More

    ರೈಲು ನಿಲ್ಲಿಸಲು ಮರೆತ ಲೋಕೋ ಪೈಲಟ್​; ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು 1 ಕಿ.ಮೀ. ರಿವರ್ಸ್​ ಚಾಲನೆ

    ತಿರುವನಂತಪುರಂ: ನಿಗದಿತ ನಿಲುಗಡೆಯಲ್ಲಿ ನಿಲ್ಲಿಸದೆ ರೈಲೊಂದು ಸುಮಾರು 1 ಕಿಲೋಮೀಟರ್​ಗಳಷ್ಟು ಮುಂದಕ್ಕೆ ಹೋಗಿ ಆ ನಂತರ ಹಿಂದಕ್ಕೆ ಚಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ.

    ತಿರುವನಂತಪುರಂ ಕಡೆಯಿಂದ ಚೆರಿಯಾನಾಡ್​ ಕಡೆಯಿಂದ ಹೋಗುತ್ತಿದ್ದ ವೇನಾಡ್​ ಎಕ್ಸ್​​ಪ್ರೆಸ್​ನಲ್ಲಿ ಬೆಳಗ್ಗೆ 7:45ರ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ.

    ಸಿಗ್ನಲ್​ ಕೊರತೆ

    ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ಚೆರಿಯಾಡ್​ ನಿಲ್ದಾಣದಲ್ಲಿನ ಸಿಗ್ನಲ್​ ಕೊರತೆಯೆ ಈ ದುರ್ಘಟನೆಗೆ ಕಾರಣ ಎಂದು ಹೇಳಿದ್ಧಾರೆ.

    ಚೆರಿಯಾಡ್​ ಹಾಲ್ಟ್​ ಸ್ಟೇಷನ್​ ಆಗಿರುವುದರಿಂದ ಇಲ್ಲಿ ಸಿಗ್ನಲ್​ ಅಳವಡಿಸಿಲ್ಲ. ಲೋಕೋ ಪೈಲಟ್​ಗಳು ರೈಲು ಸುಮಾರು 1 ಕಿಲೋಮೀಟರ್​ ಕ್ರಮಿಸಿದ ನಂತರ ಗಮನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಪ್ರಯಾಣಿಕರಿಗೆ ಇದರಿಂದ ಯಾವುದೇ ರೀತಿಯ ಅನಾನುಕೂಲತೆ ಉಂಟಾಗಿಲ್ಲ ಈ ವಿಚಾರವಾಗಿ ಲೋಕೋ ಪೈಲಟ್​ಗಳಿಂದ ವಿಸ್ತೃತ ವಿವರಣೆಯನ್ನು ಕೇಳಲಾಗಿದೆ ಎಂದು ತಿಳಿಸಿದ್ಧಾರೆ.

    cheriyanad

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts