More

    ಭಾರತದಲ್ಲಿ ಪ್ರತಿ ವ್ಯಕ್ತಿ ಒಂದು ವರ್ಷಕ್ಕೆ ಪೋಲು ಮಾಡುವ ಆಹಾರ ಪ್ರಮಾಣ ಎಷ್ಟು ಗೊತ್ತಾ?

    ನವದೆಹಲಿ: ಭಾರತದಲ್ಲಿ ಪ್ರತಿವ್ಯಕ್ತಿಯಿಂದ ವಾರ್ಷಿಕ 50 ಕಿಲೋ, ಅಮೆರಿಕದಲ್ಲಿ 59 ಕಿಲೋ, ಚೀನಾದಲ್ಲಿ 64 ಕಿಲೋ ಆಹಾರ ಪೋಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್​ಇಪಿ) ಮತ್ತು ಡಬ್ಲ್ಯುಆರ್​ಎಪಿ ಒಟ್ಟಾಗಿ ಪ್ರಕಟಿಸಿದ ‘ಫುಡ್ ವೇಸ್ಟ್ ಇಂಡೆಕ್ಸ್ ರಿಪೋರ್ಟ್ 2021’ ತಿಳಿಸಿದೆ.

    ಜಾಗತಿಕವಾಗಿ 2019ರಲ್ಲಿ 93.10 ಕೋಟಿ ಟನ್ ಆಹಾರ ವ್ಯರ್ಥವಾಗಿದೆ. ಅಂದರೆ 40 ಟನ್ ತೂಕದ 2.30 ಕೋಟಿ ಟ್ರಕ್​ಗಳನ್ನು ಬಂಪರ್ ಟು ಬಂಪರ್ ತಾಗಿಸಿ ನಿಲ್ಲಿಸಿದರೆ ಇಡೀ ಭೂಮಿಯನ್ನು ವೃತ್ತಾಕಾರದಲ್ಲಿ ಏಳು ಸಲ ಸುತ್ತುವಷ್ಟು ಪ್ರಮಾಣದ್ದಾಗಿದೆ. ಇದರಲ್ಲಿ ಮನೆಗಳಲ್ಲಿ ಪೋಲಾದ ಆಹಾರ ಪ್ರಮಾಣ ಶೇ. 61, ಆಹಾರ ಸೇವೆಗಳಿಂದ ಪೋಲಾದ ಪ್ರಮಾಣ ಶೇ.26, ಬೇರೆ ಬೇರೆ ರೀತಿಯಾಗಿ ಚಿಲ್ಲರೆ ಪ್ರಮಾಣದಲ್ಲಿ ಪೋಲಾಗಿದ್ದು ಶೇ.13. ಇದೇ ರೀತಿ, ಭಾರತದಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರ ಪ್ರಮಾಣ ವಾರ್ಷಿಕ 6.87 ಕೋಟಿ ಟನ್ ಆಗಿದೆ.

    ಭಾರತದ ಮನೆಗಳಲ್ಲಿ ಪ್ರತಿ ವ್ಯಕ್ತಿ ವಾರ್ಷಿಕ ಪೋಲು ಮಾಡುವ ಆಹಾರ 50 ಕಿಲೋ ಅಥವಾ ಒಟ್ಟಾರೆ ಎಲ್ಲರೂ ಸೇರಿ ಮಾಡುವ ಆಹಾರ ಪೋಲು ಪ್ರಮಾಣ ವರ್ಷಕ್ಕೆ 6,87,60,163 ಟನ್. ಅಮೆರಿಕದಲ್ಲಿ ಈ ಪ್ರಮಾಣ ವರ್ಷಕ್ಕೆ 1,93,59,951 ಟನ್, ಚೀನಾದಲ್ಲಿ 9,16,46,213 ಟನ್ ಆಗಿದೆ. ಜಾಗತಿಕ ತಲಾ ಆದಾಯದ ಮಟ್ಟದಲ್ಲಿ ಗ್ರಾಹಕ ಸ್ತರದಲ್ಲಿ ವಾರ್ಷಿಕ ಪೋಲಾಗುವ ಆಹಾರ ಪ್ರಮಾಣ 121 ಕಿಲೋ, ಮನೆಗಳಲ್ಲಿ ಇದು 74 ಕಿಲೋ. ಜಗತ್ತಿನಲ್ಲಿ 69 ಕೋಟಿ ಜನರು 2019ರಲ್ಲಿ ಹಸಿವಿನಿಂದ ಕಂಗೆಟ್ಟಿದ್ದರು. ಇದು ಕೋವಿಡ್ 19 ಸಂಕಷ್ಟ ಕಾಲದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts