More

    ಶರಣಬಸವೇಶ್ವರ ಅದ್ದೂರಿ ರಥೋತ್ಸವ

    ಚಿತ್ತಾಪುರ: ಪಟ್ಟಣದ ಹೊರ ವಲಯದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ಭಾನುವಾರ ಅದ್ದೂರಿ ರಥೋತ್ಸವ ನಡೆಯಿತು.
    ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಶರಣಬಸವೇಶ್ವರ ಮಹಾರಾಜ್ ಕಿ ಜೈ ಘೋಷಣೆಗಳೊಂದಿಗೆ ಅಪಾರ ಭಕ್ತರು ರಥ ಎಳೆದರು. ಭಕ್ತರು ಉತ್ತತ್ತಿ, ನಾರು, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.

    ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರಗಳಿAದ ಶೃಂಗರಿಸಲಾಗಿತ್ತು. ಬೆಳಗ್ಗೆ ಕರ್ತೃ ಗದ್ದುಗೆ ವಿಶೇಷ ಪೂಜೆ, ಹೋಮ ಹವನ, ಅಭಿಷೇಕ ನಡೆಯಿತು. ಶ್ರೀ ಸೋಮಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕಂಬಳೇಶ್ವರ ಮಠದಿಂದ ಕಳಸ ಮೆರವಣಿಗೆ, ಪ್ರಭುರಾಜ ರೇಷ್ಮಿ ಮನೆಯಿಂದ ಪಲ್ಲಕ್ಕಿ ಹಾಗೂ ರಾಜಶೇಖರರೆಡ್ಡಿ ದೇಶಮುಖ ಮನೆಯಿಂದ ಕುಂಭ ಮೆರವಣಿಗೆ ಮಂಗಳ ವಾದ್ಯ, ಕಲಾ ತಂಡಗಳೊAದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯ ತಲುಪಿದ ನಂತರ ರಥೋತ್ಸವ ನೆರವೇರಿತು.

    ಕಾರ್ಯಕ್ರಮದಲ್ಲಿ ನಂದಿ ಬಸವಣ್ಣ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಪಿಯುಸಿಯಲ್ಲಿ ಶೇ.೯೦ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೀರಶೈವ ಸಮಾಜದ ಅಧ್ಯಕ್ಷ ನಾಗರಾಜ ಭಂಕಲಗಿ, ಜಾತ್ರೆ ಸಮಿತಿ ಅಧ್ಯಕ್ಷ ಬಸವರಾಜ ಕಾಳಗಿ, ಪ್ರಮುಖರಾದ ಅಂಬರೀಶ ಸುಲೇಗಾಂವ, ನಾಗರೆಡ್ಡಿ ಪಾಟೀಲ್ ಕರದಾಳ, ಸೋಮಶೇಖರ ಪಾಟೀಲ್ ಬೆಳಗುಂಪಾ, ನಾಗರಾಜ ರೇಷ್ಮಿ, ಆನಂದ ಪಾಟೀಲ್ ನರಬೋಳಿ, ಮಂಜುನಾಥಗೌಡ ಪೊಲೀಸ್ ಪಾಟೀಲ್, ನಾಗರೆಡ್ಡಿ ಗೋಪಶೇನ್, ಸಿದ್ರಾಮ ನೀಲಂಗಿ, ಶ್ರೀಮಂತ ಕುಂಬಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts