More

    ನೀನು ಮಾಂಸಹಾರ ಸೇವಿಸಿದ್ದಕ್ಕೆ ಫಿನಾಲೆಯಲ್ಲಿ ಭಾರತ ಸೋತಿದೆ ಎಂದು ತಮ್ಮನನ್ನೇ ಕೊಲೆಗೈದ ಅಣ್ಣ

    ಅಮರಾವತಿ: ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿತ್ತು. ಏಕದಿನ ವಿಶ್ವಕಪ್ ಫಿನಾಲೆಯಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ವಿಶ್ವಕಪ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತದ ಸೋಲು ರೋಹಿತ್ ಪಡೆಗೆ ಮಾತ್ರವಲ್ಲದೆ ಪ್ರತಿಯೊಬ್ಬ ಅಭಿಮಾನಿಗೂ ಬೇಸರ ತರಿಸಿದೆ. 

    ಭಾರತ ವಿಶ್ವಕಪ್​ ಫಿನಾಲೆಯಲ್ಲಿ ಸೋತಿದ್ದಕ್ಕೆ ಮನನೊಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಓರ್ವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ಧಾರೆ. ಇದರ ನಡುವೆ ಬೆಚ್ಚಿಬೀಳಿಸುವಂತಹ ಘಟನೆಯೊಂದು ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ನೀನು ಮಾಂಸಹಾರ ಸೇವಿಸಿದ್ದಕ್ಕೆ ಫಿನಾಲೆಯಲ್ಲಿ ಭಾರತ ಸೋತಿದೆ ಎಂದು ಆರೋಪಿಸಿ ತಮ್ಮನನ್ನೇ ಅಣ್ಣ ಕೊಲೆಗೈದಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೃತರನ್ನು ಅಂಕಿತ್​ ಇಂಗೋಲ್​ (28) ಎಂದು ಗುರತಿಸಲಾಗಿದ್ದು, ಘಟನೆ ಸಂಬಂಧ ಪೊಲೀಸರು ಪ್ರವೀಣ್​ ಇಂಗೋಲ್​ (32) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇವರ ತಂದೆ ರಮೇಶ್​ ಇಂಗೋಲ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತ ವಿಶ್ವಕಪ್​ ಫಿನಾಲೆಯಲ್ಲಿ ಸೋತಿದ್ದರಿಂದ ಕುಪಿತಗೊಂಡು ವ್ಯಕ್ತಿಯೋರ್ವ ತನ್ನ ಕಿರಿಯ ಸಹೋದರ ಹಾಗೂ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕಿರಿಯ ಸಹೋದರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭಿರವಾಗಿ ಗಾಯಗೊಂಡಿರುವ ತಂದೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಸೀನ್​ ಲೀಕ್; ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಭಾನುವಾರ ರಾತ್ರಿ, ಮೂವರೂ ಮನೆಯಲ್ಲಿ ಕುಳಿತು ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದರು. ಜೊತೆಗೆ ಮೂವರೂ ಮದ್ಯ ಸೇವಿಸಿದ್ದರು. ಭಾರತ ಸೋಲುತ್ತಿದ್ದಂತೆ ಅಣ್ಣ-ತಮ್ಮಂದಿನ ನಡುವೆ ಜಗಳ ಶುರುವಾಗಿದೆ. ನೀನು ಕುರಿ ಮಾಂಸ ತಿಂದಿದ್ದರಿಂದ ಭಾರತ ಸೋತಿತು ಎಂದು ಪ್ರವೀಣ್, ಆರೋಪಿಯನ್ನು ನಿಂದಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಅಲ್ಲೇ ಇದ್ದ ಕಬ್ಬಿಣದ ಸರಳು ತಂದು ಸಹೋದರ ಅಂಕಿತ್ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತಂದೆಯನ್ನೂ ಹೊಡೆದಿದ್ದಾನೆ.

    ಈ ದಾಳಿಯಲ್ಲಿ ಅಂಕಿತ್ ಗಂಭೀರವಾಗಿ ಗಾಯಗೊಂಡು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ತಂದೆ ರಮೇಶ್ ಕೂಡ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಯ ದೂರಿನ ಮೇರೆಗೆ ಬದನೇರಾ ಪೊಲೀಸರು ಆರೋಪಿ ಪ್ರವೀಣ್ ವಿರುದ್ಧ ಕಲಂ 302, 307 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts