More

    ಪರಿಪೂರ್ಣ ಸುಖಪ್ರಾಪ್ತಿಗೆ ಮಹರ್ಷಿ ಅರವಿಂದರ ಸಮನ್ವಯ ಯೋಗ

    Yogakshemaಮಹರ್ಷಿ ಅರವಿಂದರು ಯೋಗಶಾಸ್ತ್ರ ವಿಚಾರದಲ್ಲಿ ತಮ್ಮದೇ ಆದ ಅಪಾರ ಕೊಡುಗೆಯನ್ನು ಇತ್ತಿರುವರು. ಮಹರ್ಷಿ ಅರವಿಂದರ ಪ್ರಮುಖ ವಿಚಾರವೆಂದರೆ- ಜಾಗೃತಜ್ಞಾನ ಹಾಗೂ ಅದಕ್ಕೂ ಮಿಕ್ಕಿದ ಅತೀಂದ್ರಿಯ ಜ್ಞಾನ. ಅವರು ಹೇಳುವಂತೆ, ಪ್ರತಿಯೊಬ್ಬ ಮಾನವನು ಪತಂಜಲಿ ಮಹರ್ಷಿ ವಿವರಿಸಿದ ರೀತಿಯಲ್ಲಿ ಸತತವಾದ ಯೋಗ, ಧ್ಯಾನದ ಅಭ್ಯಾಸದಿಂದ ನವಚೈತನ್ಯ ಪಡೆದು ಅತೀಂದ್ರಿಯ ಜ್ಞಾನವನ್ನು ಸಾಧಿಸಿಕೊಳ್ಳಬಹುದು. ಅಂತಹ ಅತೀಂದ್ರಿಯ ಜ್ಞಾನವು ಮಾನವ ಜೀವನದಲ್ಲಿ ಅದ್ಭುತ ಪ್ರಭಾವವನ್ನು ಬೀರಬಲ್ಲದು. ಆತನ ಜ್ಞಾನ-ಜೀವನಗಳನ್ನೆಲ್ಲ ಸಂಪೂರ್ಣ ಬದಲಾಯಿಸಬಹುದು.

    ಅರವಿಂದರು ಹೇಳುವಂತೆ….: ಯೋಗವು ಮಾನವನ ಪರಿಪೂರ್ಣತೆಯ ಸಾಧನೆಗಿರುವ ಮಾರ್ಗವಾಗಿದೆ. ಮಾನವ ತನ್ನಲ್ಲಿ ಅಡಗಿರುವ ದೇವತ್ವವನ್ನು ಅರಿತುಕೊಂಡು ಅದರೊಡನೆ ಒಂದಾಗಲು ಈ ಯೋಗಾಭ್ಯಾಸವನ್ನು ಬಳಸಬಹುದಾಗಿದೆ. ರಾಜಯೋಗದ ಕೆಲವು ವಿಧಾನಗಳನ್ನು ತಕ್ಕ ರೀತಿಯಲ್ಲಿ ಬಳಸಿ ಕೊಂಡುದಾದರೆ ದೈವಾನುಸಂಧಾನವನ್ನು ಹೆಚ್ಚಿನ ಪ್ರಯಾಸವಿಲ್ಲದೆ ಸಾಧಿಸಬಹುದಾಗಿದೆ. ಯಾವುದಾದರೊಂದು ರಾಸಾಯನಿಕ ದ್ರವ್ಯವನ್ನು ಸಂಯೋಜಿಸಿ ಅಥವಾ ವಿಭಜಿಸಿ ಅದರ ಮೂಲಶಕ್ತಿಯನ್ನು ಅರಿತುಕೊಳ್ಳುತ್ತಾರೆ. ಹಾಗೆಯೇ ಯೌಗಿಕ ಜ್ಞಾನ ಮತ್ತು ಅನುಭವಗಳನ್ನು ಸಂಯೋಜಿಸಿ ಹೊಸ ಶಕ್ತಿಯನ್ನು ಸಾಧಿಸಿಕೊಳ್ಳಬಹುದಾಗಿದೆ. ನಮ್ಮಲ್ಲಿ ಗುಪ್ತವಾಗಿರುವ ಶಕ್ತಿಯನ್ನು ಮನೋವೈಜ್ಞಾನಿಕ ರೀತಿಯಲ್ಲಿ ಬೆಳೆಸಿ ಸತ್ಯವನ್ನು ಸಾಧಿಸಿಕೊಳ್ಳುವುದೇ ಯೋಗವೆಂದು ಅರವಿಂದರು ಹೇಳುತ್ತಾರೆ.

    ದೈನಂದಿನ ವ್ಯವಹಾರ ಬಿಡಬೇಕಿಲ್ಲ : ನಮ್ಮಲ್ಲಿ ಅಡಕವಾಗಿರುವ ಹೊಸ ಚೈತನ್ಯವನ್ನು ಬೆಳೆಸಿಕೊಳ್ಳಹೊರಟರೂ, ನಮ್ಮ ನಮ್ಮ ದೈನಂದಿನ ವ್ಯವಹಾರಗಳನ್ನು ಸಂಪೂರ್ಣ ತೊರೆದು ಬಿಡಬೇಕಾಗಿಲ್ಲ. ಬಾಹ್ಯಪ್ರಪಂಚದ ವ್ಯಾಪಾರ ಹಾಗೂ ಅಧ್ಯಾತ್ಮಿಕ ಸತ್ಯಸಾಧನೆ ಇವುಗಳೆರಡರ ಸಮನ್ವಯವೂ ಯೋಗವೆಂದು ಹೇಳಲ್ಪಡುತ್ತದೆ. ದೇಹ ಮನಸ್ಸುಗಳ ಬಾಹ್ಯ ವ್ಯವಹಾರ ಶಕ್ತಿಯನ್ನು ಶುದ್ಧೀಕರಿಸಿಕೊಡು ಪಾವನಗೊಳಿಸಿಕೊಳ್ಳಬೇಕು. ಕ್ರಮೇಣ ಅದನ್ನು ಉದಾತ್ತ ಮಾರ್ಗದತ್ತ ಹರಿಯಗೊಳಿಸಿ ಆಧ್ಯಾತ್ಮಿಕ ಶಕ್ತಿಯ ಬೆಳವಣಿಗೆಗಾಗಿ ಉಪಯೋಗಿಸಬೇಕು. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಶಕ್ತಿಗಳನ್ನು ದೈವೀಶಕ್ತಿಯತ್ತ ಹರಿಸಿಕೊಂಡು ಹೋಗಿ ನಮ್ಮಲ್ಲಿ ಅಡಕವಾಗಿರುವ ಅಪಾರ ಅದ್ಭುತ ಸಾಮರ್ಥ್ಯ ಸಾಧಿಸಿಕೊಳ್ಳಬೇಕು. ಈ ವಿಧದಲ್ಲಿ ಯೋಗ ಶಕ್ತಿಯನ್ನು ಮಾನವನು ದೇವನಾಗುವುದಕ್ಕೆ ಸಾಧಕವಾಗಿ ಬಳಸಬೇಕೆಂದು ಅರವಿಂದರು ಹೇಳುತ್ತಾರೆ.

    ಪರಿಪೂರ್ಣ ಸಮನ್ವಯ ಸುಖ : ಮಾನವನು ತನ್ನ ಪ್ರಯತ್ನದಿಂದ ಸಾಮಾನ್ಯ ಪ್ರಾಪಂಚಿಕ ಸುಖಸಾಧಿಸಿ ತೃಪ್ತಿಪಡಬಹುದು. ಮಾನಸಿಕ ಚಟುವಟಿಕೆಗಳನ್ನು ಬಲಪಡಿಸಿಕೊಂಡು ಮುಂದೆ ಬರಬಹುದು. ಮಾತ್ರವಲ್ಲದೆ ಆಧ್ಯಾತ್ಮಿಕ ಶಕ್ತಿಯ ಬೆಳವಣಿಗೆಯಿಂದ ಆತ್ಮಾನಂದವನ್ನೂ ಗಳಿಸಿಕೊಳ್ಳಬಹುದು. ಆದರೆ ಶಾಂತ ನಿರಂತರ ಸಾಧನೆಯಿಂದ ದೇಹ, ಮನಸ್ಸು, ಆತ್ಮಗಳೆಂಬ ತ್ರಿಮುಖಗಳೊಳಗಿನ ಅಂತರವನ್ನು ಕಡಿಮೆ ಮಾಡಿಕೊಂಡು ಪರಿಪೂರ್ಣ ಸಮನ್ವಯ ಸುಖವನ್ನು ಸಾಧಿಸಿಕೊಂಡು ಬರಬೇಕು ಎಂಬುದು ಅರವಿಂದರ ಸ್ಪಷ್ಟ ಅಭಿಪ್ರಾಯ.

    ಪ್ರಧಾನ ಉದ್ದೇಶ: ಇವುಗಳ ಪೈಕಿ ದೇಹವು ತನ್ನನ್ನು ಸಾಧ್ಯವಾದಷ್ಟು ಉಳಿಸಿಕೊಂಡು ಅಥವಾ ಪುನರ್ಜನ್ಮ ರೂಪದಲ್ಲಿ ಒಂದು ತನ್ನತನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಮನಸ್ಸು ತನ್ನ ಸುಧಾರಣೆಯನ್ನು ಸಾಧಿಸಿಕೋಂಡು ಹೊಸಹೊಸ ರೂಪ ತಾಳಲು ಬಯಸುತ್ತದೆ. ಆದರೆ ಆತ್ಮವು ನಿತ್ಯರೂಪದಲ್ಲಿದ್ದು ಪರಿಪೂರ್ಣತೆಯನ್ನು ಸಾಧಿಸಬಯಸುತ್ತದೆ, ಇವೇ ಮೊದಲಾದವು ಅರವಿಂದರ ತತ್ತ್ವವಾಗಿದೆ. ಮಾನವನ ದೇಹ, ಮನಸ್ಸು ಮತ್ತು ಆತ್ಮಗಳನ್ನು ಸರಿಯಾಗಿ ಒಂದನ್ನೊಂದು ಹೊಂದಿಸಿಕೊಂಡು, ಏಕರೂಪದಿಂದ ಕಾರ್ಯಪ್ರವೃತ್ತವಾಗುವಂತೆ ಮಾಡುವುದೇ ಯೋಗದ ಪ್ರಧಾನ ಉದ್ದೇಶ.

    ಇಂತಹ ಯೋಗಾಭ್ಯಾಸವು ಹಠಯೋಗ, ರಾಜಯೋಗ, ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮುಂತಾದ ವಿವಿಧ ವಿಧಾನಗಳನ್ನು ಒಳಗೊಂಡಿದೆ. ಸಮಗ್ರ ದೃಷ್ಟಿಯಿಂದ ನೋಡಿದರೆ ಎಲ್ಲ ಮಾರ್ಗಗಳೂ ಕೊನೆಗೆ ಒಂದೇ ಗುರಿಯಾದ ದೇಹ- ಮನ- ಆತ್ಮಗಳ ಉದಾತ್ತತೆಯನ್ನು ಸಾಧಿಸುವಲ್ಲಿ ಸಫಲಗೊಳ್ಳುತ್ತವೆ ಎಂದು ಮೊದಲಾಗಿಯು ಮಹರ್ಷಿ ಅರವಿಂದರು ಚಿಂತಿಸಿದ್ದಾರೆ.

    ಈ ಒಂದು ಕಾರಣಕ್ಕಾಗಿ ನಾವು ಅಂದು ಚಹಲ್​ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ: ಮೈಕ್​ ಹೆಸ್ಸನ್

    ಸದ್ಯಕ್ಕೆ ಮಕ್ಕಳು ಬೇಡ, ಎಗ್ ಫ್ರೀಜ್ ಮಾಡಿ ಮಗು ಪಡೆಯೋ ಪ್ಲಾನ್ ಇದೆ; ಮದುವೆ ಆಗ್ದೇನೇ ಮಗು ಪಡೆಯಲು ಮುಂದಾದ್ರಾ ಮೃಣಾಲ್ ಠಾಕೂರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts