ಅಮೆರಿಕಾ: ಅಮೆರಿಕಾ ಲಾಸ್ ಎಂಜಲ್ಸ್ನಲ್ಲಿ ಹಬ್ಬಿರುವ ಕಾಡ್ಗಿಚ್ಚಿಂದಾಗಿ 5 ಜನರು ಬಲಿಯಾಗಿದ್ದಾರೆ. ಅಲ್ಲದೇ ಬೆಂಕಿಯ ಕೆನ್ನಾಲಿಗೆ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಈ ಪರಿಣಾಮದಿಂದ 1 ಲಕ್ಷ ಜನರನ್ನು ತುರ್ತು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಗುರುವಾರ ವರದಿಯಾಗಿದೆ.
ಬೆಂಕಿಯ ಕೆನ್ನಾಲಿಗೆಗೆ 1200ಕ್ಕೂ ಹೆಚ್ಚು ಮನೆಗಳು ಸುಟ್ಟು ಕರಲಾಗಿವೆ. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಲಕ್ಷಾಂತರ ಕೋಟಿ ಮೌಲ್ಯದ ನಷ್ಟವನ್ನು ಈ ಕಾಡ್ಗಿಚ್ಚು ಈಗಾಗಲೇ ಉಂಟು ಮಾಡಿದ್ದು, 2000 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಗಾಳಿಯ ವೇಗ ಹೆಚ್ಚಾಗಿರುವ ಕಾರಣ ಕಾಡ್ಗಿಚ್ಚು ಬಲು ಬೇಗನೆ ಹಬ್ಬುತ್ತಿದ್ದು, ಬೆಂಕಿ ಇನ್ನೂ ತಹಬದಿಗೆ ಬಂದಿಲ್ಲ ಎನ್ನಲಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ಲಾಸ್ ಎಂಜಲ್ಸ್ನಲ್ಲಿ ಕಾಡ್ಗಿಚ್ಚಿಗೆ ಐವರು ಬಲಿ; 1 ಲಕ್ಷ ಜನರ ತುರ್ತು ಸ್ಥಳಾಂತರ!
ರಾಷ್ಟ್ರೀಯ ಹವಾಮಾನ ಸೇವೆಯು, ಅತ್ಯಂತ ನಿರ್ಣಾಯಕ ಬೆಂಕಿಯ ಹವಾಮಾನ ಪರಿಸ್ಥಿತಿಗಳು, ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯ ಭಾಗಗಳಿಗೆ ಮುಂದಿನ ದಿನ ನಿರ್ಣಾಯಕ ಪರಿಸ್ಥಿತಿಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದೆ.
ಕಾಡ್ಗಿಚ್ಚಿಗೆ ಕಾರಣ
ಪ್ರಬಲವಾದ ಗಾಳಿಯು ವಾಯುವ್ಯ ಲಾಸ್ ಏಂಜಲೀಸ್‌ಗೆ ಅಪ್ಪಳಿಸಿದ್ದರಿಂದ ಪಾಲಿಸೇಡ್ಸ್ ಬೆಂಕಿಯು ದೊಡ್ಡ ಗಾತ್ರದಲ್ಲಿ ಸ್ಫೋಟಿಸಿದೆ. ಪೆಸಿಫಿಕ್ ಪಾಲಿಸೇಡ್ಸ್‌ನ ಶ್ರೀಮಂತ ಸಮುದಾಯದಲ್ಲಿ ಕನಿಷ್ಠ 30,000 ನಿವಾಸಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಲಾಗಿದೆ. ಈಟನ್, ಹರ್ಸ್ಟ್, ಲಿಡಿಯಾ ಸೇರಿ ವಿವಿಧ ಪ್ರದೇಶಗಳಿಗೆ ಮರುದಿನ ಸೂರ್ಯಾಸ್ತದ ವೇಳೆ ವರೆಗೂ(ಶುಕ್ರವಾರ) ಬೆಂಕಿಯೂ ಉರಿಯುತ್ತಿದೆನ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
2026ರ ಪಿಫಾ ವಿಶ್ವಕಪ್ ನನ್ನ ಕೊನೆಯದು: ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಹೇಳಿಕೆ | Neymar