Google Search : ಇನ್ನೇನು 2024ನೇ ವರ್ಷ ಕೊನೆಗೊಳ್ಳುತ್ತಿದೆ. 2025ನೇ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಮುನ್ನ ನೆನಪುಗಳನ್ನು ಬಿಟ್ಟು ಕಣ್ಮರೆಯಾಗುತ್ತಿರುವ 2024 ಅನ್ನು ಒಮ್ಮೆ ಮೆಲಕು ಹಾಕುವ ಸಮಯವಿದು. ಅನೇಕ ಕ್ಷಣಗಳಿಗೆ 2024 ವೇದಿಕೆಯಾಗಿದೆ. ಇದರಲ್ಲಿ ಒಂದು ವಿಚಾರವನ್ನು ನಾವಿಂದು ತಿಳಿದುಕೊಳ್ಳೋಣ.
ಗೂಗಲ್ ಸರ್ಚ್ ವಿಚಾರಕ್ಕೆ ಬಂದರೆ ಪಾಕಿಸ್ತಾನದಲ್ಲೂ ಭಾರತ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಪಾಕಿಗಳಿಗೆ ತಮ್ಮ ದೇಶಕ್ಕಿಂತ ಭಾರತದ ಮೇಲೆಯೇ ಹೆಚ್ಚು ಆಸಕ್ತಿ ಇರುವಂತೆ ತೋರುತ್ತದೆ. 2024ರಲ್ಲಿ ಪಾಕಿಸ್ತಾನಿಗಳು ಹೆಚ್ಚು ಹುಡುಕಾಡಿದ ವ್ಯಕ್ತಿ ಅಂದರೆ, ಅದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಭಾರತದ ನಂ. 1 ಶ್ರೀಮಂತ ಮುಕೇಶ್ ಅಂಬಾನಿ. ಅಂದಹಾಗೆ ಅಂಬಾನಿ ಅವರು ತಮ್ಮ ಮಗನ ಮದುವೆ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ.
ಇನ್ನು ಹಿಂದಿ ಬಿಗ್ಬಾಸ್ ಸೀಸನ್ 17, ಮಿರ್ಜಾಪುರ ಸೀಸನ್ 3 ಮತ್ತು ನೆಟ್‌ಫ್ಲಿಕ್ಸ್ ಶೋ ಹೀರಾಮಂಡಿ ಬಗ್ಗೆ ತಿಳಿದುಕೊಳ್ಳಲು ಪಾಕಿಗಳು ಹೆಚ್ಚು ಆಸಕ್ತಿ ತೋರಿದ್ದಾರೆ. ಅಲ್ಲದೆ, ಬಾಲಿವುಡ್ ಸಿನಿಮಾಗಳಾದ ಭೂಲ್ ಭುಲೈಯಾ 3, 12th ಫೇಲ್, ಅನಿಮಲ್, ಸ್ತ್ರೀ 2 ಮತ್ತು ಡಂಕಿ ಕೂಡ ಪಾಕಿಗಳಿಂದ ಹೆಚ್ಚು ಹುಡುಕಲ್ಪಟ್ಟಿವೆ.
ಇದನ್ನೂ ಓದಿ: ನಾನು ಧನುಷ್ ಜತೆ…. ಸಾಕ್ಷ್ಯಚಿತ್ರ ವಿವಾದದ ಕುರಿತು ಅಚ್ಚರಿ ಹೇಳಿಕೆ ನೀಡಿದ ನಯನತಾರಾ | Nayanthara
ಇದೆಲ್ಲದರ ನಡುವೆ, ಗೂಗಲ್ ಸರ್ಚ್ ಟ್ರೆಂಡ್ ಪ್ರಕಾರ, ಉಭಯ ರಾಷ್ಟ್ರಗಳಿಗೆ ಕ್ರಿಕೆಟ್ ಮೇಲಿರುವ ಗೀಳು ಸಾಬೀತಾಗಿದೆ. ಟಿ20 ವಿಶ್ವಕಪ್ ಮಾಹಿತಿಗಾಗಿ ಉಭಯ ದೇಶಗಳು ಸಮಾನ ಉತ್ಸಾಹದಿಂದ ಹುಡುಕಾಡಿವೆ. ಪಾಕಿಸ್ತಾನ ಮತ್ತು ಭಾರತದಂತಹ ಅಗ್ರ ಪಂದ್ಯಗಳು ಹೆಚ್ಚು ಹುಡುಕಲ್ಪಟ್ಟಿವೆ. ಅಲ್ಲದೆ, ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಾಕಿಸ್ತಾನದ ಪಂದ್ಯಗಳಂತಹ ಪ್ರಮುಖ ಪಂದ್ಯಗಳನ್ನು ಪಾಕಿಗಳು ಸರ್ಚ್ ಮಾಡಿದ್ದಾರೆ.
ಅಚ್ಚರಿಯ ಸಂಗತಿ ಏನೆಂದರೆ, ಯಾವುದೇ ಪಾಕಿಸ್ತಾನಿ ರಾಜಕಾರಣಿ, ಉದ್ಯಮಿ ಹಾಗೂ ಕಲಾವಿದರನ್ನು ಪಾಕಿಗಳು ಹೆಚ್ಚು ಹುಡುಕಾಟ ನಡೆಸಿಲ್ಲ. ಹೀಗಾಗಿ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಹುಡುಕಾಟಗಳಲ್ಲಿ ಯಾರೊಬ್ಬರು ಸ್ಥಾನ ಪಡೆದಿಲ್ಲ. (ಏಜೆನ್ಸೀಸ್)
ಹಣದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವೇ? ಹೌದು ಎಂದಾದರೆ ಹೀಗೆ ಮಾಡಿ… Money Problems
ತಡವಾಗಿ ಮದುವೆಯಾಗುವುದರಿಂದ ಎಷ್ಟೆಲ್ಲ ಲಾಭಗಳಿವೆ ಅನ್ನೋದು ನಿಮಗೆ ಗೊತ್ತಾ? Late Marriage