More

    ಮುಳ್ಳು ಪಲ್ಲಕ್ಕಿ ಪವಾಡ ಸಂಪನ್ನ

    ಚಿತ್ರದುರ್ಗ: ತಾಲೂಕಿನ ದೊಡ್ಡಸಿದ್ಧವ್ವನಹಳ್ಳಿ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಮುಳ್ಳು ಪಲ್ಲಕ್ಕಿ ಪವಾಡ ಜರುಗಿತು.

    ಸ್ವಾಮಿಗೆ ವಿಶೇಷ ಪೂಜೆಯಾದ ಬಳಿಕ ಚಿಕ್ಕ ರಥೋತ್ಸವದ ವೇಳೆ ಭಕ್ತೋತ್ಸಾಹ ಹೆಚ್ಚಾಯಿತು. ಎಣ್ಣೆಗೆರೆ ಗ್ರಾಮಸ್ಥರಿಂದ ಎಡೆ ಪೂಜೆ ನೆರವೇರಿತು.

    ದಾಸಪ್ಪನ ಉತ್ಸವ ನಂತರ ಇಂಗಳದಾಳ್ ಗ್ರಾಮಕ್ಕೆ ದೇವರ ಉತ್ಸವ ಮೂರ್ತಿ ಕರೆತರಲಾಯಿತು. ನಂತರ ಗ್ರಾಮದಲ್ಲಿ ನಡೆದ ಮುಳ್ಳು ಪಲ್ಲಕ್ಕಿ ಪವಾಡಕ್ಕೆ ಅನೇಕ ಭಕ್ತರು ಸಾಕ್ಷಿಯಾದರು.

    ಸಂಜೆ 4ಕ್ಕೆ ಡಿ.ಎಸ್.ಹಳ್ಳಿಯ ತೋಪರದಾಸಪ್ಪನ ಗುಡಿ ಮುಂದೆ ತೋಪರಮಾಳಿಗೆ ಗ್ರಾಮಸ್ಥರಿಂದ ಮಣೆವು ಪೂಜೆ, 5ಕ್ಕೆ ದೊಡ್ಡಸಿದ್ಧವ್ವನಹಳ್ಳಿಯಲ್ಲೂ ಮುಳ್ಳು ಪಲ್ಲಕ್ಕಿ ಪವಾಡ, ರಾತ್ರಿ 8ಕ್ಕೆ ದೊಡ್ಡ ಎಡೆ ಪೂಜಾ ಕೈಂಕರ್ಯ ಜಾತ್ರಾ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದವು.

    29ರಂದು ಮಧ್ಯಾಹ್ನ 2.30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವಾಮಿಯ ದೊಡ್ಡ ರಥೋತ್ಸವ ಜರುಗಲಿದೆ. 30ರಂದು ಸಂಜೆ 5ಕ್ಕೆ ಮಂಗಳಸ್ನಾನ, ನಂತರ ಹೂವಿನ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಸಮಿತಿ, ಗ್ರಾಮಸ್ಥರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts