ಮೂರು ವರ್ಷಗಳಲ್ಲಿ 27 ಕೆಜಿ ಗೂ ಹೆಚ್ಚು ತೂಕ ಕಳೆದುಕೊಂಡ ಮಹಿಳೆ! ಏನಿದರ ರಹಸ್ಯ | Weight loss

untitled-design-2025-09-24t134259091-68d3a8273b2c4
Published on

Weight loss: ಇಂದಿನ ದಿನಗಳಲ್ಲಿ ಹಲವಾರು ಜನರು ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ತೂಕ ಇಳಿಸಿಕೊಳ್ಳುವುದು ಎಂದಿಗೂ ಸುಲಭದ ಕೆಲಸವಲ್ಲ. ಶಿಸ್ತು ಮತ್ತು ಸ್ಥಿರತೆ ಮುಖ್ಯವಾದರೂ, ನಿಯಮಿತ ವ್ಯಾಯಾಮ ಮತ್ತು ಪೌಷ್ಟಿಕ ಆಹಾರವು ಮತ್ತೆ ಆಕಾರ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನೀವೇನಾದರೂ ಹೆಚ್ಚುವರಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ವೈದ್ಯೆ ಭಾವನಾ ಆನಂದ್ ನಿಮಗಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಇವುಗಳನ್ನು ಅನುಸರಿಸಿ ತೂಕ ಕಳೆದುಕೊಳ್ಳಿ.

ಇತ್ತೀಚೆಗೆ ಭಾವನಾ ಆನಂದ್ ಅವರು ಮೂರು ವರ್ಷಗಳಲ್ಲಿ 27.4 ಕೆಜಿ ತೂಕ ಇಳಿಸಿಕೊಳ್ಳಲು ತಮಗೆ ಸಹಾಯ ಮಾಡಿದ ಮೂರು ಅಭ್ಯಾಸಗಳನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್​ 2022 ರಲ್ಲಿ 84 ಕೆಜಿ ಇದ್ದ ಅವರು 2025 ರಲ್ಲಿ 56.6 ಕೆಜಿ ಗೆ ಇಳಿದಿದ್ದೇನೆ. ಈ 3 ಅಭ್ಯಾಸಗಳು ನನ್ನ ಜೀವನವನ್ನು ಬದಲಾಯಿಸಿದವು ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

27 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡಿದ್ದು ಹೇಗೆ?

ಭಾವನಾ ಅವರು ಮಾಡಿದ ವಿಡಿಯೋದಲ್ಲಿ ಮಾತನಾಡಿದ ಅವರು, ಹಲವಾರು ಜನರು ನಾನು ಹೇಗೆ ಕಡಿಮೆ ತೂಕಕ್ಕೆ ರೂಪಾಂತರಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದೀರಿ. ಹಾಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ಸರಿ ಬನ್ನಿ ನಾನು ಅನುಸರಿಸುವ ಮೂರು ಅಂಶಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ. ಈ ಅಭ್ಯಾಸಗಳು ನನಗೆ ಶಾರ್ಟ್​ಕಟ್​ ಆಗಿದಿಲ್ಲ ಬದಲಾಗಿ ಜೀವನ ಶೈಲಿಯಾಗಿತ್ತು ಎಂದು ತಿಳಿಸಿದ್ದಾರೆ.

1. ವ್ಯಾಯಾಮ ದಿನಚರಿ

ಭಾವನಾ ಆನಂದ್ ಅವರ ಪ್ರಕಾರ, ಪ್ರಗತಿಶೀಲ ಓವರ್‌ಲೋಡ್‌ನೊಂದಿಗೆ ಪ್ರತಿರೋಧ ತರಬೇತಿಯು ಅವರ ತೂಕ ಇಳಿಸುವ ಪ್ರಯಾಣದಲ್ಲಿ ಗಣನೀಯವಾಗಿ ಸಹಾಯ ಮಾಡಿದೆ. ನಾನು ನನ್ನ ವ್ಯಾಯಾಮವನ್ನು ಟ್ರ್ಯಾಕ್ ಮಾಡುತ್ತೇನೆ ಮತ್ತು ಅದು ಕಾಲಾನಂತರದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

2. ಪ್ರೋಟೀನ್ ಭರಿತ ಊಟಗಳ ಸೇವನೆ

ವ್ಯಾಯಾಮಗಳ ಬಗ್ಗೆ ತಿಳಿಸಿದ ನಂತರ ಅವರು, ಪ್ರತಿದಿನ ಪ್ರೊಟೀನ್​ ಪ್ಯಾಕ್​ ಇರುವಂತಹ ಆಹಾರ ಸೇವನೆ ಮಾಡುವುದರ ಬಗ್ಗೆ ಮಾಹಿತಿ ಹಂಚಿಕೊಂಡರು. ಪ್ರೋಟೀನ್-ಭರಿತ ಭಕ್ಷ್ಯಗಳು "ಸ್ನಾಯುಗಳ ಬೆಳವಣಿಗೆ, ಚೇತರಿಕೆ ಮತ್ತು ಒಟ್ಟಾರೆ ಪೌಷ್ಟಿಕಾಂಶದ ಸಮತೋಲನಕ್ಕೆ ಬಹಳ ಮುಖ್ಯ" ಎಂದು ಹೇಳಿದರು.

3. ಸರಿಯಾದ ನಿದ್ರೆಯ ದಿನಚರಿ ಅನುಸರಿಸಿ

ಭಾವನಾ ಆನಂದ್ ಅವರು ಕೊನೆಯಲ್ಲಿ ಜೀವನಶೈಲಿ ಬದಲಾವಣೆಯು ದಿನಚರಿಯನ್ನು ಅನುಸರಿಸಿತು. ಅದು ಅವರಿಗೆ "ಗೇಮ್-ಚೇಂಜರ್" ಎಂದು ಅವರು ಹೇಳಿಕೊಂಡರು. ಪ್ರತಿನಿತ್ಯ ಬೇಗ ಮಲಗುವುದು, ಬೇಗ ಊಟ ಮಾಡುವುದು, ಬೇಗ ಏಳುವುದು ನನ್ನ ದೇಹವು ನಿಗದಿತ ದಿನಚರಿಯನ್ನು ಅನುಸರಿಸಲು ಮತ್ತು ಯಂತ್ರದಂತೆ ಕೆಲಸ ಮಾಡಲು ಸಹಾಯ ಮಾಡಿತು. ಇದು ದೇಹಕ್ಕೆ ಹೆಚ್ಚು ಅಗತ್ಯವಿರುವ ಚೇತರಿಕೆಗೆ ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದ್ದಾರೆ.

ಈ ಹಿಂದೆ, ಭಾವನಾ ಆನಂದ್ ತಮ್ಮ ಮಹಿಳಾ ಅನುಯಾಯಿಗಳಿಗೆ 30 ವರ್ಷಗಳ ನಂತರ ಸ್ನಾಯು ನಷ್ಟದಿಂದ ಕಳೆದುಹೋದ ಶಕ್ತಿಯನ್ನು ಹೇಗೆ ಮರಳಿ ಪಡೆಯಬೇಕು ಎಂದು ಮಾರ್ಗದರ್ಶನ ನೀಡಿದ್ದರು.

ಮಹಿಳೆಯರಾದ ನಾವು 30 ವರ್ಷಗಳ ನಂತರ ಸ್ನಾಯುಗಳನ್ನು ಕಳೆದುಕೊಳ್ಳುತ್ತೇವೆ. 35 ವರ್ಷಗಳ ನಂತರ ನಮ್ಮ ಶಕ್ತಿ ಕಡಿಮೆಯಾಗುತ್ತದೆ. ಮತ್ತು ಇದು ನಾವು ಕೆಲಸ ಮಾಡುವುದರಿಂದ ಮಾತ್ರವಲ್ಲ. ಇದು ಹಾರ್ಮೋನುಗಳ ಬದಲಾವಣೆಯಿಂದಲೂ ಆಗುತ್ತದೆ. ನಾವು ಸ್ನಾಯುಗಳನ್ನು ಕಳೆದುಕೊಳ್ಳುತ್ತಿರುವುದರಿಂದ ನಮ್ಮ ಚಯಾಪಚಯ ಕ್ರಿಯೆಯೂ ನಿಧಾನಗೊಳ್ಳುತ್ತದೆ. ಆದರೆ ಇಲ್ಲಿ ಒಳ್ಳೆಯ ಸುದ್ದಿ ಇದೆ. ಶಕ್ತಿ ತರಬೇತಿ, ಹೆಚ್ಚಿನ ಪ್ರೋಟೀನ್ ಊಟ ಮತ್ತು ಉತ್ತಮ ನಿದ್ರೆ ನಿಮ್ಮ ಮಹಾಶಕ್ತಿಗಳು. ಈ ಬದಲಾವಣೆಗಳನ್ನು ಸ್ವೀಕರಿಸಬೇಡಿ ಬದಲಿಗೆ ಅವುಗಳಿಗೆ ಹೊಂದಿಕೊಳ್ಳಿ ಎಂದು ಮಾರ್ಗದರ್ಶನ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net