ಕ್ಷೀಣಿಸುತ್ತಿರುವ ಜನನ ದರ: ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ ಮಹಿಳೆಯರಿಗೆ 81 ಸಾವಿರ ರೂ. ನಗದು ಘೋಷಿಸಿದ ಸರ್ಕಾರ

dk - 2025-01-09T163524.970
Published on

ರಷ್ಯಾ: ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದರೆ ಅಂತಹ ಮಹಿಳೆಯರಿಗೆ 81 ಸಾವಿರ ರೂ. ನಗದು ಬಹುಮಾನ ಕೊಡುವುದಾಗಿ ರಷ್ಯಾ ಸರ್ಕಾರ ಹೊಸ ವರ್ಷಕ್ಕೆ ಹೊಸ ಘೋಷಣೆಯೊಂದನ್ನು ಗುರುವಾರ ಘೋಷಿಸಿದೆ.

ಹೌದು, ರಷ್ಯಾದಲ್ಲಿ ಪುಟ್ಟ ಮಕ್ಕಳ ಜನನ ಮರಣ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಶಿಶುಗಳ ಜನನ ದರ ಕ್ಷಿಣೀಸುತ್ತಿರವುದಾಗಿ ವರದಿಗಳು ಉಲ್ಲೇಖಿಸಿದ ಬೆನ್ನಲ್ಲೆ ರಷ್ಯಾ ಸರ್ಕಾರ ಮಹತ್ತರ ನಿರ್ಧಾರವನ್ನು ಕೈಗೊಂಡಿದೆ. ಜನನ ಪ್ರಮಾಣ ಅಧಿಕಗೊಳಿಸುವ ಕಾರಣದಿಂದಾಗಿ ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ ಮಹಿಳೆಯರಿಗೆ (1,00,000 ರೂಬೆಲ್ಸ್​) 81 ಸಾವಿರ ರೂ. ನಗದು ಬಹುಮಾನ ನೀಡುವ ಮೂಲಕ ಜನನ ಪ್ರಮಾಣ ಏರಿಕೆಗೆಗೆ ಪ್ರೋತ್ಸಾಹ ಸರ್ಕಾರ ನೀಡುತ್ತಿದೆ ಎಂದು ವರದಿಯಾಗಿದೆ.

ಇನ್ನು ನಗದು ಬಹುಮಾನವು ಆರೋಗ್ಯವಂತ ನವಜಾತ ಶಿಶುಗಳ ತಾಯಂದಿರಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಸತ್ತ ಶಿಶುಗಳಿಗೆ ಜನ್ಮ ನೀಡುವ ಮಹಿಳೆಯರಿಗೆ ಇದು ಅನ್ವಯಿಸುವುದಿಲ್ಲ. ಆದಾಗ್ಯೂ, ನವಜಾತ ಶಿಶು ಜನನದ ನಂತರ ಅನಿರೀಕ್ಷಿತವಾಗಿ ಸಾವನ್ನಪ್ಪುವ ಅಥವಾ ಅಂಗವೈಕಲ್ಯದೊಂದಿಗೆ ಜನಿಸಿದ ಪ್ರಕರಣಗಳ ಬಗ್ಗೆ ನೀತಿಯು ಸ್ಪಷ್ಟತೆಯನ್ನು ಹೊಂದಿಲ್ಲ. ಅಂತಹ ಕುಟುಂಬಗಳಿಗೆ ಹೆಚ್ಚುವರಿ ಬೋನಸ್ ಅಥವಾ ಬೆಂಬಲವನ್ನು ನೀಡಲಾಗುತ್ತದೆಯೇ ಎಂಬುದು ಅನಿಶ್ಚಿತವಾಗಿ ಉಳಿದಿದೆ, ಈ ಅಂಶಗಳ ಬಗ್ಗೆ ಸರ್ಕಾರ ಶೀಘ್ರವೇ ಮತ್ತೊಂದು ಸುತ್ತೋಲೆ ಬಿಡುಗಡೆ ಮಾಡಲಿದೆ.

ಇತ್ತೀಚಿನ ವರ್ಷಗಳಲ್ಲಿ ರಷ್ಯಾದ ಜನನ ಪ್ರಮಾಣವು ಕಡಿದಾದ ಕುಸಿತವನ್ನು ಕಂಡಿದೆ. 2024ರಲ್ಲಿ, ಕೇವಲ 599,600 ಮಕ್ಕಳು ಜನಿಸಿದರು, ಹಿಂದಿನ ವರ್ಷಕ್ಕೆ ಹೋಲಿಸಿದರೆ 16,000 ಜನನಗಳು ಕಡಿಮೆಯಾಗಿದೆ. ಈ ಅಂಕಿ ಅಂಶವು ಕಳೆದ 25 ವರ್ಷಗಳಲ್ಲಿ ಕಡಿಮೆ ಜನನ ಪ್ರಮಾಣವನ್ನು ಪ್ರತಿನಿಧಿಸುತ್ತದೆ ಎಂದು ಸಂಶೋಧನ ವರದಿ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net