್ಪಾದನಾ ವೆಚ್ಚ ಕಡಿಮೆ ಮಾಡಲು ರಸಗೊಬ್ಬರ, ವಿದ್ಯುತ್ ಸಬ್ಸಿಡಿ ನೀಡಬೇಕು. ಕಾರ್ಮಿಕ ದ್ರೋಹಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು.
    ಕನಿಷ್ಠ ವೇತನವನ್ನು ಮಾಸಿಕ 31 ಸಾವಿರ ರೂ.ಗಳಿಗೆ ನಿಗದಿಪಡಿಸಬೇಕು. ಉದ್ಯೋಗ ಖಾತ್ರಿ ಕಾರ್ಮಿಕರ ದಿನಗೂಲಿಯನ್ನು 500 ರೂ.ಗೆ ಹೆಚ್ಚಿಸಿ ವರ್ಷಪೂರ್ತಿ ಕೆಲಸ ಒದಗಿಸಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಿ, ಕಾಯಂ ಕೆಲಸ ಒದಗಿಸಬೇಕು.
    ಹೋರಾಟ ನಡೆಸುತ್ತಿರುವ ರೈತರನ್ನು ದೆಹಲಿ ಒಳಗೆ ಬಿಡಬೇಕು. ರೈತರು ಬರುವ ಹೆದ್ದಾರಿಗಳೀಗೆ ಮೊಳೆ ಹೊಡೆದು, ಹೊಗೆ ಬಾಂಬ್ ಸಿಡಿಸಿ ದೌರ್ಜನ್ಯ ಎಸಗುತ್ತಿರುವುದನ್ನು ನಿಲ್ಲಿಸಬೇಕು. ರೈತ ಹೋರಾಟದಲ್ಲಿ ಮೃತರಾದ 780 ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಕಾರಿಗಳಾದ ಅಜೀಜ್ ಜಾಗೀರದಾರ್, ಮಲ್ಲಯ್ಯ ಕಟ್ಟಿಮನಿ, ಜಿ.ಅಡವಿರಾವ್, ಸೈಯದ್ ಅಬ್ಬಾಸ್ ಅಲಿ, ಬಾಷಾ ಖಾನ್, ಲಕ್ಷ್ಮಣ, ನಬಿಸಾಬ್, ಆಂಜಿನೇಯ ರಾಂಪುರ, ಮಲ್ಲಿಕಾರ್ಜುನ ಗಣೇಕಲ್, ಬಸವರಾಜ ಗುಡಿಹಾಳ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts