

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಇದರಲ್ಲಿ ನಟಿ ಸಂಗೀತಾ ಶೃಂಗೇರಿ ಹಾಗು ಕಾರ್ತಿಕ್ ಮಹೇಶ್ ಅವರ ನಡುವಿನ ಒಡನಾಟ ಪ್ರೇಕ್ಷಕರ ಗಮನ ಸೆಳೆದಿರುವುದು ಮತ್ತಷ್ಟು ವಿಶೇಷವೆನಿಸಿದೆ.
ಇತ್ತೀಚಿನ ದಿನಗಳಲ್ಲಿ ಕಾರ್ತಿಕ್ ಹಾಗೂ ದಿನದಿಂದ ದಿನಕ್ಕೆ ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಮನಸ್ತಾಪ ಹೆಚ್ಚಾಗುತ್ತಲೇ ಇದೆ. ಕಾರ್ತಿಕ್ ತಲೆ ಬೋಳಿಸಿಕೊಂಡ ಬಳಿಕ ಸಂಗೀತಾಗೆ ಪಶ್ಚಾತ್ತಾಪ ಕಾಡಿದೆ. ನಾನಲ್ಲದೇ ಬೇರೆ ಯಾರೋ ಆಗುತ್ತಿದ್ದೇನೆ ಎನಿಸುತ್ತಿದೆ ಇದು ನಾನಲ್ಲ ಎಂದು ಸಂಗೀತಾ ಅತ್ತಿದ್ದಾರೆ.
ಕಾರ್ತಿಕ್ ಎಷ್ಟೇ ಸಮಾಧಾನ ಪಡಿಸಿದರು ಸುಮ್ಮನಾಗದ ಸಂಗೀತಾ ಕೆಲ ಕ್ಷಣಗಳ ನಂತರ ನಾನು ಆಟ ಆಡುವುದಿಲ್ಲ ಎಂದು ಹೇಳುತ್ತಾರೆ. ನಂತರದಲ್ಲಿ ಬಿಗ್ ಬಾಸ್ ಮನೆಯ ಮುಖ್ಯ ದ್ವಾರ ಓಪನ್ ಆಗಿದೆ. ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಸಂಗೀತಾ ಅವರು ದುಡುಕಿನ ನಿರ್ಧಾರ ಮಾಡಿಬಿಟ್ರಾ ಎಂದು ಎಲ್ಲರಿಗೂ ಅನಿಸಿದೆ.
ಈ ಕ್ಷಣದ ಪ್ರೋಮೋ ಬಿಡುಗಡೆ ಆಗಿದೆ. ಅತಿಥಿಯಾಗಿ ಬಂದಿದ್ದ ಬ್ರಹ್ಮಾಂಡ ಗುರೂಜಿ ಅವರನ್ನು ವಾಪಸ್ ಕಳಿಸಲು ಕೂಡ ಬಾಗಿಲು ತೆರೆದಿರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.ಅಸಲಿಗೆ ಏನಾಗಿದೆ ಎಂಬುದು ಕಲರ್ಸ್ ಕನ್ನಡದಲ್ಲಿ ನ.22ರ ರಾತ್ರಿ 9.30ಕ್ಕೆ ಪ್ರಸಾರ ಆಗುವ ಎಪಿಸೋಡ್ನಲ್ಲಿ ತಿಳಿಯಲಿದೆ. ಜಿಯೋ ಸಿನಿಮಾದಲ್ಲಿ ದಿನ 24 ಗಂಟೆಯೂ ಲೈವ್ ನೋಡಬಹುದಾಗಿದೆ.