More

    ಅವಧಿ ಮೀರಿದ ಚಾಕೋಲೇಟ್ ತಿಂದು ರಕ್ತ ವಾಂತಿ ಮಾಡಿಕೊಂಡ ಒಂದೂವರೆ ವರ್ಷದ ಕಂದಮ್ಮ!

    ಚಂಢೀಗಢ: ಅವಧಿ ಮೀರಿದ ಚಾಕಲೇಟ್ ಸೇವಿಸಿ ಪುಟ್ಟ ಮಗುವೊಂದು ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿರುವ ಘಟನೆ ಪಂಜಾಬ್​ನ ಪಟಿಯಾಲದಲ್ಲಿ ನಡೆದಿದೆ.

    ಇದನ್ನೂ ಓದಿ: ತಿಹಾರ್‌ ಜೈಲಿನಲ್ಲಿ ಅರವಿಂದ ಕೇಜ್ರಿವಾಲ್​​ರನ್ನು ನಿಧಾನಗತಿ ಸಾವಿನತ್ತ ತಳ್ಳಲಾಗ್ತಿದೆ: ಎಎಪಿ ಆರೋಪ

    ಲೂಧಿಯಾನ ಮೂಲದ ಬಾಲಕಿ ತನ್ನ ಪೋಷಕರೊಂದಿಗೆ ಪಟಿಯಾಲಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಳು. ಈ ವೇಳೆ ಸಂಬಂಧಿ ವಿಕ್ಕಿ ಗೆಹ್ಲೋಟ್, ಸ್ಥಳೀಯ ಕಿರಾಣಿ ಅಂಗಡಿಯಿಂದ ಬಾಲಕಿಗೆ ಚಾಕ್ಲೇಟ್‌ ಬಾಕ್ಸ್ ಖರೀದಿಸಿದ್ದರು. ಬಳಿಕ ಅದನ್ನು ಬಾಲಕಿಗೆ ನೀಡಿದ್ದರು.

    ಮನೆಗೆ ಮರಳಿದ ಬಳಿಕ ಚಾಕಲೇಟ್ ಸೇವಿಸಿದ ಬಾಲಕಿ ಬಾಯಿಂದ ರಕ್ತಸ್ರಾವವಾಗತೊಡಗಿದೆ. ಅಲ್ಲದೇ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ವಿಷಕಾರಿ ಪದಾರ್ಥ ಸೇವಿಸಿ ಅಸ್ವಸ್ಥಳಾಗಿರುವುದು ದೃಢಪಟ್ಟಿದೆ.

    ಈ ಸಂಬಂಧ ಬಾಲಕಿಯ ಕುಟುಂಸ್ಥರು ಪೊಲೀಸ್ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳ ತಂಡ ದೂರುದಾರರೊಂದಿಗೆ ಕಿರಾಣಿ ಅಂಗಡಿಗೆ ಧಾವಿಸಿ ಮಾದರಿಗಳನ್ನು ಸಂಗ್ರಹಿಸಿದರು. ಅಂಗಡಿಯಲ್ಲಿ ಅವಧಿ ಮೀರಿದ ತಿನಿಸುಗಳನ್ನು ಮಾರಾಟ ಮಾಡಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ಅಂಗಡಿಯಿಂದ ಅವಧಿ ಮೀರಿದ ಇತರೆ ತಿಂಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

    ಬೆಂಗಳೂರಿನಲ್ಲಿ ಭದ್ರತಾ ಲೋಪ: ಮೋದಿಗೆ ಚೊಂಬು ಪ್ರದರ್ಶಿಸಲು ಬಂದ ನಲಪಾಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts