More

    ಅನುಮಾನ ಬಂದು ಬಾತ್​​ರೂಮ್​ನಲ್ಲಿನ ಕನ್ನಡಿ ತೆಗೆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​..!

    ನ್ಯೂಯಾರ್ಕ್​: ಅಮೆರಿಕ ನ್ಯೂಯಾರ್ಕ್​ ಮೂಲದ ಮಹಿಳೆಯೊಬ್ಬಳ ತನ್ನ ಮನೆಯೊಳಗೆ ಬೆರಗಾಗಿಸುವ ನಿಗೂಢವೊಂದನ್ನು ಪತ್ತೆಹಚ್ಚಿದ್ದಾರೆ. ಆಕೆಯ ಬಾತ್​ರೂಮ್​ನಲ್ಲಿರುವ ಕನ್ನಡಿ ಹಿಂದಿನ ರಹಸ್ಯ ಕಂಡು ಸ್ವತಃ ಆಕೆಯೇ ಹುಬ್ಬೇರಿಸಿದ್ದಾಳೆ.

    ಸಮಂತಾ ಹಾರ್ಟೋಸ್​ ಎಂಬಾಕೆ ತನ್ನ ಸಂಶೋಧನೆಯನ್ನು ವಿಡಿಯೋ ರೆಕಾರ್ಡ್​ ಮಾಡಿದ್ದು, ಸರಣಿ ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

    ನಗರದಲ್ಲಿ ಯಾವುದೇ ಲಾಭೋದ್ದೇಶವಿಲ್ಲದ ಕೆಲಸ ಮಾಡುವ ಹಾರ್ಟೋಸ್​, ಮೊದಲ ವಿಡಿಯೋದಲ್ಲಿ ತನ್ನ ಬಾತ್​ರೂಮ್​ ಒಳಗೆ ಹೇಗೆ ತಂಪಾದ ಗಾಳಿ ಬೀಸುತ್ತದೆ ಎಂದು ಸಂಶೋಧಿಸುಲು ಮುಂದಾಗಿದ್ದಾಗಿ ಹೇಳುತ್ತಾಳೆ. ಬಾತ್​ರೂಮ್​ ಒಳಗೆ ಯಾವುದೇ ಕಿಟಕಿ ಅಥವಾ ಕೂಲಿಂಗ್​ ಸಾಧನ ಇಲ್ಲದಿದ್ದರೂ ಗಾಳಿ ಹೇಗೆ ಬರುತ್ತಿದೆ ಎಂಬ ಕುತೂಹಲ ಬಗೆಹರಿಸಿಕೊಳ್ಳಲು ಮುಂದಾಗುತ್ತಾಳೆ.

    ಇದನ್ನೂ ಓದಿರಿ: ಭಾರತದಲ್ಲಿ ಪ್ರತಿ ವ್ಯಕ್ತಿ ಒಂದು ವರ್ಷಕ್ಕೆ ಪೋಲು ಮಾಡುವ ಆಹಾರ ಪ್ರಮಾಣ ಎಷ್ಟು ಗೊತ್ತಾ?

    ತನ್ನ ಕೂದಲು ಹಾರಾಡುವಷ್ಟು ಗಾಳಿ ಬಾತ್​ರೂಮ್​ನಲ್ಲಿ ಬರುತ್ತಿರುತ್ತದೆ. ಅದರ ಪತ್ತೆಯನ್ನು ಹುಡುಕಿ ಹೊರಾಟಾಗ ಸಿಂಕ್​ ಮೇಲಿನ ಕನ್ನಡಿಯಿಂದ ಗಾಳಿ ಬರುತ್ತಿರುವುದು ಹಾರ್ಟೋಸ್​ಗೆ ತಿಳಿಯುತ್ತದೆ. ಆದರೆ, ಅದರ ಹಿಂದೆ ಏನಿರಬಹುದು ಎಂದು ಆಕೆಗೂ ಸಹ ಊಹಿಸಲು ಸಾಧ್ಯವಿರುವುದಿಲ್ಲ. ಆದರೆ, ಕನ್ನಡಿಯನ್ನು ತೆಗೆದಾಗ ಅದರ ಹಿಂದೆ ದೊಡ್ಡ ರಂಧ್ರವೊಂದು ಕಾಣಿಸುತ್ತದೆ. ಅದರ ಒಳಗೆ ಕತ್ತಲ ಕೋಣೆಯೊಂದು ಪತ್ತೆಯಾಗುತ್ತದೆ. ​

    ಇದಾದ ಬಳಿಕ ಒಳಗೆ ಏನಿದೆ ಎಂದು ತಿಳಿಯಲು ಮತ್ತಷ್ಟು ಸಂಶೋಧನೆ ಮಾಡಲು ಮುಂದಾಗುತ್ತಾಳೆ. ಮುಖಕ್ಕೆ ಮಾಸ್ಕ್​ ಮತ್ತು ಕೈಗಳಿಗೆ ಗ್ಲೌಸ್​ ಹಾಕಿಕೊಂಡು ಹಾರ್ಟೋಸ್​ ಕತ್ತಲೆ ಕೋಣೆಗೆ ಎಂಟ್ರಿ ಕೊಡುತ್ತಾಳೆ. ಆದರೆ, ಈ ವೇಳೆ ಆಕೆಗೆ ಅಚ್ಚರಿಯೊಂದು ಎದುರಾಗುತ್ತದೆ. ಕೇವಲ ಒಂದೇ ಒಂದು ಕೋಣೆಯಲ್ಲ ಬದಲಾಗಿ ಇಡೀ ಅಪಾರ್ಟ್​ಮೆಂಟ್​ ಆಕೆಗೆ ಕಾಣಸಿಗುತ್ತದೆ.

    ಬಳಿಕ ಒಂದೊದಾಗಿ ಆಕೆ ವಿಡಿಯೋದಲ್ಲಿ ಪರಿಚಯಿಸುತ್ತಾ ಹೋಗುತ್ತಾಳೆ. ಯಾರಾದರೂ ಇರಬಹುದೆಂದು ನಾನು ನಿರೀಕ್ಷೆ ಮಾಡಿದ್ದೆ. ಆದರೆ, ವಿಶೇಷವಾಗಿ ಅಲ್ಲಿ ನೀರಿನ ಬಾಟಲ್​ ಇತ್ತು ಎಂದು ಹಾರ್ಟೋಸ್​ ಹೇಳಿದ್ದಾರೆ. ಇದೀಗ ಹಾರ್ಟೋಸ್​ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಲಕ್ಷಾಂತರ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಕರೊನಾಗೆ ನಲುಗಿದ ಆರ್ಥಿಕತೆ: ಕೇಂದ್ರದ ಆದಾಯಕ್ಕೆ ಬರೆ, ರಾಜ್ಯಕ್ಕೆ ಹೊರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts