ಸಿನಿಮಾ

ಕತ್ರೀನಾ ಕೈಫ್​ಗೆ ವಿಚ್ಛೇದನ ಕೊಡ್ತಾರಾ ವಿಕ್ಕಿ ಕೌಶಲ್? ನಟ ಹೇಳಿದ್ದಿಷ್ಟು…

ಮುಂಬೈ: ಕೆಲವೊಮ್ಮೆ ಪತ್ರಕರ್ತರು ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ನಟರನ್ನು ಪರೀಕ್ಷಿಸುತ್ತಾರೆ. ಇತ್ತೀಚೆಗೆ ತಮ್ಮ ಮುಂಬರುವ ಚಮತ್ಕಾರಿ ಹಾಸ್ಯದ ‘ಜರಾ ಹಟ್ಟೆ ಜರಾ ಬಟ್ಟೆ’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವರದಿಗಾರರಿಂದ ವಿಕ್ಕಿ, ಟ್ರಿಕ್ಕಿ ಪ್ರಶ್ನೆ ಎದುರಿಸಿದರು.
 
ವಿಕ್ಕಿ ಮತ್ತು ಸಾರಾ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರದ ಟ್ರೈಲರ್ ಲವ್ವಿ-ಡವ್ವಿ ಹಂತದ ನಂತರ ದಂಪತಿಗಳು ವಿಚ್ಛೇದನಕ್ಕಾಗಿ ಹೋರಾಡುವುದನ್ನು ತೋರಿಸುತ್ತದೆ. ಅಲ್ಲಿಂದ ಒಂದು ಕ್ಯೂ ತೆಗೆದುಕೊಂಡು, ಒಬ್ಬ ವರದಿಗಾರರು ವಿಕ್ಕಿಗೆ ಉತ್ತಮ ನಟಿ ಸಿಕ್ಕರೆ ಕತ್ರಿನಾ ಕೈಫ್​ಗೆ ವಿಚ್ಛೇದನ ನೀಡುತ್ತೀರಾ ಎಂದು ಕೇಳಿದರು. ಕೆಲವು ಕ್ಷಣಗಳು, ವಿಕ್ಕಿ ಪ್ರಶ್ನೆಗೆ ಉತ್ತರಕ್ಕಾಗಿ ಪದಗಳನ್ನು ಹುಡುಕುತ್ತಾ ನಾಲಿಗೆ ಕಟ್ಟಿಕೊಂಡರು.
 
ಆಗ ಅವರು “ಸರ್, ಶಾಮ್ ಕೋ ಘರ್ ಭಿ ಜಾನಾ ಹೈ! ಐಸೇ ಐಸೇ ಟೇಢೆ ಮೇಢೆ ಸವಾಲ್ ಪುಚ್ ರಹೇ ಹೋ, ಬಚ್ಚಾ ಹು ಅಭಿ, ಬಡಾ ತೋ ಹೋನೇ ದೋ. ಕೈಸೇ ಜವಾಬ್ ದೋ ಇಸ್ಕಾ ಮೈ! ಇತ್ನಾ ಖತರ್ನಾಕ್ ಸವಾಲ್ ಪುಚಾ ಹೈ” ಎಂದು ತಮಾಷೆ ಮಾಡಿದರು. (ಕನ್ನಡಕ್ಕೆ ಭಾಷಾಂತರ: ಸರ್, ನಾನು ಸಂಜೆ ಮನೆಗೆ ಹಿಂತಿರುಗಬೇಕು. ನೀವು ಎಂತಹ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ, ನಾನು ತುಂಬಾ ಚಿಕ್ಕವನಾಗಿದ್ದೇನೆ. ನನ್ನನ್ನು ಬೆಳೆಯಲು ಬಿಡಿ. ಇದಕ್ಕೆ ನಾನು ಹೇಗೆ ಉತ್ತರಿಸಬೇಕು? ಎಂತಹ ಅಪಾಯಕಾರಿ ಪ್ರಶ್ನೆಯನ್ನು ನೀವು ಕೇಳಿದ್ದೀರಿ!”)
 
ನಂತರ ವಿಕ್ಕಿ ಅವರು ಕತ್ರಿನಾ ಅವರನ್ನು ತಾವು ಅನೇಕ ಜನ್ಮಗಳಲ್ಲಿ ಮದುವೆಯಾಗುವುದಾಗಿ ಸರಳವಾಗಿ ಪ್ರತಿಕ್ರಿಯಿಸಿದರು. (ಜನಮ್ ಜನಮ್ ತಕ್!)
 
ಈ ಸಮಾರಂಭದಲ್ಲಿ ವಿಕ್ಕಿ ಕತ್ರಿನಾ ಜತೆಗಿನ ತನ್ನ ವೈವಾಹಿಕ ಜೀವನವನ್ನು ‘ಕಂಪ್ಲೀಟ್ಲಿ ಸಾರ್ಟೆಡ್’ ಎಂದು ಕರೆದರು. ಈ ಬಗ್ಗೆ ಮಾತನಾಡಿದ ವಿಕ್ಕಿ, ‘ದೇವರು ಪ್ರತಿಯೊಬ್ಬರ ಜೀವನದಲ್ಲಿ ಯಾವಾಗಲೂ ಸಮತೋಲನವನ್ನು ಕಾಯ್ದುಕೊಳ್ಳುತ್ತಾನೆ. ನನ್ನ ಜೀವದಲ್ಲಿ ನಾನು ಕತ್ರಿನಾಳನ್ನು ಕಂಡುಕೊಂಡಿದ್ದೇನೆ. ಹಾಗಾಗಿ ನನ್ನ ರೀಲ್ ಜೀವನದಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಆದರೆ ನನ್ನ ನಿಜ ಜೀವನವು ಸಾರ್ಟೆಡ್​ ಆಗಿರುತ್ತದೆ. ಹಾಗಾಗಿ ನನ್ನದು ಸಮತೋಲನದ ಜೀವನ”
 
ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9, 2021 ರಂದು ರಾಜಸ್ಥಾನದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್