More

    VIDEO| ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಸೀನ್​ ಲೀಕ್; ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು

    ಹೈದರಾಬಾದ್: ಟಾಲಿವುಡ್​ ಸೂಪರ್​ ಸ್ಟಾರ್​ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ ಬಹು ನಿರೀಕ್ಷಿತ ಗುಂಟೂರು ಖಾರಂ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇತ್ತೀಚಿಗೆ ರಿಲೀಸ್​ ಆದ ಧಮ್​ ಮಸಾಲ ಹಾಡು ಅಭಿಮಾನಿಗಳ ಕ್ರೇಜ್​ ಮತ್ತಷ್ಟು ಹೆಚ್ಚಿಸಿದ್ದು, ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ.

    ಇದೀಗ ಹೊಸ ವಿಚಾರ ಒಂದರಲ್ಲಿ ಗುಂಟೂರು ಖಾರಂ ಚಿತ್ರದ ಶೂಟಿಂಗ್​ ಸೀನ್​ ಲೀಕ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಸ್ಪಷ್ಟನೆಯನ್ನು ನೀಡಿಲ್ಲ.

    ವೈರಲ್ ಆಗಿರುವ ವಿಡಿಯೋದಲ್ಲಿ ಧಮ್ ಮಸಾಲ ಹಾಡಿನ ಚಿತ್ರೀಕರಣದ್ದು ಎಂದು ಹೇಳಲಾಗಿದೆ. ರಾಮೋಜಿ ಫಿಲಂ ಸಿಟಿಯಲ್ಲಿ ಹಾಡಿನ ಚಿತ್ರೀಕರಣ ಭರದಿಂದ ಸಾಗಿದ್ದು, ಇದು ಅಲ್ಲಿನದ್ದು ಎಂದು ತಿಳಿದು ಬಂದಿದೆ.

    ಸಾಮಾನ್ಯವಾಗಿ ಮಹೇಶ್​ ಬಾಬು ತಮ್ಮ ಸಿನಿಮಾ ಕೆಲಸಗಳನ್ನು ವಿಳಂಬ ಮಾಡುತ್ತಾರೆ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಶೂಟಿಂಗ್​ ಸಂದರ್ಭದಲ್ಲಿಯೇ ವಿಡಿಯೋ ಲೀಕ್ ಆದರೆ ಅಭಿಮಾನಿಗಳಿಗೆ ಇರುವ ಎಗ್ಸೈಟ್​ಮೆಂಟ್​ ಹೊರಟುಹೋಗುತ್ತದೆ. ಆದ್ದರಿಂದ ವಿಡಿಯೋ ಲೀಕ್​ ಆದಾಗ ಚಿತ್ರತಂಡಗಳಿಗೆ ಬೇಸರ ಆಗುವುದು ಸಹಜ.

    ಗುಂಟೂರು ಖಾರಂ ಸಿನಿಮಾದ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಅಭಿಮಾನಿಗಳು ಈ ಲೀಕ್​ ವಿಡಿಯೋ ನೋಡಿ ಖುಷಿ ಆಗಿದ್ದಾರೆ. ತ್ರದ ಮೇಲೆ ಇರುವ ಕ್ರೇಜ್​ ಹೆಚ್ಚುವಂತಾಗಿದೆ. ಅದೇ ಕಾರಣಕ್ಕಾಗಿ ಚಿತ್ರತಂಡದವರು ಈ ಲೀಕ್​ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ. ಗುಂಟೂರು ಖಾರಂ ಸಿನಿಮಾಗೆ ತ್ರಿವಿಕ್ರಮ್ ಶ್ರೀನಿವಾಸ್​ ನಿರ್ದೇಶನ ಮಾಡುತ್ತಿದ್ದಾರೆ. ಅಥಡು, ಖಲೇಜಾ ಸಿನಿಮಾಗಳ ನಂತರ 3ನೇ ಬಾರಿಗೆ ಮಹೇಶ್​ ಬಾಬು ಮತ್ತು ತ್ರಿವಿಕ್ರಮ್​ ಶ್ರೀನಿವಾಸ್​ ಜೊತೆಯಾಗಿ ಕೆಲಸ ಮಾಡುತ್ತಿರುವ ಸಿನಿಮಾ ಇದು. ಆ ಕಾರಣದಿಂದಲೂ ನಿರೀಕ್ಷೆ ಮೂಡಿದೆ. ಗುಂಟೂರು ಖಾರಂ ಚಿತ್ರದಲ್ಲಿ ಮಹೇಶ್​ ಬಾಬುಗೆ ಜತೆಯಾಗಿ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಚಿತ್ರ 2024ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts