ಎರಡು ಹಳ್ಳಿ ದತ್ತು ಪಡೆದ ಜಾಕ್ವೆಲಿನ್

Jaquelin
Published on

ಈ ಬಾರಿಯ ತಮ್ಮ ಹುಟ್ಟುಹಬ್ಬವನ್ನು (ಆಗಸ್ಟ್ 11) ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ್ದಾರೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್. ಕೇಕ್ ಕತ್ತರಿಸಿ, ಬಂಧು-ಮಿತ್ರ ರೊಂದಿಗೆ ಫೋಟೋ ಹೊಡೆಸಿಕೊಳ್ಳು ವುದರ ಜತೆಗೆ, ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಜಾಕ್ವೆಲಿನ್, ಮಹಾರಾಷ್ಟ್ರದ ಎರಡು ಹಳ್ಳಿಗಳನ್ನು ದತ್ತು ಪಡೆದಿದ್ದಾರೆ. ಪಾರ್ಥಡಿ ಮತ್ತು ಸಕುರ್ ಎಂಬ ಹಳ್ಳಿಗಳ ಒಂದೂವರೆ ಸಾವಿರ ಜನರ ಜವಾಬ್ದಾರಿಯನ್ನು ಅವರು ಮುಂದಿನ ವರ್ಷಕ್ಕೆ ತೆಗೆದುಕೊಂಡಿದ್ದಾರೆ.

ಒಂದೊಳ್ಳೆಯ ಕೆಲಸ ಮಾಡಬೇಕು ಎಂದು ಜಾಕ್ವೆಲಿನ್ ಮನಸ್ಸಿನಲ್ಲಿ ಬಹಳ ದಿನಗಳಿಂದ ಇತ್ತಂತೆ. ಅದು ಈಗ ಕಾರ್ಯರೂಪಕ್ಕೆ ಬಂದಿದೆ. ‘ಈ ವರ್ಷ ಕರೊನಾದಿಂದ ಎಲ್ಲರಿಗೂ ಬಹಳ ಕಷ್ಟವಾಗಿದೆ. ಅದರಲ್ಲೂ ಸಮಾಜದ ಒಂದು ವರ್ಗದ ಜನರು ಮೂಲಭೂತ ಸೌಕರ್ಯಗಳಿಗೆ ಒದ್ದಾಡುತ್ತಿದ್ದಾರೆ. ಅಂಥವರಿಗೆ ನೆರವಾಗುವುದು ನನ್ನ ಉದ್ದೇಶ’ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾರೆ.

ಲಾಕ್​ಡೌನ್ ಸಮಯವನ್ನು ಸಲ್ಮಾನ್ ಖಾನ್ ಅವರೊಂದಿಗೆ ಪನ್ವೇಲ್​ನ ಫಾಮ್ರ್ ಹೌಸ್​ನಲ್ಲಿ ಕಳೆದ ಜಾಕ್ವೆಲಿನ್, ಅಲ್ಲೇ ‘ತೇರೆ ಬಿನಾ’ ಎಂಬ ವಿಡಿಯೋ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net