

ನವದೆಹಲಿ: ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಎಲ್ಲಾ ಪೂಜೆಗಳಲ್ಲೂ ಹೂವು ಅತ್ಯವಶ್ಯಕ. ಹೂವುಗಳಿಲ್ಲದೆ ಪೂಜೆ ವ್ಯರ್ಥವೆಂದರೆ ತಪ್ಪಾಗಲಾರದು. ಪೂಜೆಗೆ ಬಳಸುವ ಹೂವುಗಳಲ್ಲಿ ಚೆಂಡು ಹೂವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಆದರೆ ಈ ಹೂವು ಇನ್ಮುಂದೆ ಪೂಜೆಗೆ ಮಾತ್ರ ಬಳಕೆ ಆಗಿಲ್ಲ.. ಐಸ್ ಕ್ರೀಂ ಕೂಡಾ ತಯಾರಾಗುತ್ತದೆ.. ಅರೇ ಇದು ಹೇಗೆ ಸಾಧ್ಯ ಅಂತೀರಾ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಅಂದ್ರೆ ಈ ಸ್ಟೋರಿ ಓದಲೇ ಬೇಕು….
ಹೌದು ಚೆಂಡು ಹೂವನ್ನು ಪ್ರಧಾನವಾಗಿ ಇಟ್ಟುಕೊಂಡು ಮಹಿಳೆಯೊಬ್ಬರು ಐಸ್ ಕ್ರೀಂ ತಯಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತ ವಿಡಿಯೋ ನೋಡಿರುವ ನೆಟ್ಟಿಗರು ಈಗೂ ಮಾಡಬಹುದಾ ಎಂದು ಪ್ರಶ್ನಿಸಿದ್ದಾರೆ. ಕೆಲವರು ಮಹಿಳೆಯ ಪ್ರಯತ್ನವನ್ನು ಹಾಡಿ ಹೊಗಳಿದರೆ ಇನ್ನೂ ಕೆಲವರು ಮಿಶ್ವ ಪ್ರತಿಕ್ರಿಯೆ ಹೊರಹಾಕಿದ್ದಾರೆ.
soyanitasan ಎಂಬ ಮಹಿಳೆಯೂ ಚೆಂಡು ಹೂವಿನ ದಳಗಳನ್ನು ಬಿಡಿಸಿ ನಂತರ ಅದರ ಮೇಲೆ ಬಿಸಿನೀರನ್ನು ಸುರಿಯುತ್ತಾರೆ. ಸ್ವಲ್ಪ ಸಮಯದ ನಂತರ, ಅವುಗಳನ್ನು ಪ್ರತ್ಯೇಕವಾಗಿ ತೊಳೆದು ಬ್ಲೆಂಡರ್ಗೆ ವರ್ಗಾಯಿಸುಕೊಳ್ಳುತ್ತಾರೆ. ಬಳಿಕ ಹೂವಿನ ದಳಗಳನ್ನು ಹಾಲು ಮತ್ತು ನೀರಿನಲ್ಲಿ ಬೆರೆಸುತ್ತಾರೆ. ಬಳಿಕ ಅದಕ್ಕೆ ಸಕ್ಕರೆ ಮತ್ತು ಕೆಲವು ಪದಾರ್ಥಗಳನ್ನು ಬೆರೆಸಿ ಕಂಟೇನರ್ಗೆ ಹಾಕಿ ಐಸ್ ಕ್ರೀಂ ಮೇಕರ್ನಲ್ಲಿ ಇಡುತ್ತಾರೆ. ಕೆಲ ಹೊತ್ತಿನ ಬಳಿಕ ಅದನ್ನು ಹೊರತೆಗೆದು ಸೇವಿಸುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಈವರೆಗೂ 8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕರು ಚೆಂಡುಹೂವಿನ ಐಸ್ಕ್ರೀಂ ಅನ್ನು ವಿನೂತನ ಪ್ರಯತ್ನ ಎಂದು ಶ್ಲಾಘಿಸಿದ್ದು, ಮನೆಯಲ್ಲಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಇದರ ಬಗ್ಗೆ ಮಿಶ್ರವಾಗಿ ಕಮೆಂಟ್ಸ್ ಹಾಕಿದ್ದಾರೆ.
ಇದಕ್ಕೂ ಮೊದಲು, ವ್ಯಕ್ತಿಯೊಬ್ಬರು ಸೂರ್ಯಕಾಂತಿ ದಳಗಳನ್ನು ಗ್ರಿಲ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದ ಬಹುತೇಕರು ಈಗೂ ಮಾಡಬಹುದಾ ಎಂದು ಆಶ್ಚರ್ಯಚಕಿತರಾಗಿದ್ದರು.