More

    ಮನೆ ಖಾಲಿ ಮಾಡಿಸಿದ ತಪ್ಪಿಗೆ 20ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಲೀಕ!

    ಲಖನೌ: ಕೆಲವೊಂದು ಪ್ರಕರಣಗಳಲ್ಲಿ ತಮ್ಮದಲ್ಲದ ತಪ್ಪುಗಳಿಗೆ ಕೆಲವರು ಅಪರಾಧಿಗಳಾಗಿ ಶಿಕ್ಷೆ ಅನುಭವಿಸುವುದನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ.

    ಇದೀಗ ಅಬದ್ಉಲ್​ ಅಯೂಬ್​ ಎಂಬ ವ್ಯಕ್ತಿಯೂ ತನ್ನದಲ್ಲದ ತಪ್ಪಿಗೆ ಭಾರೀ ದಂಡ ತೆತ್ತಿದ್ದು 20ವರ್ಷಗಳ ಸೆರೆವಾಸವನ್ನು ಅನುಭವಿಸಿ ಬಿಡುಗಡೆಯಾಗಿದ್ದಾರೆ.

    ಪ್ರಕರಣದ ಹಿನ್ನಲೆ

    ಅಬ್ದುಲ್​ ಅಯೂಬ್ ಅವರು ಕಟ್ಟಿಸಿದ ಮನೆಯಲ್ಲಿ ಪೊಲೀಸ್​​ ಪೇದೆ ಖರ್ಷಿದ್​ ಎಂಬುವವರು ಬಾಡಿಗೆಗೆ ವಾಸವಿದ್ದರು. ಸರಿಯಾದ ಸಮಯಕ್ಕೆ ಬಾಡಿಗೆ ಮೊತ್ತ ಪಾವತ್ತಿಸದ್ದಕ್ಕೆ ಅಯೂಬ್​ ಖುರ್ಷಿದ್​ನನ್ನು ಮನೆಯಿಮದ ಖಾಲಿ ಮಾಡಿಸಿದ್ದರು.

    2003ರಲ್ಲಿ ಘಟನೆ ನಡೆದಿದ್ದು ಮಾಲೀಕ ಅಯೂಬ್​ ಪೊಲೀಸ್​ ಪೇದೆ ಖುರ್ಷಿದ್​ನನ್ನು ಮನೆ ಖಾಲಿ ಮಾಡಿಸಿದ್ದ ಬಳಿಕ 1 ಕೋಟಿ ರೂಪಾಯಿ ಮೌಲ್ಯದ 25 ಗ್ರಾಂ ಡ್ರಗ್ಸ್​ನೊಂದಿಗೆ ಸಿಕ್ಕಿ ಬಿದ್ದಿದ್ಧಾರೆ.

    ತಮ್ಮ ಬಳಿ ಆ ರೀತಿಯ ಯಾವುದೇ ವಸ್ತುಗಳು ಇಲ್ಲ ಎಂದು ಅಬ್ದುಲ್ಲಾ ಪೊಲೀಸರ ಬಳಿ ಗೋಗರೆದರು ಸಹ ಯಾರು ಇವರ ಮಾತಿಗೆ ಕಿಮ್ಮತ್ತನ್ನು ನೀಡಲಿಲ್ಲ. ಬದಲಿಗೆ ಸಾಕ್ಷ್ಯಾಧಾರಗಳನ್ನು ತಿರುಚಿ ಕಂಬಿಗಳ ಹಿಂದೆಯೇ ಇರುವಂತೆ ಮಾಡಿದ್ದರು.

    drugs

    ಷಡ್ಯಂತ್ರ ಹೆಣೆದಿದ್ದಾರೆ

    ಪುರಾಣಿ ಬಸ್ತಿ ಠಾಣೆಯ ಪೊಲೀಸ್​ ಅಧಿಕಾರಿಗಳು ತನ್ನ ಕಕ್ಷಿದಾರನನ್ನು ಅಪರಾಧಿ ಎಂದು ಸಾಬೀತು ಪಡಿಸಲು ಸಾಕ್ಷ್ಯಾಧಾರಗಳನ್ನು ತಿರುಚಿದ್ಧಾರೆ ಎಂದು ಅಯೂಬ್​ ಪರ ವಕೀಲ ಪ್ರೇಮ್​ ಪ್ರಕಾಶ್​ ಶ್ರೀವಾಸ್ತವ್​ ಆರೋಪಿಸಿದ್ದಾರೆ.

    ಅಯೂಬ್​ ಅವರ ಮನೆಯಲ್ಲಿ ವಾಸವಿದ್ದ ಖುರ್ಷಿದ್​ ಎಂಬ ಪೊಲೀಸ್​ ಪೇದೆಗೆ ಬಾಡಿಗೆ ಹಣ ಕೊಡದಿದ್ಧಾಗ ಅವರನ್ನು ಅಲ್ಲಿಂದ ಖಾಲಿ ಮಾಡಿಸಲಾಗಿತ್ತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೊಲೀಸ್​ ಅಧಿಕಾರಿಗಳು ಸುಳ್ಳು ಆರೋಪ ಮಾಡಿ ಜೈಲಿಗೆ ನನ್ನ ಕಕ್ಷಿದಾರರನ್ನು ಜೈಲಿಗೆ ಕಳುಹಿಸಿದ್ದಾರೆ.

    ಡ್ರಗ್ಸ್​ ಅಲ್ಲ

    ಈ ಮೊದಲು ಪ್ರಕರಣದ ವಿಚಾರಣೆ ಶುರುವಾದ ಸಮಯದಲ್ಲಿ ಅಯೂಬ್​ ಅವರ ಮನೆಯಲ್ಲಿ ದೊರೆತ್ತಿರುವುದು ಹೆರಾಯಿನ್​ ಎಂದು ಅಧಿಕಾರಿಗಳು ಸುಳ್ಳು ಸಾಕ್ಷಿಯನ್ನು ಸೃಷ್ಟಿಸಿ ಸಾಬೀತು ಪಡಿಸಿದ್ದರು.

    ಎರಡನೇ ಭಾರೀ ಮಾದರಿಗಳನ್ನು ಲಖನೌಗೆ ಕಳುಹಿಸಿದ ವೇಳೆ ಅದು ಡ್ರಗ್ಸ್​ ಅಲ್ಲ ಎಂದು ಸಾಬಿತಾಗಿದ್ದು ಈಗ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ ಅಯೂಬ್​ ಅವರಿಗೆ ಕೋರ್ಟ್​ ನ್ಯಾಯಾಲಯದಿಂದ ಮುಕ್ತಿ ನೀಡಿದೆ.

    ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ಧ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಘೋಷಿಸಬೇಕಿದೆ.

    Court

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts