ಸಿನಿಮಾ

ಹೊಸ ಫೀಚರ್ ಪರಿಚಯಿಸಿದ ವಾಟ್ಸ್​ಆ್ಯಪ್​; ಏನಿದರ ವಿಶೇಷತೆ?

ನವದೆಹಲಿ: ಇನ್ನು ಮುಂದೆ ವಾಟ್ಸ್​ಆ್ಯಪ್​​​​​​​​ನಲ್ಲಿ ಕಳುಹಿಸಲಾದ ಸಂದೇಶಗಳನ್ನು ಎಡಿಟ್​ ಮಾಡಬಹುದಾದ ಹೊಸ ಆಪ್ಷನ್​ ಒಂದನ್ನು ನೀಡಿದೆ.

ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಕಂಪನಿಯೂ ನಾವು ಮೆಸೇಜ್​ ಕಳುಹಿಸಿದ 15 ನಿಮಿಷಗಳವರೆಗೆ ಎಡಿಟ್​ ಮಾಡುವ ಅವಕಾಶವನ್ನು ನೀಡಲಾಗಿದೆ. ಕಳುಹಿಸಿದ ಸಂದೇಶವನ್ನು ದೀರ್ಘವಾಗಿ ಒತ್ತಿ ಮತ್ತು ಮೆನುವಿನಲ್ಲಿ ಎಡಿಟ್​ ಆಪ್ಷನ್​ ಆಯ್ಕೆ ಮಾಡಿ ಸರಿಪಡಿಸಬಹುದು ಎಂದು ತಿಳಿಸಿದೆ.

ಸರಿಪಡಿಸಲಾದ ಸಂದೇಶಗಳ ಪಕ್ಕದಲ್ಲೇ ಎಡಿಟೆಡ್​ ಎಂದು ತೋರಿಸಿತ್ತಿರುತ್ತದೆ. ಹೀಗಾಗಿ ಮೆಸೇಜ್​ ಸ್ವೀಕರಿಸುವವರಿಗೆ ಇದು ತಿದ್ದುಪಡಿಯಾದ ಸಂದೇಶ ಎಂದು ತಿಳಿಯುತ್ತದೆ.

ಎಡಿಟಿಂಗ್​ ಹಿಸ್ಟರಿ ತಿಳಿಯುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಎಲ್ಲರಿಗೂ ಈ ಹೊಸ ಫೀಚರ್​ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

Latest Posts

ಲೈಫ್‌ಸ್ಟೈಲ್