ಅವಳ ಕಾರಣದಿಂದಲೇ ನನ್ನ ಹೆಂಡತಿ ಓಡಿ ಹೋದಳು... ಮೈದುನನಿಂದ ಅತ್ತಿಗೆಯ ಬರ್ಬರ ಹತ್ಯೆ| Man killed Sister in Law

untitled-design-2025-09-24t124520651-68d39ab7e70d9
Published on

Man killed Sister in Law: ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ಓಡಿಹೋಗಲು ಸಹಾಯ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತ ಪಡಿಸಿದ ವ್ಯಕ್ತಿಯೊಬ್ಬ ಅತ್ತಿಗೆಯನ್ನು ಕತ್ತಿಯಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯ ಖುಯಾದಲ್ಲಿ ಮಂಗಳವಾರ (ಸೆಪ್ಟೆಂಬರ್​ 22) ನಡೆದಿದೆ.

ಆರೋಪಿಯನ್ನು ಇಸ್ತೇಕರ್​ ಅಹ್ಮದ್​ (49) ಗಾಜಿಯಾಬಾದ್​ನ ಲೋನಿ ನಿವಾಸಿ ಎಂದು ತಿಳಿಸಲಾಗಿದೆ. ಬೌನ್ಸರ್​ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ನುಸ್ರತ್ (39)​ ಅವರನ್ನು ಈತ ಕತ್ತಿಯಿಂದ ಕೊಲೆ ಮಾಡಿದ ನಂತರ ತೀವ್ಆರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಹಾಗೆಯೇ ಈ ವೇಳೆ ಆಕೆಯ ಮಗಳಾದ ಸಾನಿಯಾಳ (20) ಬೆರಳನ್ನು ಕತ್ತರಿಸಿದ್ದಾನೆ ಹಾಗೂ ಇನ್ನೊಬ್ಬ ಸಂಬಂಧಿ ಅಕ್ಬರಿ (42) ತಲೆಗೆ ಬಲವಾದ ಹೊಡೆತ ಬಿದ್ದಿದೆ ಎಂದು ವರದಿಯಾಗಿದೆ.

ದೂರು ಏನು?

ಪೊಲೀಸರ ಪ್ರಕಾರ, ಮಂಗಳವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಇಸ್ತೇಕರ್​ ಟಿಫಿನ್​ ಬಾಕ್ಸ್​ನಲ್ಲಿ ಕತ್ತಿಯನ್ನು ಮುಚ್ಚಿಟ್ಟುಕೊಂಡು ಬಂದಿದ್ದಾನೆ. ಆ ಸಮಯದಲ್ಲಿ ಮಲಗಿದ್ದ ನುಸ್ರತ್ ಎಚ್ಚರಗೊಂಡು ಅವನಿಗೆ ಚಹ ನೀಡಲು ಬಂದಾಗ ಈತ ಆಯುಧವನ್ನು ತೆಗೆದುಕೊಂಡು ಆಕೆಯ ಕುತ್ತಿಗೆ, ಸೊಂಟ, ಬೆನ್ನಿನ  ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದಾನೆ.

ಈ ವೇಳೆ ಮಗಳು ಮಧ್ಯಪ್ರವೇಶಿಸಲು ಬಂದಾಗ , ಆರೋಪಿ ಆಕೆಯ ಒಂದು ಬೆರಳನ್ನು ಕತ್ತರಿಸಿದ್ದಾನೆ. ಹಾಗೆಯೇ ನುಸ್ರತ್​ ಅತ್ತಿಗೆ ಅಕ್ಬರಿ ಮೇಲೂ ಹಲ್ಲೆ ನಡೆಸಿ ತಲೆ ಮತ್ತು ಕುತ್ತಿಗೆಗೆ ಹೊಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಇಸ್ತೇಕರ್​ ಅಹ್ಮದ್​​ನ್ನು ಕುಟುಂಬ ಸದಸ್ಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಅಪರಾಧದ ಹಿಂದಿನ ಉದ್ದೇಶವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದರು.

ಮೃತ ನುಸ್ರತ್ ಅವರ ಪತಿ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರು ತಮ್ಮ ಹೆಣ್ಣುಮಕ್ಕಳನ್ನು ಪೋಷಿಸುವ ಸಲುವಾಗಿ ಬೌನ್ಸರ್ ಆಗಿ ಕೆಲಸ ತೆಗೆದುಕೊಳ್ಳುವ ಮೊದಲು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net