ಬ್ರೆಜಿಲ್: 2026ರಲ್ಲಿ ನಡೆಯುವ ಪಿಫಾ ಫುಟ್ಬಾಲ್ ವಿಶ್ವಕಪ್ಗೆ ನಡೆಯುವ ಪಂದ್ಯಗಳಲ್ಲಿನ ನನ್ನ ಕೊನೆ ಆಟ ಎಂದು ಫುಟ್ಬಾಲ್ ಖ್ಯಾತ ಆಟಗಾರ ಬ್ರೆಜಿಲ್ನ ನೇಮರ್(Neymar) ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಸಿಎನ್ಎನ್ ವರದಿ ಮಾಡಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನೇಮರ್,’’ ಇದು ನನ್ನ ಕೊನೆಯ ವಿಶ್ವಕಪ್, ಇದು ನನ್ನ ಕೊನೆಯ ಶಾಟ್ ಮತ್ತು ಇದು ನನ್ನ ಕೊನೆಯ ಆಟ ಎಂದು ನನಗೆ ತಿಳಿದೆ ಎಂದು ಹೇಳುವ ಮೂಲಕ 2026 ವಿಶ್ವಕಪ್ ಬಳಿಕ ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸುವ ಬಗ್ಗೆ 32ರ ಹರೆಯದ ನೇಮರ್ ಮುಕ್ತವಾಗಿ ಹೇಳಿಕೊಂಡಿದ್ದಾರೆ’’.
ಯುವ ಆಟಗಾರರ ಮೇಲೆ ನಂಬಿಕೆ
ತಂಡದಲ್ಲಿ ಉದಯೋನ್ಮುಖ ಆಟಗಾರರ ಮೇಲೆ, ಯುವ ಆಟಗಾರರ ಮೇಲೆ ನನಗೆ ಹೆಚ್ಚಿನ ನಂಬಿಕೆ ಇದೆ. ನಾವು ಇರಲು ಬಯಸುವ ಸ್ಥಿತಿಯಲ್ಲಿ ನಾನು ಇಲ್ಲನ ಎಂದು ಹೇಳಿದ್ದಾರೆ.
ನಾವು ಒಟ್ಟಿಗೆ ಉತ್ತಮ ಆಟವನ್ನು ಸಾಧಿಸಬಹುದು ಎಂದು ನಾನು ಭಾವಿಸುತ್ತೇನೆ. ವಿಶ್ವಕಪ್ ತಲುಪಲು ಸರಿಯಾದ ಕೆಲಸಗಳನ್ನು ಮಾಡಲು ನಮಗೆ ಒಂದು ವರ್ಷ ಅಥವಾ ಒಂದೂವರೆ ವರ್ಷ ಕೆಲಸವಿದೆ. ಇದರಿಂದ ನಾವು ಅತ್ಯುತ್ತಮ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೇಲ್ದರ್ಜೆಗೇರಲಿದೆ ಶ್ರೀರಂಗಪಟ್ಟಣ-ಅರಸಿಕೆರೆ ಹೆದ್ದಾರಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ
ನೇಮರ್ ಫುಟ್ಬಾಲ್ ವಿಶ್ವಕಪ್ನಲ್ಲಿ ಬ್ರೆಜಿಲ್ ಪರ ಆಟವಾಡಿದ್ದು, ನಾಲ್ಕು ಬಾರಿ ವಿಶ್ವಕಪ್ನಲ್ಲಿ ಅರ್ಹತಾ ಪಡೆದಿದೆ. 2023ರಲ್ಲಿ ಉರುಗ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಮೊಣಕಾಲು ನೋವಿನಿಂದ ಹೊರ ಉಳಿದ ನೇಮರ್, ಬಳಿಕ ಶಸ್ತ್ರ ಚಿಕಿತ್ಸೆ ಕಾರದಿಂದ ಒಂದುವರೆ ವರ್ಷಗಳ ಕಾಲ ಫುಟ್ಬಾಲ್ ಆಟದಿಂದ ದೂರ ಉಳಿದಿದ್ದರು. ಸದ್ಯ ಸೌದಿ ಪ್ರೊ ಲೀಗ್‌ನ ಅಲ್ ಹಿಲಾಲ್‌ನೊಂದಿಗೆ ಕ್ಲಬ್ ಫುಟ್‌ಬಾಲ್ ಆಡುತ್ತಿದ್ದಾರೆ.(ಏಜೆನ್ಸೀಸ್)
ಕ್ಷೀಣಿಸುತ್ತಿರುವ ಜನನ ದರ: ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ ಮಹಿಳೆಯರಿಗೆ 81 ಸಾವಿರ ರೂ. ನಗದು ಘೋಷಿಸಿದ ಸರ್ಕಾರ