More

    ಈ ವಿಷಯದಲ್ಲಿ ಜಡೇಜಾ ಓಕೆ ಆದ್ರೆ… ಟಿ-20 ವಿಶ್ವಕಪ್​ನಲ್ಲಿ ಜಡ್ಡು ಸ್ಥಾನದ ಬಗ್ಗೆ ಮಾಜಿ ಕ್ರಿಕೆಟಿಗ ಅಸಮಾಧಾನ

    ನವದೆಹಲಿ: ನಿನ್ನೆ (ಏ.30) ಜೂನ್​ 01ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್​ ಪಂದ್ಯಗಳಿಗೆ ಟೀಂ ಇಂಡಿಯಾದ 15 ಸದಸ್ಯರ ತಂಡವನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿತು. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್​​ದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಷ್​ದೀಪ್​ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ. ಅದರಂತೆ ಶುಭ್​ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್​ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.

    ಇದನ್ನೂ ಓದಿ: ಮಾಜಿ ಸಿಎಂ, ಹಾವೇರಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ

    ಟೀಂ ಇಂಡಿಯಾದ ತಂಡ ಪ್ರಕಟವಾಗುತ್ತಿದ್ದಂತೆ ಅನೇಕ ಅಭಿಪ್ರಾಯಗಳು ಹೊರಬಿದ್ದಿದ್ದು, ಕೆಲವು ಆಟಗಾರರ ಸ್ಥಾನವನ್ನು ಪ್ರಶ್ನೆ ಮಾಡಲಾಯಿತು. ಆದ್ರೆ, ಬಿಸಿಸಿಐ 15 ಸದಸ್ಯರ ತಂಡವನ್ನು ಘೋಷಣೆ ಮಾಡುವ ಮುನ್ನವೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ, ಪ್ರಸ್ತುತ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ಪರ ಆಡುತ್ತಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ ವಿರುದ್ಧ ಧ್ವನಿ ಎತ್ತಿದ್ದರು.

    ಟಿ-20 ವಿಶ್ವಕಪ್​ಗೆ ಭಾರತ ತಂಡದ ಪರ ಜಡೇಜಾ 7ನೇ ಕ್ರಮಾಂಕದಲ್ಲಿ ಆಡಲಿರುವ ಸ್ಟಾರ್​ ಆಲ್​ರೌಂಡರ್​ ಪ್ಲೇಯರ್​. ಇದು ಕ್ರಿಕೆಟ್ ಅಭಿಮಾನಿಗಳಿಗೂ ತಿಳಿದಿರುವ ಸಂಗತಿ. ಇದನ್ನು ಪ್ರಶ್ನಿಸಿದ ಟಾಮ್, ಐಪಿಎಲ್ 17ನೇ ಆವೃತ್ತಿಯ ಆರಂಭದಿಂದ ಇಲ್ಲಿಯವರೆಗೆ ನಡೆದಿರುವ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್ ಲೈನ್​ ಹೊಂದಿಲ್ಲ. ಆಡಿದ ಅಷ್ಟು ಮ್ಯಾಚ್​ಗಳಲ್ಲಿ ಜಡೇಜಾ ಹೆಚ್ಚು ರನ್​ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಕೇವಲ ಬೌಲಿಂಗ್​ನಲ್ಲಿ ಮಾತ್ರ ಅಬ್ಬರಿಸುತ್ತಿದ್ದಾರೆ ಬಿಟ್ಟರೆ, ಬ್ಯಾಟಿಂಗ್​ನಲ್ಲಿ ಸದ್ದು ಮಾಡಿಲ್ಲ ಎಂದು ಅಭಿಪ್ರಾಯಿಸಿದರು.

    ಇದನ್ನೂ ಓದಿ: ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

    7ನೇ ಕ್ರಮಾಂಕದಲ್ಲಿ ಬರುವವರು ಪವರ್​ ಹಿಟ್ಟಿಂಗ್​ ಇರುವವರೇ ಆಗಿರಬೇಕು. ಆ ರೀತಿ ನೋಡುವುದಾದರೆ ಟೀಂ ಇಂಡಿಯಾ ಪರ 7ನೇ ಸ್ಥಾನದಲ್ಲಿ ಜಡೇಜಾರನ್ನು ಆಡಿಸುವುದು ಅಷ್ಟು ಉತ್ತಮವಾಗಿಲ್ಲ. ಅವರು ಬ್ಯಾಟಿಂಗ್​ನಲ್ಲಿ ಬೆಸ್ಟ್​ ಪರ್ಫಾಮೆನ್ಸ್​ ನೀಡಿಲ್ಲ ಎಂದು ವಾದಿಸಿದ್ದಾರೆ. ಪ್ರಸ್ತುತ 9 ಪಂದ್ಯಗಳಲ್ಲಿ ಕೇವಲ 157 ರನ್​ ಗಳಿಸಿರುವ ಜಡೇಜಾ, 131.93 ಸ್ಟ್ರೈಕ್​ರೇಟ್​ ಹೊಂದಿದ್ದಾರೆ,(ಏಜೆನ್ಸೀಸ್).

    ಟಿ-20 ವಿಶ್ವಕಪ್​: ತಂಡದಲ್ಲಿ ಇವರಿಗೆ ಸ್ಥಾನ ಕೊಡಿ, ಆತ ಬೇಡ! ಅಭಿಪ್ರಾಯ ಹೊರಹಾಕಿದ ಕ್ರಿಕೆಟ್ ಫ್ಯಾನ್ಸ್​

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts