ಸಿನಿಮಾ

ಚುನಾವಣೆಯಲ್ಲಿ ಬೆಂಬಲಿಗರಿಗೆ ಹಣ ಕೊಟ್ಟು ಮೋಸ ಹೋದ್ರಾ ಮಾಜಿ‌ ಸಚಿವ…!

ಕೆ.ಆರ್​.ಪೇಟೆ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಖ್ಯಾತಿ ಪಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿಂದೆ ಇದ್ದ ಬಿಜೆಪಿ ಸರ್ಕಾರ 10-12 ಸಚಿವರಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಇನ್ನು ಚುನಾವಣೆಯಲ್ಲಿ ಸೋತ ಬಳಿಕ ಅಭ್ಯರ್ಥಿಗಳು ಪರಮಾರ್ಶೆ ಹಾಗೂ ಆತ್ಮಾವಲೋಕನದಲ್ಲಿ ತೊಡಗಿದ್ದಾರೆ.

ಈ ಮಧ್ಯೆ ಮಾಜಿ ಸಚಿವ ಡಾ.ಕೆ.ಸಿ. ನಾರಯಣಗೌಡ ಕೃತಜ್ಞತೆ ಸಭೆಯಲ್ಲಿ ಮತದಾರರಿಗೆ ಹಂಚಲು ನೀಡಿದ್ದ ಹಣವನ್ನು ವಾಪಸ್ ಕೊಡುವಂತೆ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಮೋಸ ಹೋದ್ರಾ ಮಾಜಿ ಸಚಿವ?

ಇನ್ನು ಕೆ.ಸಿ.ಎನ್​ ಹೇಳಿಕೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದು ಚುನಾವಣೆಯಲ್ಲಿ ಬೆಂಬಲಿಗರಿಗೆ ಹಣ ಕೊಟ್ಟು ಮಾಜಿ‌ ಸಚಿವರು ಮೋಸ ಹೋಗಿದ್ದಾರ ಎಂದಬ ಪ್ರಶ್ನೆ ಹುಟ್ಟುಕೊಂಡಿದೆ.

KC Narayan Gowda

ಭಾನುವಾರ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ನಾರಾಯಣಗೌಡ​ ಮತದಾರರಿಗೆ ಹಂಚಿಕೆ ಮಾಡದೆ ಇಟ್ಟುಕೊಂಡಿರುವ ಹಣ ವಾಪಸ್ ಕೊಡಿ ಎಂದು ಅಂಗಲಾಚಿದ್ದಾರೆ.

ನಾನು ಮಾಹಿತಿ ಪಡೆದಿದ್ದೇನೆ, ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ ಹಂಚಿಕೆ ಮಾಡದೆ ಇಟ್ಟು ಕೊಂಡಿದ್ರೆ ದಯವಿಟ್ಟು ವಾಪಾಸ್ ಕೊಡಿ. ಟ್ರಸ್ಟ್ ಸ್ಥಾಪಿಸಿ ಆ ಹಣವನ್ನು ಸಮಾಜಸೇವೆಗೆ ಉಪಯೋಗಿಸೋಣ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.

Latest Posts

ಲೈಫ್‌ಸ್ಟೈಲ್