More

    ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಥಾಯ್ಲೆಂಡ್​ ಸಚಿವ ಸಂಪುಟ

    ನವದೆಹಲಿ: ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ನಾಗರೀಕ ಸಂಹಿತೆ ಕಾಯ್ದೆ ತಿದ್ದುಪಡಿಗೆ ಥಾಯ್ಲೆಂಡ್​ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಂದಿನ ತಿಂಗಳು ನಡೆಯುವ ಸಂಸತ್​ ಅಧಿವೇಶನದಲ್ಲಿ ಕರಡು ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.

    ಸಿವಿಲ್​ ಮತ್ತು ವಾಣಿಜ್ಯ ತಿದ್ದುಪಡಿಯು ಸಲಿಂಗ ದಂಪತಿಗಳಿಗೆ ಪುರುಷರು ಮತ್ತು ಮಹಿಳೆಯರು, ಪತಿ ಮತ್ತು ಪತ್ನಿ, ಎಂಬ ಪದಗಳನ್ನು ಥಾಯ್ಲೆಂಡ್ ಸರ್ಕಾರ ಇನ್ನು ಮುಂದೆ ವ್ಯಕ್ತಿಗಳು ಮತ್ತು ವಿವಾಹದ ಪಾಲುದಾರರು ಎಂದು ಬದಲಿಸಲು ನಿರ್ಧರಿಸಿದೆ. ಭಿನ್ನಲಿಂಗಿಯ ದಂಪತಿಗಳು ಹೊಂದುವ ಹಕ್ಕನ್ನು ಇವರು ಹೊಂದಿರುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರದ ವಕ್ತಾರರಾದ ಕರೋಮ್ ಪೋಲ್ಪೋರ್ನ್​ಕ್ಲಾಂಗ್​, ಸಲಿಂಗ ದಂಪತಿಗಳಿಗೆ ತಮ್ಮದೇ ಆದ ಕುಟುಂಬವನ್ನು ರಚಿಸಿಕೊಳ್ಳು ಹಕ್ಕನ್ನು ಸರ್ಕಾರ ಕಾನೂನಿನ ಮೂಲಕ ಖಾತ್ರಿಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ಸಲಿಂಗ ದಂಪತಿಗಳನ್ನು ಗುರತಿಸಲು ಪಿಂಚಣಿ ನಿಧಿ ಕಾನೂನಿಗೂ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    Same Sex Marriage

    ಇದನ್ನೂ ಓದಿ: ಏಕದಿನ ವಿಶ್ವಕಪ್​ ವಿಜೇತ ತಂಡಕ್ಕೆ ಜೀವ ಬೆದರಿಕೆ; ಭಾರತೀಯ ಕ್ರೀಡಾಭಿಮಾನಿಗಳ ವಿರುದ್ಧ ದೂರು ಸಲ್ಲಿಸಿದ ಆಸೀಸ್​ ಆಟಗಾರರು

    ಈ ಕುರಿತು ಪ್ರತಿಕ್ರಿಯಿಸಿರುವ ಥಾಯ್ಲೆಂಡ್ ಪ್ರಧಾನಿ ಸ್ರೆಥಾ ಥವಿಸಿನ್, ಡಿಸೆಂಬರ್​ 12ರಂದು ನಡೆಯುವ ಸಂಸತ್​ ಅಧಿವೇಶನದಲ್ಲಿ ಕರಡು ಮಸೂದೆ ಅಂಗೀಕರಿಸುವ ಸಾಧ್ಯತೆ ಇದೆ. ಸಂಸತ್ತಿನಲ್ಲಿ ಅನುಮೋದನೆಗೊಂಡ ನಂತರ ರಾಜ ಮಹಾ ವಜಿರಾಲಾಂಗ್​ಕಾರ್ನ್​ ಅವರ ಬಳಿ ಹೋಗುತ್ತದೆ. ಆ ನಂತರ ಮಸೂದೆಗೆ ಅವರ ಅಂಕಿತ ಬಿದ್ದ ನಂತರ ಅದು ಕಾನೂನಾಗಿ ಜಾರಿಯಾಗುತ್ತದೆ.

    ಇದು ಕಾನೂನಾಗಿ ಜಾರಿಯಾದರೆ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೂರನೇ ದೇಶ ನಮ್ಮದಾಗಲಿದೆ. ಇದಕ್ಕೂ ಮುನ್ನ ನೇಪಾಳ ಹಾಗೂ ತೈವಾನ್​ ದೇಶಗಳು ಈ ಬಗ್ಗೆ ಕಾನೂನು ಜಾರಿ ಮಾಡಿದ್ದು, ಥಾಯ್ಲೆಂಡ್​ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೂರನೇ ದೇಶವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts