More

    ಜನರು ಕಟ್ಟುತ್ತಿದ್ದ ತೆರಿಗೆ ಹಣ ಲೂಟಿ ಮಾಡುತ್ತಿದ್ದ ಸೈಬರ್ ವಂಚಕನ ಬಂಧನ!

    ಶ್ರೀಕಿಗೂ ಇದೆ ಈತ ಮಾಡಿದ್ದ ಹಗರಣದ ಜತೆ ಸಂಬಂಧ!

    ಬೆಂಗಳೂರು: ಇದೀಗ CID ಪೊಲೀಸರು ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ದಿಲೀಪ್ ರಾಜೇಗೌಡ ಎಂದು ಗುರುತಿಸಲಾಗಿದ್ದು ಈ ಕಾರ್ಯಾಚರಣೆಯನ್ನು ಸಿಐಡಿ ಎಸ್​ಪಿ ಆಗಿರುವ ಎಂಡಿ ಶರತ್ ನೇತ್ರತ್ವದಲ್ಲಿ ನಡೆಸಲಾಗಿದೆ.

    ಈತ ಮಾಡಿದ್ದೇನು?

    ಈ ಖತರ್ನಾಕ್ ಕಿಲಾಡಿ, ಇನ್​ಕಮ್ ಟ್ಯಾಕ್ಸ್​ ವೆಬ್‌ಸೈಟ್​ನಲ್ಲಿನ ಲೋಪವನ್ನು ಪತ್ತೆ ಮಾಡಿದ್ದ. ಅವುಗಳನ್ನು ಬಗ್​ ಎಂದು ಕರೆಯಲಾಗುತ್ತದೆ. ಆ ಬಗ್​ ಮೂಲಕ ಆದಾಯ ತೆರಿಗೆ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ಐಟಿ ರೀಫಂಡ್ಸ್ ತನ್ನ ಖಾತೆಗೆ ಬರುವಂತೆ ಮಾಡಿದ್ದ. ಹೀಗೆ ಇನ್ಯಾರಿಗೋ ತಲುಪಬೇಕಿದ್ದ ಹಣವನ್ನು ಐಟಿ ಇಲಾಖೆಯಿಂದ ಲೂಟಿ ಮಾಡಿದ್ದು ಬರೋಬ್ಬರಿ 1,41,84,360 ರೂ. ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.

    ಈತ ಮೊದಲಿಗೆ ಐಟಿ ಇಲಾಖೆಯ ವೆಬ್​ಸೈಟ್​ನಲ್ಲಿದ್ದ ಲೋಪಗಳನ್ನು ಬಳಸಿಕೊಂಡು ತೆರಿಗೆ ಕಟ್ಟಿದವರಿಗೆ ರಿಫಂಡ್ ಮಾಡುವ ಖಾತೆಗಳನ್ನೇ ಅಲ್ಟರ್ ಮಾಡಿದ್ದ. ನಂತರ ಆದಾಯ ತೆರಿಗೆ ಕಟ್ಟಿದವರ ಹೆಸರಲ್ಲಿ ಬೇರೆಯದ್ದೇ ಬ್ಯಾಂಕ್ ಖಾತೆ ತೆರೆದು ನಕಲಿ ದಾಖಲೆಗಳ ಸಹಿತ ಕೆವೈಸಿ ಮಾಡುತ್ತಿದ್ದ. ಇದಾದ ಮೇಲೆ ಐಟಿ ಇಲಾಖೆ ನೀಡಿದ ರಿಫಂಡ್ ಹಣವನ್ನು ಆರೋಪಿ ತನ್ನ ಖಾತೆಗೆ ಬರುವಂತೆ ಮಾಡುತ್ತಿದ್ದ. ಹೀಗೆ ಈತ ಜನರ ಕೋಟಿ ಕೋಟಿ ಹಣವನ್ನು ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.

    ಮಾಡಿದ ಫ್ರಾಡ್​ಗೆ ಲೆಕ್ಕವೇ ಇಲ್ಲ!

    ಈತನನ್ನು ವಶಕ್ಕೆ ಪಡೆದ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದ ವೇಳೆ ಮತ್ತಷ್ಟು ಸೈಬರ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಇದೇ ರೀತಿ ಮಾಡಿ ಈತ ಮೂರು ಕೋಟಿ ಅರವತ್ತು ಲಕ್ಷ ಹಣವನ್ನು ಪಡೆದುಕೊಂಡಿದ್ದ. ವಿಚಾರಣೆ ವೇಳೆ ಬಾಜಾಜ್ ಕಾರ್ ಲೋನ್ ಫ್ರಾಡ್ ಮಾಡಿರುವುದು ಬೆಳಕಿಗೆ ಬಂದಿದೆ.

    ಹ್ಯಾಕರ್ ಶ್ರೀಕಿಗೂ ಈತ ಮಾಡಿದ್ದ ಹಗರಣಕ್ಕೂ ಇದೆ ಸಂಬಂಧ!

    ಅದಷ್ಟೇ ಅಲ್ಲದೇ ಈತ ಈಗಾಗಲೇ ಬಾಜಾಜ್ ಕಂಪನಿಗೆ ನಕಲಿ ದಾಖಲೆ ಸಲ್ಲಿಸಿ ಲೋನ್ ಪಡೆದು ವಂಚಿಸಿರುವುದು ಪತ್ತೆಯಾಗಿದೆ. ಕರ್ನಾಟಕ ಸರ್ಕಾರದ ಕಾವೇರಿ ಆನ್ಲೈನ್ ಪೋರ್ಟಲ್​ನಲ್ಲಿ ಈತ ಎಂಟ್ರಿ ಕೊಟ್ಟಿರುವುದೂ ಪತ್ತೆಯಾಗಿದೆ. ಈ ಕಾವೇರಿ ವೆಬ್ ಪೋರ್ಟಲ್​ಅನ್ನು ಆಸ್ತಿಗಳನ್ನು ರಿಜಿಸ್ಟರ್ ಮಾಡಲು ಬಳಸಿಕೊಳ್ಳಲಾಗುತ್ತದೆ. ಈ ಹಿಂದೆ ದಾಖಲಾಗಿದ್ದ ಈ ಕೇಸ್​ನಲ್ಲಿ ಶ್ರೀಕೃಷ್ಣ ಅಲಿಯಾಸ್ ಹ್ಯಾಕರ್ ಶ್ರೀಕಿಯನ್ನು ಕೂಡ ವಿಚಾರಣೆ ಮಾಡಲಾಗಿತ್ತು. ಕಾವೇರಿ ವೆಬ್ ಪೋರ್ಟಲ್​ನಿಂದ ಕೋಟ್ಯಾಂತರ ರೂ. ಸರ್ಕಾರದ ಹಣ ದುರ್ಬಳಕೆ ಅರೋಪ ಈ ಹಿಂದೆಯೇ ಕೇಳಿ ಬಂದಿತ್ತು. ಸದ್ಯ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts