More

    ರೀಲ್ಸ್​ ವಿಚಾರವಾಗಿ ನಡು ರಸ್ತೆಯಲ್ಲೇ ಬಡಿದಾಡಿಕೊಂಡ ಹೆಣ್ಮಕ್ಕಳ್ಳು; ವಿಡಿಯೋ ವೈರಲ್​

    ನೋಯ್ಡಾ: ಸಾಮಾಜಿಕ ಮಾಧ್ಯಮದ ಯುಗದಲ್ಲಿ ಯುವ ಪೀಳಿಗೆ ಹೆಚ್ಚು ಸ್ಮಾರ್ಟ್​ಫೋನ್​ ಗೀಳಿಗೆ ಬಲಿಯಾಗುತ್ತಿದ್ದು, ದಿಢೀರ್‌ ಖ್ಯಾತರಾಗಬೇಕೆಂಬ ಹುಚ್ಚು ಹವ್ಯಾಸಕ್ಕೆ ಅಂಟಿಕೊಂಡ ಯುವ ಜನತೆ ರೀಲ್ಸ್​ ವ್ಯಾಮೋಹಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದೀಗ ಇದಕ್ಕೆ ಪೂರಕವೆಂಬಂತೆ ನಾಲ್ವರು ಅಪ್ರಾಪ್ತ ವಯಸ್ಕರು ರೀಲ್ಸ್​ ವಿಚಾರವಾಗಿ ನಡು ರಸ್ತೆಯಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

    ಉತ್ತರಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಇನ್​​ಸ್ಟಾಗ್ರಾಮ್​ನಲ್ಲಿ ಮಾಡಿ ಹಾಕಲಾಗಿದ್ದ ಕಮೆಂಟ್​ ವಿಚಾರವಾಗಿ ಈ ನಾಲ್ವರು ನಡು ರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಜನರು ಯಾರು ಸಹ ಇವರ ಜಗಳವನ್ನು ಬಿಡಿಸಲು ಮುಂದಾಗದಿರುವುದು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

    ಇದನ್ನೂ ಓದಿ: ಸಂಪೂರ್ಣ ಆಘಾತಕಾರಿ; ಕೆಕೆಆರ್​ ಆಟಗಾರನ ನಡೆಗೆ ಸುನೀಲ್​ ಗಾವಸ್ಕರ್ ಕೆಂಡ

    ಈ ಕುರಿತು ಪ್ರತಿಕ್ರಿಯಿಸಿರುವ ನೋಯ್ಡಾ ವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು, ಜಗಳವಾಡಿರುವ ನಾಲ್ವರು 18 ವರ್ಷಕ್ಕಿಂತ ಕೆಳಗಿನವರು ಎಂದು ತಿಳಿದು ಬಂದಿದ್ದು, ಇನ್​​ಸ್ಟಾಗ್ರಾಮ್​ನಲ್ಲಿನ ರೀಲ್ಸ್​ ಒಂದರ​ ವಿಚಾರವಾಗಿ ಈ ನಾಲ್ವರು ಕಿತ್ತಾಡಿಕೊಂಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಕೂಡಲೇ ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ.

    ವಿಚಾರಿಸಿದಾಗ ಇನ್​​ಸ್ಟಾಗ್ರಾಮ್​ನಲ್ಲಿನ ರೀಲ್ಸ್​ ಒಂದರ ವಿಚಾರಕ್ಕೆ ಜಗಳವಾಡಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದ್ದು, ಬುದ್ದಿವಾದ ಹೇಳಿ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ನೋಯ್ಡಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts