More

    ಮಹದೇವ ಬೆಟ್ಟಿಂಗ್​ ಆ್ಯಪ್​ ಪ್ರಕರಣ; ಮರುತನಿಖೆಗೆ ಆಗ್ರಹಿಸಿ ED ನಿರ್ದೇಶಕರಿಗೆ ಪತ್ರ ಬರೆದ ಆರೋಪಿ

    ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಕಾರಣದಲ್ಲೇ ಭಾರೀ ಸದ್ದು ಮಾಡಿದ್ದ ಮಹದೇವ ಬೆಟ್ಟಿಂಗ್​ ಆ್ಯಪ್​ ಪ್ರಕರಣಕ್ಕೆ ಮತ್ತೊಂದು ತಿರುವುದು ಸಿಕ್ಕಿದ್ದು, ಓರ್ವ ಆರೋಪಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಮೊದಲಿನಿಂದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾನೆ.

    ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ 10 ಪುಟಗಳ ಪತ್ರ ಬರೆದಿರುವ ಆರೋಪಿ ಅಸೀಮ್​ ದಾಸ್​ ತಮ್ಮನ್ನು ಕಾರಣವಿಲ್ಲದೇ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾನೆ.

    ಪತ್ರದಲ್ಲೇನಿದೆ

    ಮಹದೇವ ಬೆಟ್ಟಿಂಗ್​ ಆ್ಯಪ್​ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜೈಲು ಪ್ರಮುಖ ಆರೋಪಿಗಳ ಪೈಕಿ ಪೊಬ್ಬನಾಗಿರುವ ಅಸೀಮ್​ ದಾಸ್, ಪ್ರಕರಣದಲ್ಲಿ ತನ್ನ ಪಾತ್ರವಿಲ್ಲವಾದುದ್ದರಿಂದ ಸುಖಾಸುಮ್ಮನೆ ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಶುಭಂ ಸೋನಿ ಹಾಗೂ ಕೆಲ ಇಡಿ ಅಧಿಕಾರಿಗಳು ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

    ಇದನ್ನೂ ಓದಿ: ಪ್ರತಿಸ್ಪರ್ಧಿ ಕಾರ್ತಿಕ್​ ಜತೆಗೆ ಕಿರಿಕ್​; ಬಿಗ್​ಬಾಸ್ ಮನೆಯಿಂದ ಹೊರನಡೆದ್ರಾ ಸಂಗೀತಾ ಶೃಂಗೇರಿ?

    ಶೂಭಂ ಸೋನಿ ಆಹ್ವಾನದ ಮೇರೆಗೆ ನಾನು ಒಮ್ಮೆ ದುಬೈನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ಆತನನ್ನು ಭೇಟಿ ಮಾಡಿದ್ದೆ. ಪ್ರಕರಣಕ್ಕೆ ಸಂಬಂಧಿಸಂದತೆ ನನಗೂ ಆತನಿಗೂ ಯಾವುದೇ ತರಹ ಸಂಬಂಧವಿಲ್ಲ. ಜಾರಿ ನಿರ್ದೇಶನಾಲಯದ ಕೆಲ ಅಧಿಕಾರಿಗಳು ಆತನಿಂದ ಲಂಚ ಪಡೆದಿದ್ದು, ನನ್ನನ್ನು ಬಲವಂತವಾಗಿ ಬಂಧಿಸಿ ಇಲ್ಲಿ ಇರಿಸಲಾಗಿದೆ.

    ದಯವಿಟ್ಟು ಮೊದಲಿನಿಂದ ತನಿಖೆ ನಡೆಸಿ ಪ್ರಕರಣದಲ್ಲಿ ನನ್ನ ಪಾತ್ರ ಇರುವ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿ ಆ ನಂತರ ನನ್ನ ವಿರುದ್ಧ ಕ್ರಮ ಜರುಗಿಸಿ ಎಂದು ಮಹದೇವ ಬೆಟ್ಟಿಂಗ್​ ಆ್ಯಪ್​ ಅಕ್ರಮದ ಆರೋಪಿ ಅಸೀಮ್​ ದಾಸ್​ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವ ವಿಚಾರಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts