ಊಟ ಮಾಡುವಾಗ ಅಪ್ಪಿತಪ್ಪಿಯು ಈ 12 ತಪ್ಪುಗಳನ್ನು ಮಾಡಲೇಬೇಡಿ: ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತೆ! Eating Mistakes

Eating Mistakes

Eating Mistakes : ಅನೇಕ ಜನರು ಆಹಾರವನ್ನು ತಿನ್ನುವಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ ಮತ್ತು ಅಂತಹ ತಪ್ಪುಗಳು ಅವರ ಆರೋಗ್ಯವನ್ನೇ ಹಾನಿಗೊಳಿಸುತ್ತವೆ. ಆದ್ದರಿಂದ ಯಾವಾಗಲೂ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ಅದರಲ್ಲೂ ವಿಶೇಷವಾಗಿ ಊಟದ ಸಮಯದಲ್ಲಿ.

ಊಟದ ವೇಳೆ ನೀವು ಮಾಡುವ ತಪ್ಪುಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಊಟದ ಸಮಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನಾವೀಗ ತಿಳಿಯೋಣ. ನೆನಪಿರಲಿ ಯಾವುದೇ ಸಂದರ್ಭದಲ್ಲೂ ಯಾರು ಕೂಡ ಈ ತಪ್ಪುಗಳನ್ನು ಮಾಡಬಾರದು.

* ಕೆಲಸ, ಪ್ರಯಾಣ ಅಥವಾ ಇನ್ನಾವುದೇ ಕಾರಣಕ್ಕಾಗಿ ಅನೇಕ ಜನರು ಊಟವನ್ನೇ ಬಿಟ್ಟುಬಿಡುತ್ತಾರೆ. ಯಾವುದೇ ಕಾರಣಕ್ಕೂ ಊಟವನ್ನು ಬಿಟ್ಟುಬಿಡಬೇಡಿ.

* ಅನೇಕ ಜನರು ಕೆಲಸ ಮಾಡುವಾಗ ಊಟ ಮಾಡುತ್ತಾರೆ. ಆದರೆ, ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ, ಕೆಲಸ ಮಾಡುವ ಕಂಪ್ಯೂಟರ್ ಡೆಸ್ಕ್​​ನಲ್ಲಿ ಟಾಯ್ಲೆಟ್ ಸೀಟ್​ಗಿಂತ ಮೂರು ಪಟ್ಟು ಹೆಚ್ಚು ಸೂಕ್ಷ್ಮಜೀವಿಗಳಿರುತ್ತವೆ.

* ಅನೇಕ ಜನರು ಒಂದು ಕೈಯಲ್ಲಿ ಫೋನ್​ ಸ್ಕ್ರೋಲಿಂಗ್​ ಮಾಡುತ್ತಾ ಇನ್ನೊಂದು ಕೈಯಲ್ಲಿ ಊಟ ಮಾಡುತ್ತಾರೆ. ಆದರೆ, ಅದು ಒಳ್ಳೆಯದಲ್ಲ. ಫೋನ್​ ನೋಡುತ್ತಾ ಊಟ ಮಾಡಿದರೆ ಆಹಾರದ ಮೇಲೆ ಗಮನ ಇರುವುದಿಲ್ಲ. ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ. ಅಲ್ಲದೆ, ಫೋನ್‌ಗಳಲ್ಲಿನ ಸೂಕ್ಷ್ಮಜೀವಿಗಳು ಆರೋಗ್ಯವನ್ನು ಹಾನಿಗೊಳಿಸಬಹುದು.

* ಸಮಯಕ್ಕೆ ಸರಿಯಾಗಿ ಊಟ ಮಾಡದೆ ತಡವಾಗಿ ತಿನ್ನುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

* ಆಹಾರವನ್ನು ತಿನ್ನುವಾಗ ಅದರ ಮೇಲೆ ಮಸಾಲೆ ಹಾಕುವಂತಹ ಕೆಲಸಗಳನ್ನು ಮಾಡಬೇಡಿ.

* ಊಟದೊಂದಿಗೆ ಯಾವುದೇ ಕಾರಣಕ್ಕೂ ಸೋಡಾ ಸೇವಿಸಬೇಡಿ.

ಇದನ್ನೂ ಓದಿ: ರಾಜ್ಯದಲ್ಲಿ ಚಳಿ ಹೆಚ್ಚಿಸಿದ ಮಳೆ; ವಾಯುಭಾರ ಕುಸಿತ ಎಫೆಕ್ಟ್, ಇನ್ನೆರಡು ದಿನ ವರ್ಷಧಾರೆ

* ಪ್ಲಾಸ್ಟಿಕ್ ಲೋಟಗಳಲ್ಲಿ ಏನಾದರೂ ಹಾಕಿ ಓವನ್​ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ತಪ್ಪು ಮಾಡಬೇಡಿ.

* ತಿಂದ ನಂತರ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಕೂಡ ಒಳ್ಳೆಯದಲ್ಲ. ಇದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ.

* ಆರೋಗ್ಯಕ್ಕೆ ಹಿತಕರವಾದ ಆಹಾರಗಳನ್ನು ಅತಿಯಾಗಿ ಸೇವಿಸಿದರು ಕೂಡ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

* ಹೆಚ್ಚು ಉಪ್ಪು ಇರುವ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ, ಏಕೆಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

* ಅನೇಕ ಜನರು ಹಸಿರು ತರಕಾರಿಗಳನ್ನು ತಿನ್ನಲು ಹಿಂಜರಿಯುತ್ತಾರೆ ಆದರೆ, ಆ ತಪ್ಪನ್ನು ಮಾಡಬೇಡಿ.

* ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ಅಂಥಾ ಓರ್ವ ಕ್ರಿಕೆಟಿಗನನ್ನು ನನ್ನ ಜೀವನದಲ್ಲೇ ನೋಡಿಲ್ಲ! LSG ಮಾಲೀಕ ಸಂಜೀವ್​ ಹೇಳಿಕೆ ವೈರಲ್ | Sanjiv Goenka

ಒಂದೇ ದಿನದಲ್ಲಿ 101 ಗಂಡಸರ ಜತೆ ಲೈಂಗಿಕ ಕ್ರಿಯೆ! ಮುಂದಿನ ಗುರಿ 1000 ಎಂದ 23 ವರ್ಷದ ಯುವತಿ | Lily Phillips

ಪಾಕಿಗಳಿಗೆ ಭಾರತದ ಮೇಲೆಯೇ ಹೆಚ್ಚು ಆಸಕ್ತಿ! 2024ರಲ್ಲಿ ಗೂಗಲ್​ನಲ್ಲಿ ಹೆಚ್ಚು ಹುಡುಕಿದ ವಿಷಯಗಳಿವು… Google Search

Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…