More

  ಮಸೀದಿ ಬಳಿ ಜೆಡಿಎಸ್ ಅಭ್ಯರ್ಥಿ ಮೇಲೆ ಹಲ್ಲೆ ಆರೋಪ; ದೂರು ದಾಖಲು

  ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಂದು ಮದ್ಯಾಹ್ನ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.  

  ಚಾಮರಾಜಪೇಟೆಯ ಜೆಡಿಎಸ್ ಅಭ್ಯರ್ಥಿ ಸಿ.ಗೋವಿಂದರಾಜು ಎನ್ನುವವರು ಇಂದು ಶುಕ್ರವಾರ ಆಗಿರುವ ಹಿನ್ನಲೆಯಲ್ಲಿ ಮಸೀದಿ ಬಳಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಜತೆ ಸೇರಿಕೊಂಡು ಪಾಂಪ್ಲೆಂಟ್ಸ್ ಹಂಚುತ್ತಿದ್ದರು. ಈ ಸಂದರ್ಭ ಜೆಡಿಎಸ್ ಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದರು. ಆಗ ಇಲ್ಲಿಗೆ ಯಾಕೆ ಬಂದಿದ್ದೀರಾ ನೀವು ಅಂತ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದ್ದು ಕಾಂಗ್ರೆಸ್ ನವರು ಮಸೀದಿ ಕಟ್ಟಿದ್ದು ನೀವು ಯಾಕೆ ಬಂದಿದ್ದೀರಾ ಅಂತ ಪ್ರಶ್ನೆ ಕೇಳಿರುವ ಬಗ್ಗೆ ಆರೋಪಿಸಲಾಗಿದೆ

  ನಂತರ ಅಲ್ಲಿದ್ದ ಯುವಕರಿಂದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಗೋವಿಂದರಾಜು ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts