More

    ಉತ್ತರಪ್ರದೇಶ: ಎಕ್ಸಾಂ ಬರೆದ 188 ಕೈದಿಗಳು, ಶೇಕಡಾ 89 ರಷ್ಟು ಫಲಿತಾಂಶ ದಾಖಲು!

    ಪ್ರಯಾಗ್​ರಾಜ್: ಗಾಜಿಯಾಬಾದ್, ಆಗ್ರಾ ಮತ್ತು ಲಕ್ನೋ ಸೇರಿದಂತೆ ಉತ್ತರ ಪ್ರದೇಶದ 30 ಜಿಲ್ಲೆಗಳ ವಿವಿಧ ಜೈಲುಗಳಲ್ಲಿರುವ ಸುಮಾರು 180 ಕೈದಿಗಳು 10 ನೇ ತರಗತಿ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಇದರ ಫಲಿತಾಂಶಗಳು ಶನಿವಾರ ಪ್ರಕಟವಾಗಿವೆ.

    ಇದನ್ನೂ ಓದಿ: ಅವಧಿ ಮೀರಿದ ಚಾಕೋಲೇಟ್ ತಿಂದು ರಕ್ತ ವಾಂತಿ ಮಾಡಿಕೊಂಡ ಒಂದೂವರೆ ವರ್ಷದ ಕಂದಮ್ಮ!

    ಉತ್ತರ ಪ್ರದೇಶ ರಾಜ್ಯ ಪ್ರೌಢಶಾಲಾ ಮತ್ತು ಮಧ್ಯಂತರ ಶಿಕ್ಷಣ ಮಂಡಳಿಯು ಇಂದು ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. 10 ಮತ್ತು 12ನೇ ತರಗತಿಯಲ್ಲಿ ಕ್ರಮವಾಗಿ ಶೇ.89.55 ಮತ್ತು 82.60 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

    ಉತ್ತರಪ್ರದೇಶ: ಎಕ್ಸಾಂ ಬರೆದ 188 ಕೈದಿಗಳು, ಶೇಕಡಾ 89 ರಷ್ಟು ಫಲಿತಾಂಶ ದಾಖಲು!

    ಫಲಿತಾಂಶಗಳ ಪ್ರಕಾರ, 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾದ 91 ಕೈದಿಗಳಲ್ಲಿ 89 ಮಂದಿ ಉತ್ತೀರ್ಣರಾಗಿದ್ದರೆ, 12 ನೇ ತರಗತಿ ಪರೀಕ್ಷೆ ಬರೆದ 105 ಕೈದಿಗಳ ಪೈಕಿ 87 ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

    12ನೇ ತರಗತಿ ಪರೀಕ್ಷೆ ಬರೆದ ಗಾಜಿಯಾಬಾದ್‌ ಜೈಲಿನ 21 ಕೈದಿಗಳ ಪೈಕಿ 17 ಮಂದಿ ಉತ್ತೀರ್ಣರಾಗಿದ್ದಾರೆ. ಅದೇ ಬುಲಂದ್​ಶಹರ್​ ಜೈಲಿನ 11 ಕೈದಿಗಳ ಪೈಕಿ 10 ಹಾಗೂ ಹಾರ್ದೋಯ್​ ಜೈಲಿನ 4 ಮಂದಿ ಕೈದಿಗಳು ಉತ್ತೀರ್ಣರಾಗಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್​: ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts