More

    ಸಾರಾ-ಸುಶಾಂತ್​ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು ಯಾಕೆ?

    ಸುಶಾಂತ್​ ಸಿಂಗ್​ ರಜಪೂತ್​ ಹಿಂದೊಮ್ಮೆ ಅಂಕಿತಾ ಲೋಖಂಡೆ ಅವರನ್ನು ಪ್ರೀತಿಸುತ್ತಿದ್ದು, ಆ ನಂತರ ಅವರಿಬ್ಬರು ಬ್ರೇಕ್​ಅಪ್​ ಆಗಿದ್ದು ಗೊತ್ತಿರಬಹುದು. ಅದೇ ರೀತಿ ರಿಯಾ ಚಕ್ರವರ್ತಿ ಜತೆಗೆ ಸುಶಾಂತ್​ಗೆ ಅಫೇರ್​ ಇದ್ದಿದ್ದು ಎಲ್ಲರಿಗೂ ಗೊತ್ತೇ ಇದೆ.

    ಇದನ್ನೂ ಓದಿ: ಎರಡು ಹಳ್ಳಿ ದತ್ತು ಪಡೆದ ಜಾಕ್ವೆಲಿನ್

    ಈ ಮಧ್ಯೆ, ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​ ಜತೆಗೂ ಸುಶಾಂತ್​ಗೆ ಲವ್​ ಅಫೇರ್​ ಇತ್ತು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಈ ಕುರಿತು ಸುಶಾಂತ್​ ಅವರ ಸ್ನೇಹಿತ ಸ್ಯಾಮ್ಯುಯಲ್​ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಈ ವಿಷಯವಾಗಿ ಬರೆದಿರುವ ಅವರು, ”ಕೇದಾರ್​ನಾಥ್​’ ಚಿತ್ರದ ಪ್ರಮೋಷನ್​ ಸಂದರ್ಭದಲ್ಲಿ ಸುಶಾಂತ್​ ಮತ್ತು ಸಾರಾ ಬಹಳ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು. ಒಬ್ಬರೊನ್ನೊಬ್ಬರು ಬಹಳ ಗೌರವಿಸುತ್ತಿದ್ದರು. ಈ ರೀತಿಯ ಪ್ರೀತಿ ಇತ್ತೀಚಿನ ದಿನಗಳಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ’ ಎಂದಿದ್ದಾರೆ.

    ಆದರೆ, ‘ಸೊಂಚರಿಯಾ’ ಚಿತ್ರದ ಸೋಲಿನ ನಂತರ ಸಾರಾ, ಸುಶಾಂತ್​ರಿಂದ ದೂರವಾದರು ಎಂದು ಸ್ಯಾಮ್ಯುಯಲ್​ ಹೇಳಿಕೊಂಡಿದ್ದಾರೆ. ‘ಸುಶಾಂತ್​ ಅವರನ್ನು ತುಂಬಾ ಇಷ್ಟಪಡುತ್ತಿದ್ದ ಸಾರಾ, ‘ಸೊಂಚರಿಯಾ’ ಚಿತ್ರದ ಸೋಲಿನ ನಂತರ ದೂರವಾದರು. ಸಾರಾ ಮನಃಪೂರ್ವಕವಾಗಿ ದೂರವಾದರೋ ಅಥವಾ ಬಾಲಿವುಡ್​ ಮಾಫಿಯಾದಿಂದ ದೂರವಾಗುವುದಕ್ಕೆ ಏನಾದರೂ ಒತ್ತಡವಿತ್ತೋ ಎಂಬ ವಿಷಯ ಗೊತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಎರಡರ ಜತೆಗೆ ಇನ್ನೊಂದು: ತೆಲುಗಿನ ಅಂಧಾದುನ್ ರೀಮೇಕ್​ನಲ್ಲಿ ನಭಾ ನಟೇಶ್

    ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಟೀಮ್​ ಕಂಗನಾ, ‘ಸುಶಾಂತ್​ ಮತ್ತು ಸಾರಾ ಸಂಬಂಧದ ಬಗ್ಗೆ ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಔಟ್​ಡೋರ್​ ಶೂಟಿಂಗ್​ಗೆ ಹೋದ ಸಂದರ್ಭದಲ್ಲಿ ಇಬ್ಬರೂ ಒಂದೇ ರೂಮ್​ನಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ಹೇಳಲಾಗಿತ್ತು. ಹೊರಗಿನಿಂದ ಬಂದವರಿಗೆ, ಈ ಸ್ಟಾರ್ ಮಕ್ಕಳು ನೂರೆಂಟು ಕನಸುಗಳನ್ನು ತೋರಿಸಿ ಅವರನ್ನು ಬಾವಿಗೆ ದೂಡುವುದೇಕೆ?’ ಎಂದು ಪ್ರಶ್ನಿಸಿದ್ದಾರೆ.

    ಪ್ರಭಾಸ್​ಗೂ ಮುನ್ನ ಈ ಚಿತ್ರದಲ್ಲಿ ಯಾರು ನಟಿಸಬೇಕಿತ್ತು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts