ಸಿನಿಮಾ

ಮಸೀದಿಯಿಂದ ಶ್ರೀಕೃಷ್ಣನ ಮೂರ್ತಿ ಉತ್ಖನನ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ನ್ಯಾಯಾಲಯ; ವಕ್ಫ್​ ಬೋರ್ಡ್​ಗೆ ನೋಟಿಸ್

ನವದೆಹಲಿ: ಈ ಮಸೀದಿಯ ಮೆಟ್ಟಿಲುಗಳ ಕೆಳಗೆ ಶ್ರೀಕೃಷ್ಣನ ಮೂರ್ತಿಯನ್ನು ಸಮಾಧಿ ಮಾಡಲಾಗಿದೆ ಎನ್ನಲಾಗಿದ್ದು ಇದೀಗ ಆ ಮೂರ್ಗತಿಯ ಉತ್ಖನನಕ್ಕೆ ನ್ಯಾಯಾಲಯ ಆದೇಶ ನೀಡಿದೆ.

ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲುಗಳ ಕೆಳಗೆ ಸಮಾಧಿ ಮಾಡಲಾಗಿದೆ ಎಂನ್ನಲಾಗಿರುವ ಕೇಶವದೇವರ ವಿಗ್ರಹವನ್ನು ಮರುಪಡೆಯಲು ಶ್ರೀ ಕೃಷ್ಣ ಜನ್ಮಭೂಮಿ ಸಂರಕ್ಷಿತ ಸೇವಾ ಟ್ರಸ್ಟ್‌ನ ಮನವಿಯನ್ನು ಅನುಮತಿಸಿ ಸ್ಥಳೀಯ ನ್ಯಾಯಾಲಯ, ಉತ್ತರಪ್ರದೇಶದ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಇತರ ಮಧ್ಯಸ್ಥಗಾರರಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಶ್ರೀಕೃಷ್ಣ ಜನ್ಮಭೂಮಿ ಸಂರಕ್ಷಿತ ಸೇವಾ ಟ್ರಸ್ಟ್​ನ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆ ಪರವಾಗಿ ಮೇ 11 ರಂದು ಅರ್ಜಿ ಸಲ್ಲಿಸಲಾಗಿತ್ತು. ಸೋಮವಾರ ಆಗ್ರಾದ ಶಾಹಿ ಮಸೀದಿಯ ಇಂತಾಝಾಮಿಯಾ ಸಮಿತಿ, ಛೋಟಿ ಮಸೀದಿ ದಿವಾನ್-ಎ-ಖಾಸ್, ಜಹನಾರಾ ಬೇಗಂ ಮಸೀದಿ ಆಗ್ರಾ ಕೋಟೆಯ ಕಾರ್ಯದರ್ಶಿ, ವಕ್ಫ್ ಮಂಡಳಿ ಅಧ್ಯಕ್ಷ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಕಾರ್ಯದರ್ಶಿಗೆ ನ್ಯಾಯಾಲಯ, ಪ್ರಕರಣಕ್ಕೆ ಮೇ ಅಂತ್ಯದೊಳಗೆ ಪ್ರತಿಕ್ರಿಯಿಸಲು ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಮಸೀದಿ ಬಳಿ ಜೆಡಿಎಸ್ ಅಭ್ಯರ್ಥಿ ಮೇಲೆ ಹಲ್ಲೆ ಆರೋಪ; ದೂರು ದಾಖಲು

ಮಥುರಾದ ಧಾರ್ಮಿಕ ಬೋಧಕರಾದ ದೇವಕಿನಂದನ್ ಠಾಕೂರ್ ಅವರು ಆಗ್ರಾದಲ್ಲಿ ಭಗವತ್ ಕಥಾದಲ್ಲಿ ಭಗವಾನ್ ಕೇಶವದೇವರ ವಿಗ್ರಹಗಳನ್ನು ಹಿಂದೂಗಳಿಗೆ ಹಿಂದಿರುಗಿಸಬೇಕೆಂದು ಪ್ರತಿಪಾದಿಸಿದ ಕೆಲ ವಾರಗಳ ನಂತರ ಈ ಬೆಳವಣಿಗೆಯು ನಡೆದಿದೆ. ದೇವಕಿನಂದನ್ ಠಾಕೂರ್, ಶ್ರೀ ಕೃಷ್ಣ ಜನ್ಮಭೂಮಿ ಸಂರಕ್ಷಿತ ಸೇವಾ ಟ್ರಸ್ಟ್‌ನ ಪೋಷಕರಾಗಿದ್ದಾರೆ.

“ಪ್ರತಿದಿನವೂ ಮುಸ್ಲಿಮರು ನಮಾಜ್‌ಗಾಗಿ ಮಸೀದಿಗೆ ಪ್ರವೇಶಿಸಿದಾಗ ವಿಗ್ರಹಗಳನ್ನು ತುಳಿಯುತ್ತಾರೆ, ಇದು ಹಿಂದೂ ಸಮಾಜಕ್ಕೆ ಅವಮಾನವಾಗಿದೆ. ಮೆಟ್ಟಿಲುಗಳನ್ನು ಅಗೆಯಲು ಮತ್ತು ದೇವರ ವಿಗ್ರಹಗಳನ್ನು ಮರುಪಡೆಯಲು ಅವಕಾಶ ನೀಡುವಂತೆ ಠಾಕೂರ್ ದೇವಕಿನಂದನ್ ಮಾಡಿದ ಮನವಿಗೆ ಮುಸ್ಲಿಮರು ಗಮನ ಕೊಡದ ಕಾರಣ, ನ್ಯಾಯಾಲಯದ ಮೊರೆ ಹೋಗುವುದು ಅಂತಿಮ ಮಾರ್ಗವಾಗಿದೆ ಎಂದು ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದರು.

ಇದನ್ನೂ ಓದಿ: ಅಖಂಡ ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ಟಿಕೆಟ್​ಗಾಗಿ ದೇಗುಲ, ಮಸೀದಿಯಲ್ಲಿ ವಿಶೇಷ ಪೂಜೆ

ಮಸೀದಿಯ ಮೆಟ್ಟಿಲುಗಳ ಕೆಳಗೆ ಸಮಾಧಿ ಮಾಡಿರುವ ವಿಗ್ರಹಗಳ ಬಗ್ಗೆ ತಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ದೇವಕಿನಂದನ್ ಠಾಕೂರ್​ ಹೇಳಿದ್ದಾರೆ. “ಔರಂಗಜೇಬನು 1670 ರಲ್ಲಿ ಕೇಶವದೇವನ ದೇವಾಲಯವನ್ನು ಕೆಡವಿ ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲುಗಳ ಕೆಳಗೆ ವಿಗ್ರಹವನ್ನು ಹೂಳಿದನು ಎಂದು ಸಾಬೀತುಪಡಿಸುವ ಅನೇಕ ಐತಿಹಾಸಿಕ ದಾಖಲೆಗಳಿವೆ. ಔರಂಗಜೇಬನ ಆಳ್ವಿಕೆಯ ಕಾಲದವರೂ ಸೇರಿದಂತೆ ಅನೇಕ ಇತಿಹಾಸಕಾರರು ತಮ್ಮ ಪುಸ್ತಕಗಳಲ್ಲಿ ಈ ಪ್ರಸಂಗವನ್ನು ವಿವರಿಸಿದ್ದಾರೆ. ಈ ವಿಗ್ರಹಗಳನ್ನು ಮರುಪಡೆಯಬೇಕು. ಆಗ ಅವುಗಳನ್ನು ಮಥುರಾಕ್ಕೆ ತೆಗೆದುಕೊಂಡು ಹೋಗಿ ಪೂಜಿಸಬಹುದು”ಎಂದು ಅವರು ಹೇಳಿದರು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿ, ಶಿವಲಿಂಗ: ವಿಚಾರಣೆ ನಡೆಯಲಿದೆಯೆ? ಎಲ್ಲರ ಚಿತ್ತ ಕೋರ್ಟ್​ನತ್ತ- ಬಿಗಿ ಬಂದೋಬಸ್ತ್​

ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ಬರೆದ ಪುಸ್ತಕದ ವಿಷಯಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಪಾಂಡೆ ಪ್ರತಿಪಾದಿಸಿದರು. ಒಗ್ಗಟ್ಟಿನಿಂದ, ಮೆಟ್ಟಿಲುಗಳನ್ನು ಅಗೆಯುವ ಮತ್ತು ಅವುಗಳನ್ನು ಮೊದಲಿನ ಸ್ಥಿತಿಗೆ ಮರುಸ್ಥಾಪಿಸುವ ಎಲ್ಲಾ ವೆಚ್ಚವನ್ನು ಟ್ರಸ್ಟ್ ಭರಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್