ಗಂಗಾನದಿಯಲ್ಲಿ ದೋಣಿ ಮುಳುಗಿ ನಾಲ್ವರು ಜಲಸಮಾಧಿ, 24 ಜನ ನಾಪತ್ತೆ

boat sink
Published on

ಬಲ್ಲಿಯಾ: ಸುಮಾರು 30 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗಂಗಾ ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 4 ಜನರು ಮೃತಪಟ್ಟು, 25 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತವು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಗಂಗಾಘಾಟ್‌ನಲ್ಲಿ ನಡೆದಿದೆ.

ಇಂದು ಮುಂಜಾನೆ ದೋಣಿ ಒಂದು ದಡದಿಂದ ಇನ್ನೊಂದು ದಡಕ್ಕೆ ತೆರಳುತ್ತಿತ್ತು. ದೋಣಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ದೋಣಿಯಲ್ಲಿದ್ದ ಕಾರಣ, ದೋಣಿಯ ಸಮತೋಲನ ತಪ್ಪಿ ಮುಗುಚಿ ನದಿಗೆ ಬಿದ್ದಿದೆ. ಈ ವೇಳೆ ಜನರು ಪ್ರಾಣಭಯದಿಂದ ಕಿರುಚಾಡಿದ್ದು ಇವರ ಅರಚಾಟ ಕೇಳಿ ತಕ್ಷಣವೇ ಮೀನುಗಾರರು, ಸ್ಥಳೀಯರು ರಕ್ಷಣೆಗೆ ಧಾವಿಸಿ ಕೆಲವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸುಮಾರು 20-25 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net