More

    ತಿಹಾರ್‌ ಜೈಲಿನಲ್ಲಿ ಅರವಿಂದ ಕೇಜ್ರಿವಾಲ್​​ರನ್ನು ನಿಧಾನಗತಿ ಸಾವಿನತ್ತ ತಳ್ಳಲಾಗ್ತಿದೆ: ಎಎಪಿ ಆರೋಪ

    ನವದೆಹಲಿ: ದೆಹಲಿ ಮದ್ಯನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರನ್ನು ನಿಧಾನಗತಿಯಲ್ಲಿ ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಗಂಭೀರ ಆರೋಪ ಮಾಡಿದ್ದಾರೆ.

    ಇದನ್ನೂ ಓದಿ: ಚುನಾವಣೆ ಬಳಿಕ ವಯನಾಡ್​ನಿಂದಲೂ ರಾಹುಲ್ ಗಾಂಧಿ ಪಲಾಯನ: ಪ್ರಧಾನಿ ಮೋದಿ ವ್ಯಂಗ್ಯ

    ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು, ಜೈಲಿನೊಳಗೆ ಇನ್ಸುಲಿನ್ ಮತ್ತು ಕೇಜ್ರಿವಾಲ್ ಅವರ ವೈದ್ಯರ ಸಮಾಲೋಚನೆಗೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದ ಮರುದಿನವೇ ಈ ಆರೋಪ ಮಾಡಲಾಗಿದೆ.

    ಕಳೆದ 22 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್‌ ಅವರಿಗೆ ಜೈಲು ಆಡಳಿತವು ಇನ್ಸುಲಿನ್ ನೀಡಲು ನಿರಾಕರಿಸುತ್ತಿದೆ. ಈ ಮೂಲಕ ಕೇಜ್ರಿವಾಲ್ ಅವರ ನಿಧಾನಗತಿಯ ಸಾವಿಗೆ ಪಿತೂರಿ ನಡೆಯುತ್ತಿದೆ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಲು ಬಯಸುತ್ತೇನೆ ಎಂದರು.
    ಮಧುಮೇಹಿ ಆಗಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ವೈದ್ಯರ ಜೊತೆ ಇನ್ಸುಲಿನ್ ನಿರಾಕರಿಸಿದ ಆರೋಪದ ಮೇಲೆ ತಿಹಾರ್ ಆಡಳಿತ, ಬಿಜೆಪಿ, ಕೇಂದ್ರ ಮತ್ತು ದೆಹಲಿ ಎಲ್‌ಜಿ ವಿರುದ್ಧ ತೀವ್ರವಾಗಿ ಟೀಕಿಸಿದರು. ದೆಹಲಿ ಮುಖ್ಯಮಂತ್ರಿ ಕಳೆದ 20-22 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

    ಜೈಲಿನಲ್ಲಿ ದಿನನಿತ್ಯದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಲು ದೆಹಲಿ ಸಿಎಂಗೆ ಯಂತ್ರವನ್ನು ಬಳಸಲು ನ್ಯಾಯಾಲಯವು ಅನುಮತಿ ನೀಡಿದೆ ಎಂದು ಭಾರದ್ವಾಜ್ ಹೇಳಿದರು.

    ಈ ಮೊದಲು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ವಾದ ಮಂಡಿಸಿದ್ದ ಇಡಿ ಪರ ವಕೀಲರು, ಜಾಮೀನು ಪಡೆಯುವ ಉದ್ದೇಶದಿಂದ ಕೇಜ್ರಿವಾಲ್ ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳಬೇಕೆಂದು ಮಾವಿನ ಹಣ್ಣು, ಸಿಹಿ ಹಾಗೂ ಆಲೂ ಪೂರಿ ಸೇವನೆ ಮಾಡುತ್ತಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ ಆರೋಪವನ್ನ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.

    ಕೇವಲ ಜಾಮೀನು ಪಡೆಯೋದಕ್ಕಾಗಿ ಪಾರ್ಶ್ವವಾಯುವಿನಂಥಾ ಗಂಭೀರ ಆರೋಗ್ಯ ಸಮಸ್ಯೆಗಳನ್ನ ತಂದುಕೊಳ್ಳಲು ಸಾಧ್ಯವೇ ಎಂದು ಕೇಜ್ರಿವಾಲ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.

    ಏನಿದು ಪ್ರಕರಣ?: 2021-22ರಲ್ಲಿ ದೆಹಲಿ ಸರ್ಕಾರ ಅಬಕಾರಿ ನೀತಿಯನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸುವಾಗ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ದಂದೆ ನಡೆದಿದೆ ಎಂಬ ಗುರುತರ ಆರೋಪಗಳಿವೆ. ಇ.ಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಕೇಜ್ರಿವಾಲ್‌ ಹೆಸರು ಪದೇಪದೆ ಉಲ್ಲೇಖವಾಗಿದೆ. ಈ ಪ್ರಕರಣದಲ್ಲಿಈಗಾಗಲೇ ದೆಹಲಿಸಚಿವರು ಸೇರಿದಂತೆ ಹಲವು ಆಪ್‌ ಮುಖಂಡರನ್ನು ಬಂಧಿಸಲಾಗಿದೆ.

     

    ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್​: ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts