More

    ಪಕ್ಷ ವಿರೋಧಿ ಚಟುವಟಿಕೆ; ಕಾಂಗ್ರೆಸ್ ನಿಂದ ಕೈ ಮುಖಂಡನ‌ ಉಚ್ಛಾಟನೆ

    ಹಾವೇರಿ: ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್​​ ಮುಖಂಡನ‌ ಉಚ್ಛಾಟನೆ ಮಾಡಲಾಗಿದೆ.

    ಜಟ್ಡಪ್ಪ ಕರೇಗೌಡ್ರು ಉಚ್ಛಾಟನೆ ಗೊಂಡ ಕಾಂಗ್ರೆಸ್​​ ಮುಖಂಡ. ರಾಣೇಬೆನ್ನೂರು ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಜಟ್ಟಪ್ಪ ಕರೇಗೌಡ್ರು. ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಕೈ ಪಕ್ಷದ ಬಂಡಾಯ ಅಭ್ಯರ್ಥಿ ಆಗಲು ಹೊರಟಿದ್ದರು.

    ಇದನ್ನೂ ಓದಿ: ಏನೇ ಆದ್ರೂ ಆರ್​ಸಿಬಿ ನನ್ನ ಫೇವರಿಟ್… ಕಪ್ ಗೆಲ್ಲುವ ಸಮಯ ಬಂದೇ ಬರುತ್ತದೆ: ಡಿಕೆಶಿ

    ಶ್ರೀ ಜಟ್ಟಪ್ಪ ಎಸ್ ಕರೇ ಗೌಡ್ರು, ಮಾಜಿ ಸದಸ್ಯರು ಎ.ಪಿ. ಎಂ ಸಿ ಹಾಗೂ ವಿಶ್ವ ನಾಥ ಕರೇಗೌಡ್ರು ಯುವ ಕಾಂಗ್ರೆಸ್ ಅಧ್ಯಕ್ಷರು ರಾಣಿ ಬೆನ್ನೂರು ಗ್ರಾಮಾಂತರ ಬ್ಲಾಕ್‌ ಇವರುಗಳು ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದು, ಇವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರುಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಕೆ. ರೆಹಮಾನ್‌ ಖಾನ್ ಆದೇಶ ಹೊರಡಸಿದ್ದಾರೆ.

    ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಯಸಿ ಈಗ ಜಯ ಗಳಿಸಿರುವ ಪ್ರಕಾಶ ಕೋಳಿವಾಡ, ಡಾ. ಪ್ರವೀಣ ಖನ್ನೂರ, ಜಟ್ಟಪ್ಪ ಕರೇಗೌಡ ಸೇರಿ ದಂತೆ 6 ಜನ ಅರ್ಜಿ ಸಲ್ಲಿಸಿದ್ದರು. ಪಕ್ಷ ಅಂತಿಮವಾಗಿ ಪ್ರಕಾಶ್ ಕೋಳಿ ವಾಡರಿಗೆ ಟಿಕೆಟ್ ಪ್ರಕಟಿಸಿತ್ತು.

    ಮೆಕ್ಕಾ, ಮದೀನಾಗೆ ಭೇಟಿ ನೀಡಿದ ಸಂಜನಾ ಗಲ್ರಾನಿ; ಫೋಟೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts