More

    ಐಪಿಎಲ್​ನಲ್ಲಿ ಚೆನ್ನಾಗಿ ಆಡಿದ ಮಾತ್ರಕ್ಕೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕು ಎಂದರ್ಥವಲ್ಲ: ಇರ್ಫಾನ್​ ಪಠಾಣ್

    ನವದೆಹಲಿ: ಜೂನ್​ 01ರಿಂದ ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗೆ ಭಾರತ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ತಂಡಗಳನ್ನು ಪ್ರಕಟಿಸಿವೆ. ಇನ್ನು ಭಾರತ ತಂಡ ಪ್ರಕಟವಾಗಿದ್ದು, ಹಲವು ಅಚ್ಚರಿಯ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ಐಸಿಸಿ ನಡೆಸುವಂತಹ ಪ್ರಮುಖ ಟೂರ್ನಮೆಂಟ್​ಗಳಲ್ಲಿ ಅನುಭವ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಟಿ-20 ವಿಶ್ವಕಪ್​ಗೆ ಆಟಗಾರರ ಆಯ್ಕೆಗೆ ಐಪಿಎಲ್​ ಮಾನದಂಡವಾಗಬಾರದು. ಸಣ್ಣ ಸ್ಟೇಡಿಯಂ ಹಾಗೂ ಫ್ಲ್ಯಾಟ್​​ ಪಿಚ್​ಗಳಲ್ಲಿನ ಪ್ರದರ್ಶನಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಸಂಪೂರ್ಣ ಆಘಾತಕಾರಿ; ಕೆಕೆಆರ್​ ಆಟಗಾರನ ನಡೆಗೆ ಸುನೀಲ್​ ಗಾವಸ್ಕರ್ ಕೆಂಡ

    ಕೆಲವು ಆಟಗಾರರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಮಾತ್ರಕ್ಕೆ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕೆಂಬ ಮಾನದಂಡವೇನಿಲ್ಲ. ಐಪಿಎಲ್‌ನಲ್ಲಿ, ಯಾವಾಗಲೂ ಒಬ್ಬರು ಅಥವಾ ಇಬ್ಬರು ಅನ್‌ಕ್ಯಾಪ್ಡ್ ಬೌಲರ್‌ ಹಾಗೂ ಬ್ಯಾಟ್ಸ್​ಮನ್​ಗಳು ಸಣ್ಣ ಸ್ಟೇಡಿಯಂ ಹಾಗೂ ಫ್ಲ್ಯಾಟ್​​ ಪಿಚ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು. ಆದರೆ, ಅವರೆಲ್ಲಾ ತಿಳಿದುಕೊಳ್ಳಬೇಕಿರುವುದು ಏನೆಂದರೆ ಐಪಿಎಲ್​ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್​ ನಡುವೆ ಸಾಕಷ್ಟು ವ್ಯತ್ಯಾಸವಿದೆ.

    ಪ್ರತಿಯೊಬ್ಬರು ರಾಷ್ಟ್ರೀಯ ತಂಡ ಅಥವಾ ವಿಶ್ವಕಪ್​ಗೆ ಆಯ್ಕೆಯಾಗುವ ಮುನ್ನ ಗಮನಾರ್ಹ ಸಂಖ್ಯೆಯ ಪಂದ್ಯಗಳನ್ನು ಆಡಿರಬೇಕು ಮತ್ತು ಅಪಾರ ಅನುಭವವನ್ನು ಹೊಂದಿರಬೇಕು. ಉದಾಹರಣೆಗೆ 2007ರಲ್ಲಿ ಭಾರತ ಪ್ರಪಥಮ ಬಾರಿಗೆ ಟಿ-20 ವಿಶ್ವಕಪ್​ ಗೆದ್ದಾಗ ತಂಡದಲ್ಲಿ ಹೆಚ್ಚು ಮಂದಿ ಅನುಭವಿ ಆಟಗಾರರಿದ್ದ ಕಾರಣ ಇದು ನಮಗೆ ಟ್ರೋಫಿ ಗೆಲ್ಲುವಲ್ಲಿ ಸಹಕಾರಿಯಾಯ್ತು. ಅದೇ ರೀತಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕೆಂದರೆ ಐಪಿಎಲ್​ನಲ್ಲಿ ನೀಡುವ ಪ್ರದರ್ಶನ ಮಾನದಂಡವಾಗಬಾರದು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts