More

    ವಾಟ್ಸ್​ಆ್ಯಪ್​ನಲ್ಲಿ ಇನ್ನು ನಿಮ್ಮ ಖಾಸಗಿ ಚಾಟಿಂಗ್ ಸುರಕ್ಷಿತ! ಹೇಗೆ ಬಳಸೋದು?

    ನವದೆಹಲಿ: ಫೇಸ್​ಬುಕ್​ ಮಾತೃಸಂಸ್ಥೆ ಮೆಟಾ, WhatsAppಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಆ್ಯಪ್‌ನಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಖಾಸಗಿತನದ ಸುರಕ್ಷತೆಯನ್ನು ಹೆಚ್ಚಿಸಲು ವಾಟ್ಸಾಪ್‌ ಬಹುನಿರೀಕ್ಷಿತ ‘ಚಾಟ್ ಲಾಕ್ ಫೀಚರ್​ಅನ್ನು ಇದೀಗ ಲಾಂಚ್ ಮಾಡಿದೆ.

    ಈ ಹೊಸ ಫೀಚರ್​ ಮೂಲಕ ಬಳಕೆದಾರರು ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಬಹುದಾಗಿದೆ. ಅದಲ್ಲದೇ, ಇಲ್ಲಿ ಚಾಟ್​ಗಳನ್ನು ಪ್ರತ್ಯೇಕ ಪೋಲ್ಡರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಮೂಲಕ ವಾಟ್ಸ್​ಆ್ಯಪ್​ ತೆರೆದಾಗ ಅದರಲ್ಲಿ ಹೆಸರು ಮತ್ತು ಸಂದೇಶವನ್ನು ಮರೆಮಾಡುತ್ತದೆ ಹೊಸ ವೈಶಿಷ್ಟ್ಯ ಮರೆಮಾಡುತ್ತದೆ. ಈ ಚಾಟ್​ಅನ್ನು ಪಾಸ್​ವರ್ಡ್​ ಅಥವಾ ಫಿಂಗರ್​ಪ್ರಿಂಟ್​ ಬಳಸಿಯೇ ತೆರೆಯಬಹುದಾಗಿದೆ.

    ವಾಟ್ಸ್​ಆ್ಯಪ್​ನಲ್ಲಿ ಇನ್ನು ನಿಮ್ಮ ಖಾಸಗಿ ಚಾಟಿಂಗ್ ಸುರಕ್ಷಿತ! ಹೇಗೆ ಬಳಸೋದು? ವಾಟ್ಸ್​ಆ್ಯಪ್​ನಲ್ಲಿ ಇನ್ನು ನಿಮ್ಮ ಖಾಸಗಿ ಚಾಟಿಂಗ್ ಸುರಕ್ಷಿತ! ಹೇಗೆ ಬಳಸೋದು?

    ಮೆಟಾ ಸಂಸ್ಥೆ ಸಿಇಒ ಮಾರ್ಕ್ ಜುಕರ್‌ಬರ್ಗ್, ಫೇಸ್‌ಬುಕ್ ಪೋಸ್ಟ್‌ನಲ್ಲಿ ಚಾಟ್ ಲಾಕ್ ವೈಶಿಷ್ಟ್ಯವನ್ನು ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಟ್ಸಾಪ್‌ನಲ್ಲಿ ಲಾಕ್ ಆಗಿರುವ ಹೊಸ ಚಾಟ್‌ಗಳು ನಿಮ್ಮ ಸಂಭಾಷಣೆಗಳನ್ನು ರಕ್ಷಿಸಲಿದೆ ಎಂದು ಅವರು ಬರೆದಿದ್ದಾರೆ. ‘ಚಾಟ್ ಲಾಕ್ ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ, ಇದು ಬಳಕೆದಾರರು ತಮ್ಮ ಅತ್ಯಂತ ನಿಕಟ ಮತ್ತು ಖಾಸಗಿ ಸಂಭಾಷಣೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಹಾಯ ಮಾಡುವ ಹೊಸ ವೈಶಿಷ್ಟ್ಯವಾಗಿದೆ’ ಎಂದು ಜುಕರ್‌ಬರ್ಗ್ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

    ಇದರ ಉಪಯೋಗ ಯಾವಾಗ?

    ತಮ್ಮ ಫೋನನ್ನು ಕುಟುಂಬದ ಸದಸ್ಯರೊಂದಿಗೆ ಅಥವಾ ಬೇರೆಯವರೊಂದಿಗೆ ಹಂಚಿಕೊಳ್ಳಬೇಕಾದ ಸಂದರ್ಭ ಬಂದಾಗ ಈ ಫೀಚರ್​ ಉಪಯುಕ್ತವಾಗಿರುತ್ತದೆ ಎಂದು ಮಾರ್ಕ್ ಜುಕರ್​ಬರ್ಗ್ ಹೇಳಿದ್ದಾರೆ. ಫೋನ್​ ಇನ್ನೊಬ್ಬರ ಕೈಯಲ್ಲಿದ್ದಾಗ ಖಾಸಗಿ ಸಂದೇಶ ಬಂದರೆ ಎಂದು ಚಿಂತೆ ಮಾಡಬೇಕಿಲ್ಲ. ಚಾಟ್ ಲಾಕ್ ಆಗಿದ್ದರೆ, ಅದರ ಗೌಪ್ಯತೆ ಹಾಗೇ ಉಳಿಯಲಿದೆ.

    Android ಮತ್ತು iOS ಎರಡರಲ್ಲೂ ಲಭ್ಯ

    ಈ ವೈಶಿಷ್ಟ್ಯವು Android ಮತ್ತು iOS ಎರಡೂ ವಿಧದ ಫೋನ್‌ಗಳಲ್ಲಿ ಲಭ್ಯವಿರುತ್ತದೆ. ಇಲ್ಲಿಯವರೆಗೆ, ಬಳಕೆದಾರರು ಬಯೋಮೆಟ್ರಿಕ್ಸ್ ಅಥವಾ ಪಿನ್ ಕೋಡ್ ಬಳಸಿ WhatsApp ಅನ್ನೇ ಲಾಕ್ ಮಾಡಬಹುದಾಗಿತ್ತು. ಆದರೆ ಹೊಸ ಫೀಚರ್​ ಬಂದ ಮೇಲೆ ನಿರ್ದಿಷ್ಟ ಖಾಸಗಿ ಚಾಟ್‌ಗಳನ್ನು ಮತ್ತಷ್ಟು ಲಾಕ್​ ಮಾಡಲು ಬಳಕೆದಾರರಿಗೆ ವಾಟ್ಸ್​ಆ್ಯಪ್​ ಸಹಾಯ ಮಾಡಲಿದೆ.

    ಚಾಟ್​ ಲಾಕ್​ ಮಾಡುವುದು ಹೇಗೆ?

    ಮೊದಲಿಗೆ, ನೀವು WhatsAppನಲ್ಲಿ ಲಾಕ್​ ಮಾಡಬೇಕು ಎಂದಿರುವ ಚಾಟ್ ಅನ್ನು ಟ್ಯಾಪ್ ಮಾಡಬೇಕು. ಅಲ್ಲಿ ಚಾಟ್ ಲಾಕ್ ಆಯ್ಕೆಯು ಲಭ್ಯವಿರುತ್ತದೆ. ಅದನ್ನು ಕ್ಲಿಕ್ ಮಾಡುವ ಮೂಲಕ ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು. ಈಗ ಲಾಕ್ ಮಾಡಿದ ಚಾಟ್‌ಗಳನ್ನು ವೀಕ್ಷಿಸಲು, ಬಳಕೆದಾರರು ತಮ್ಮ ಇನ್‌ಬಾಕ್ಸ್ ಅನ್ನು ಕೆಳಕ್ಕೆ ಎಳೆಯಬೇಕು. ನಂತರ ಫೋನ್ ಪಾಸ್‌ವರ್ಡ್ ಅಥವಾ ಫಿಂಗರ್​ಪ್ರಿಂಟ್​ ಮೂಲಕ ಚಾಟ್​ ಲಾಕ್​ ತೆರೆಯಬೇಕು. ಅಲ್ಲಿ ಪ್ರತ್ಯೇಕವಾಗಿ ಲಾಕ್​ ಆಗಿರುವ ಎಲ್ಲಾ ಚಾಟ್​ಗಳೂ ಕಾಣಿಸಿಕೊಳ್ಳುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts