ವಿಶ್ವದಲ್ಲೇ ಅತ್ಯಂತ ಅಗ್ಗದ ಇಂಟರ್ನೆಟ್ ಸೇವೆ ನೀಡುವ ದೇಶ ಯಾವುದು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ! Internet Service

Internet Service

Internet Service : ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ಇಂಟರ್ನೆಟ್ ಇಲ್ಲದೆ ಬಹುತೇಕ ಕೆಲಸಗಳನ್ನು ಮಾಡುವುದು ಅಸಾಧ್ಯದ ಮಾತಾಗಿದೆ. ಇಂದು ಎಲ್ಲೆಡೆ ಇಂಟರ್ನೆಟ್​ ಆವರಿಸಿದೆ. ಒಂದು ಹೊತ್ತು ಊಟ ಮಾಡದಿದ್ದರೂ ಪರವಾಗಿಲ್ಲ ಮೊಬೈಲ್​ನಲ್ಲಿ ಮಾತ್ರ ಇಂಟರ್ನೆಟ್​ ಕನೆಕ್ಷನ್​ ಇರಲೇಬೇಕು. ಇಲ್ಲದೇ ಹೋದಲ್ಲಿ ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ.

blank

ಈ ಹಿಂದೆ ಇಂಟರ್ನೆಟ್​ ಕೈಗೆಟುಕದ ವಸ್ತುವಾಗಿತ್ತು. ಏಕೆಂದರೆ, ಇಂಟರ್ನೆಟ್​ ತುಂಬಾ ದುಬಾರಿಯಾಗಿತ್ತು. ಎಷ್ಟರಮಟ್ಟಿಗೆ ಅಂದರೆ, ಇಂಟರ್ನೆಟ್​ ಇದ್ರೆ ಅವರನ್ನು ಶ್ರೀಮಂತರು ಎಂದು ಪರಿಗಣಿಸುತ್ತಿದ್ದರು. ಆದರೆ, ಕಾಲ ಬದಲಾದಂತೆ ಇಂಟರ್ನೆಟ್​ ವ್ಯವಸ್ಥೆ ಜನರ ಕೈಗೆ ಸುಲಭವಾಗಿ ದೊರಕುವಂತಾಗಿದೆ. ಇಂದು ಪ್ರತಿಯೊಬ್ಬರ ಮೊಬೈಲ್​ನಲ್ಲೂ ಇಂಟರ್ನೆಟ್​ ಅನ್ನೋದು ಕಾಮನ್​ ಆಗಿದೆ.

2025ರಲ್ಲಿ ವಿಶ್ವದಲ್ಲೇ ಅತ್ಯಂತ ಅಗ್ಗದ ಇಂಟರ್ನೆಟ್ ಸೇವೆಗಳನ್ನು ನೀಡುವ ಟಾಪ್ 10 ದೇಶಗಳ ವಿವರಗಳನ್ನು ಸಂಶೋಧಕರು ಬಿಡುಗಡೆ ಮಾಡಿದ್ದಾರೆ. ವರದಿಗಳ ಪ್ರಕಾರ, ಭಾರತ ಕೂಡ ಈ ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ ಚೀನಾ 10ನೇ ಸ್ಥಾನದಲ್ಲಿದೆ. ಏಕೆಂದರೆ ಒಬ್ಬ ಚೀನೀ ವ್ಯಕ್ತಿ ತಿಂಗಳಿಗೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 978.24 ರೂ.ಗಳಿಗೆ ಇಂಟರ್ನೆಟ್ ಸೇವೆಯನ್ನು ಪಡೆಯುತ್ತಾನೆ. ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಸರಾಸರಿ 240 Mbps ಆಗಿದ್ದರೆ, ಮೊಬೈಲ್ ಇಂಟರ್ನೆಟ್ ಸೇವೆ ಸರಾಸರಿ 139.58 Mbps ಆಗಿದೆ.

ಬೇರೆ ಯಾವ ದೇಶಗಳು ಇದೇ ರೀತಿಯ ಇಂಟರ್ನೆಟ್ ಸೇವೆಗಳನ್ನು ಅಗ್ಗದ ಬೆಲೆಗಳಲ್ಲಿ ನೀಡುತ್ತಿವೆ ಎಂಬುದನ್ನು ನಾವೀಗ ತಿಳಿಯೋಣ.

ಯೂಕ್ರೇನ್​

ಯೂಕ್ರೇನ್ ಅತ್ಯಂತ ಅಗ್ಗದ ಇಂಟರ್ನೆಟ್ ಸೇವೆ ಹೊಂದಿರುವ ದೇಶವಾಗಿದೆ. ಈ ದೇಶದಲ್ಲಿ ಒಬ್ಬ ವ್ಯಕ್ತಿ ಇಂಟರ್ನೆಟ್ ಸೇವೆ ಪಡೆಯಲು ಭಾರತೀಯ ಕರೆನ್ಸಿಯಲ್ಲಿ 520.30 ರೂ. ಖರ್ಚು ಮಾಡುತ್ತಾನೆ. ಇದರಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ 83.81 Mbps ಮತ್ತು ಮೊಬೈಲ್ ಇಂಟರ್ನೆಟ್ ಸೇವೆ 31.23 Mbps ಆಗಿದೆ.

ಇರಾನ್

ಇರಾನ್ ವಿಶ್ವದ ಎರಡನೇ ಅತ್ಯಂತ ಕಡಿಮೆ ವೆಚ್ಚದ ಇಂಟರ್ನೆಟ್ ಪ್ರವೇಶ ಹೊಂದಿರುವ ದೇಶವಾಗಿದೆ. ಈ ದೇಶದಲ್ಲಿ ಸರಾಸರಿ ಮಾಸಿಕ ಇಂಟರ್ನೆಟ್ ವೆಚ್ಚ ಭಾರತೀಯ ಕರೆನ್ಸಿಯಲ್ಲಿ ಸುಮಾರು 654.44 ರೂ. ಆಗಿದೆ. ಇದರಲ್ಲಿ 16.21 Mbps ವೇಗದಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮತ್ತು 31.82 Mbps ವೇಗದಲ್ಲಿ ಮೊಬೈಲ್ ಇಂಟರ್ನೆಟ್ ಸೇರಿವೆ.

ಇದನ್ನೂ ಓದಿ: ಭಾರತದ ಮಾವಿನಹಣ್ಣುಗಳನ್ನು ತಿರಸ್ಕರಿಸಿದ ಅಮೆರಿಕ! 4.2 ಕೋಟಿ ರೂ. ನಷ್ಟ, ಕಾರಣ ಹೀಗಿದೆ… Indian Mangoes

ರಷ್ಯಾ

ಈ ಪಟ್ಟಿಯಲ್ಲಿ ರಷ್ಯಾ ಮೂರನೇ ಸ್ಥಾನದಲ್ಲಿದೆ. ಈ ದೇಶದಲ್ಲಿ ವಾಸಿಸುವ ವ್ಯಕ್ತಿಯು ಇಂಟರ್ನೆಟ್ ಪಡೆಯಲು ತಿಂಗಳಿಗೆ ಸುಮಾರು ರೂ. 658.71 ಖರ್ಚು ಮಾಡಬೇಕಾಗುತ್ತದೆ. ಇದರಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು 89.39 Mbps ನಲ್ಲಿ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಯನ್ನು 26.21 Mbps ನಲ್ಲಿ ಒದಗಿಸಲಾಗುತ್ತದೆ.

ಭಾರತ

ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ ವಾಸಿಸುವ ಒಬ್ಬ ವ್ಯಕ್ತಿ ತಿಂಗಳಿಗೆ ಸುಮಾರು 689.46 ರೂ.ಗಳನ್ನು ಇಂಟರ್ನೆಟ್‌ಗಾಗಿ ಖರ್ಚು ಮಾಡುತ್ತಾರೆ. ಇದರಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು 63.55 Mbps ನಲ್ಲಿ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಯನ್ನು 100.78 Mbps ನಲ್ಲಿ ಒದಗಿಸಲಾಗುತ್ತದೆ.

ವಿಯೆಟ್ನಾಂ

ವಿಯೆಟ್ನಾಂ ಐದನೇ ಸ್ಥಾನದಲ್ಲಿದೆ. ಇಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಒಂದು ತಿಂಗಳಿಗೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 767.21 ರೂ.ಗಳಿಗೆ ಇಂಟರ್ನೆಟ್ ಸೇವೆಯನ್ನು ಪಡೆಯಬಹುದು. ಇದರಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ 163.41 Mbps ಮತ್ತು ಮೊಬೈಲ್ ಇಂಟರ್ನೆಟ್ ಸೇವೆ 134.19 Mbps ಆಗಿದೆ.

ಉಳಿದಂತೆ ಈ ಪಟ್ಟಿಯಲ್ಲಿ ನೇಪಾಳ 6ನೇ ಸ್ಥಾನದಲ್ಲಿದ್ದರೆ, ರೊಮ್ಯಾನಿಯಾ, ಬೆಲರಸ್​, ಮಾಲ್ಡೋವಾ, ಚೀನಾ ಕ್ರಮವಾಗಿ 7, 8, 9 ಮತ್ತು 10ನೇ ಸ್ಥಾನದಲ್ಲಿದೆ. (ಏಜೆನ್ಸೀಸ್​)

ಥಗ್ ಲೈಫ್ ಚಿತ್ರದಲ್ಲಿ ಕಮಲ್​ ಹಾಸನ್​-ಅಭಿರಾಮಿ ಲಿಪ್​ಲಾಕ್​: ವಯಸ್ಸಿನ ಅಂತರದ ಬಗ್ಗೆ ಭಾರಿ ಟೀಕೆ! Kamal Hassan

ಕ್ಯಾಮೆರಾ ಮುಂದೆ ಮೂತ್ರ ವಿಸರ್ಜಿಸಲು ಡೈರೆಕ್ಟರ್​ ಕೇಳಿದಾಗ ಖುಷಿಯಿಂದ ಒಪ್ಪಿದ್ದೆ: ಸ್ಟಾರ್​ ನಟಿಯ ಅಚ್ಚರಿ ಹೇಳಿಕೆ! Janki Bodiwala

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank