More

    ನನ್ನ ಮಗ ಮೃತಪಟ್ಟಾಗ ಮೋದಿ, ಸುಷ್ಮಾ ಸ್ವರಾಜ್​ ಬಳಿ ಸಹಾಯ ಕೇಳಿದ್ದೆ ಎಂಬುದು ಶುದ್ಧ ಸುಳ್ಳು: ಸಿಎಂ ಸಿದ್ದರಾಮಯ್ಯ

    ಬೆಳಗಾವಿ: ಜೆಡಿಎಸ್​ ಸಂಸದ ಪ್ರಜ್ವಲ್​ ರೇವಣ್ಣ ಆಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಗದ್ದಲ ಎಬ್ಬಿಸಿದ್ದು, ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ. ಇನ್ನೂ ರಾಕೇಶ್​ ಮೃತಪಟ್ಟಾಗ ಮೋದಿ ಅವರು ಮಾಡಿದ ಸಹಾಯವನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಕನಿಷ್ಠ ಸೌಜನ್ಯ ಕೂಡ ಉಳಿಸಿಕೊಂಡಿಲ್ಲ ಎಂಬ ಮಾಜಿ ಸಿಎಂ ಎಚ್​ಡಿಕೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಬೆಳಗಾವಿಯ ಗೋಕಾಕ್​ನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಮಗ ಮೃತಪಟ್ಟಾಗ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ಅವರ ಬಳಿ ಸಹಾಯ ಪಡೆದಿದ್ದೇನೆ ಎನ್ನುವುದು ಶುದ್ಧ ಸುಳ್ಳು. ನಾನು ಅವರನ್ನು ಸಂರ್ಕಿಸಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    CM Siddaramaiah

    ಇದನ್ನೂ ಓದಿ: ಐಪಿಎಲ್​ನಲ್ಲಿ ಚೆನ್ನಾಗಿ ಆಡಿದ ಮಾತ್ರಕ್ಕೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕು ಎಂದರ್ಥವಲ್ಲ: ಇರ್ಫಾನ್​ ಪಠಾಣ್

    ನನ್ನ ಮಗ ವಿದೇಶದಲ್ಲಿ ಮೃತಪಟ್ಟಿದ್ದ. ಮೃತದೇಹ ಇಲ್ಲಿಗೆ ತರಿಸಿ ಅಂತ್ಯಕ್ರಿಯೆ ಮಾಡಿದ್ದೇವೇ ಅಷ್ಟೇ. ಆ ಸಂದರ್ಭದಲ್ಲಿ ಸಹಾಯಕ್ಕಾಗಿ ಮೋದಿ ಸೇರಿದಂತೆ ಯಾರನ್ನು ಸಂಪರ್ಕಿಸುವ ಪ್ರಮೇಯವೇ ಬಂದಿಲ್ಲ. ಇವರೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಪ್ರಜ್ವಲ್ ಪ್ರಕರಣದ ಕುರಿತು ಎಸ್.ಐ.ಟಿ ವರದಿಯೇ ಅಂತಿಮ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಕೇಂದ್ರದಲ್ಲಿ 55 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಯಾರಾದ್ದಾದರೂ ತಾಳಿ ಕಿತ್ತುಕೊಂಡಿದ್ದೇವೆಯೇ ಈಗಲೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಎಲ್ಲಿ, ಯಾರ ತಾಳಿ ಕಿತ್ತುಕೊಂಡಿದ್ದೇವೆ ಒಬ್ಬ ಪ್ರಧಾನಿ ಆಗಿ ಮೋದಿ ಅವರು ಇಂಥ ಸುಳ್ಳು ಪ್ರಚಾರ ಮಾಡಬಾರದು. ಪ್ರಧಾನಿ ಮೋದಿ ಹತ್ತು ವರ್ಷಗಳ ಸಾಧನೆ ಹೇಳಿ ಮತ ಕೇಳುವ ಬದಲು ತಾಳಿ, ಬಳೆ, ಮೀಸಲಾತಿ ಕಿತ್ತುಕೊಳ್ಳುತ್ತಾರೆ ಎಂದೆಲ್ಲ ಸುಳ್ಳು ಹೇಳುತ್ತಿದ್ದಾರೆ. ಇಷ್ಟೊಂದು ‌ನೀಚ ರಾಜಕಾರಣ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts