More

    ಕಳುವಾಗಿದ್ದ ಹಸುವನ್ನು ಪೊಲೀಸರ ವಿರುದ್ಧ ಹೋರಾಡಿ ವಾಪಸ್​ ಪಡೆದ ರೈತ!

    ಜೈಪುರ: ತಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ಕಳುವು ಮಾಡಿದರ ಕುರಿತು ಪೊಲೀಸ್​ ಠಾಣೆಗೆ ನಿರಂತರವಾಗಿ ಭೇಟಿ ನೀಡಿ ರೈತನೊಬ್ಬ ತನ್ನ ಆಕಳನ್ನು ವಾಪಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆಯೂ ರಾಜಸ್ಥಾನದ ಬಿಕಾನೇರ್​ನಲ್ಲಿ ನಡೆದಿದ್ದು ಕಳ್ಳತನವಾಗಿದ್ದ ಹಸುವನ್ನು ವಾಪಸ್​ ಪಡೆಯಲು ರೈತ ಇನ್ನಿಲ್ಲದ ಕಸರತ್ತು ಮಾಡಿರುವುದು ಇದೀಗ ದೊಡ್ಡ ಸುದ್ದಿಯಾಗಿದೆ.

    ಹಸು ಕಳುವು

    ತನ್ನ ಆಕಳು ಕಳುವಾಗಿದ್ದಕ್ಕೆ ಮೊದಲು ದುಲಾರಾಮ್​​(70) ಫೆಬ್ರವರಿ 11,2021ರರಂದು ದೂರು ನೀಡಿದಾಗ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಿ FIR ದಾಖಲಿಸಿಕೊಂಡಿದ್ದಾರೆ. ದಿನ ಕಳೆದಂತೆ ರೈತನಿಗೆ ತನ್ನ ಹಸು ವಾಪಸ್​ ಸಿಗುತ್ತದೆ ಎನ್ನುವ ಯಾವುದೇ ಲಕ್ಷಣಗಳು ಗೋಚರಿಸಲಿಲ್ಲ.

    ಈ ಕುರಿತು ಪೊಲೀಸ್​ ಠಾಣೆಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ರೈತನಿಗೆ ಪೊಲೀಸರು ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದ ತೀವ್ರವಾಗಿ ಕುಪಿತಗೊಂಡ ರೈತ ನಂತರದ ದಿನಗಳಲ್ಲಿ ವಿಭಿನ್ನವಾಗಿ ಹೋರಾಡುವ ಮೂಲಕ ಯಶಸ್ವಿಯಾಗಿದ್ದಾನೆ.

    cow (1)

    ಒಮ್ಮೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಬಿಕಾನೇರ್ಗೆ ಭೇಟಿ ನೀಡುತ್ತಿದ್ದಾರೆ ಎಂಬ ವಿಷಯ ತಿಳಿದ ರೈತ ಸಿಎಂ ಬರುವ ರಸ್ತೆಯಲ್ಲಿ ಇರುವ ಮೊಬೈಲ್​ ಟವರ್​ ಒಂದನ್ನು ಏರಿ ತನ್ನ ಬೇಡಿಕೆ ಈಡೇರುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.

    ಹುಡುಕಿಕೊಟ್ಟ ಪೊಲೀಸರು

    ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸ್​ ಅಧಿಕಾರಿಗಳು ರೈತನ ಮನವೊಲಿಸಿ ಕಳುವಾಗಿರುವ ಆಕುಳನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆ ನಂತರ ಒಂದು ದಿನ ಕಳುವಾದ ಹಸುವಿನ ಜೊತೆ ಬಂದ ಪೊಲೀಸರು ಅದನ್ನು ಹಸ್ತಾಂತರಿಸಿ DNA ರಿಪೋರ್ಟ್​ ಸಹ ನೀಡಿದ್ಧಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರೈತ ಕಳೆದ ಎರಡು ವರ್ಷಗಳಿಂದ ಹೋರಾಡುತ್ತಿದ್ದೇನೆ. ನಿತಂತರ ಪ್ರತಿಭಟನೆಗಳ ಫಲವಾಗಿ ಇಂದು ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts