ಸಿನಿಮಾ

ಮುಂದೊಂದು ದಿನ ಆಸ್ತಿಯಲ್ಲಿ ಪಾಲು ಕೇಳುತ್ತಾನೆಂದು ಮರಿಮೊಮ್ಮಗನನ್ನು ಹತ್ಯೆಗೈದ ಮುತ್ತಾತ

ಇಂದೋರ್​: ನಾಲ್ಕು ವರ್ಷದ ಮರಿಮೊಮ್ಮಗನನ್ನು ಮುತ್ತಾತ ಹೊಡೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಏಪ್ರಿಲ್​ 7ರಂದು ಘಟನೆ ನಡೆದಿದ್ದು ಪ್ರಕರಣ ಸಂಬಂಧ ಶೋಭರಾಮ್​ ಚೌಧರಿ(80)ಯನ್ನು ಬಂಧಿಸಲಾಗಿದ್ದು ಮೃತ ಬಾಲಕನನ್ನು ಶ್ರೇಯಾಂಶ್​(4) ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹ

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಿತುಕಾ ವಸಲ್​ ಕೌಟುಂಬಿಕ ಕಲಹದ ಕಾರಣ ಶ್ರೇಯಾಂಶ್​ ಹಾಗೂ ಅವರ ತಾಯಿ ನೀತು ಪ್ರತ್ಯೇಕವಾಗಿ ಅವರ ತವರು ಮನೆಯಲ್ಲಿ ನೆಲೆಸಿದ್ದರು.

Murder Crime

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ನೀತು ಹಾಗೂ ಅವರ ಪುತ್ರನನ್ನು ಹೊರೆ ಎಂದು ಪರಿಗಣಿಸಿ ತವರು ಮನೆಯಲ್ಲಿ ಮಾನಸಿಕ ಕಿರುಕುಳ ಕೊಡಲಾಗುತ್ತಿತ್ತು. ಈ ವೇಳೆ ಆರೋಪಿ ಶೋಭರಾಮ್ ಬಳಿ ಆಕೆಯ ಪೋಷಕರು ಮಗು ಬೆಳೆದು ದೊಡ್ಡವನಾದ ಮೇಲೆ ಆಸ್ತಿಯಲ್ಲಿ ಪಾಲು ಕೇಳಬಹುದು ಎಂದು ಹೇಳಿದ್ಧಾರೆ.

ಉಸಿರುಗಟ್ಟಿಸಿ ಹತ್ಯೆ

ಈ ವೇಳೆ ಆರೋಪಿಯೂ ಮಗುವಿನಿಂದ ಸಮಸ್ಯೆಯಾಗುತ್ತಿದೆ ಎಂದು ಭಾವಿಸಿ ಆತನನ್ನು ಮುಗಿಸಿದರೆ ಇದಕ್ಕೊಂದು ಅಂತ್ಯ ಹಾಡಬಹುದು ಎಂದು ಪ್ಲ್ಯಾನ್​ ಹಾಕಿದ್ಧಾನೆ. ಪತ್ರಿ ರಾತ್ರಿ ಮರಿಮೊಮ್ಮಗ ತನ್ನ ಜೊತೆ ಮಲಗುತ್ತಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿ ಉಸಿರುಗಟ್ಟಿಸಿ ಹತ್ಯೆಗೈದಿದ್ಧಾನೆ.

ಕುಟುಂಬಸ್ಥರು ನೀಡಿರುವ ಹೇಳಿಕೆಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಿತುಕಾ ವಸಲ್ ಮಾಹಿತಿ ನೀಡಿದ್ಧಾರೆ.

Latest Posts

ಲೈಫ್‌ಸ್ಟೈಲ್