ಟಿ-20 ವಿಶ್ವಕಪ್‌ 2024: ಕ್ಯಾಪ್ಟನ್ ಆಗಿ ರೋಹಿತ್​ ಮುಂದುವರಿಕೆ?; ಸೌರವ್ ಗಂಗೂಲಿ ಅನಿಸಿಕೆ ಹೀಗಿದೆ

Untitled design (93)
Published on

ಹೊಸದಿಲ್ಲಿ: ಏಕದಿನ ವಿಶ್ವಕಪ್‌ 2023ರ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಿರ್ವಹಿಸಿದ ನಾಯಕತ್ವದಿಂದ ಪ್ರಭಾವಿತರಾದ ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ಇದೀಗ ರೋಹಿತ್ ಅವರ ಕ್ಯಾಪ್ಟನ್ಸಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ತಮ್ಮ ಅನಿಸಿಕೆಯನ್ನು ಬಹಿರಂಗವಾಗಿ ತಿಳಿಸಿದ್ದಾರೆ.

ಈ ಹಿಂದಿನಿಂದಲೂ ರೋಹಿತ್​ ಟಿ-20 ಕ್ಯಾಪ್ಟನ್​ ಆಗಿ ಮುಂದುವರಿಯುವುದು ಬಹುತೇಕ ಅನುಮಾನ ಎಂದೇ ಹೇಳಲಾಗಿದೆ. ಆದ್ರೆ, ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ T20 ವಿಶ್ವಕಪ್‌ನವರೆಗೆ ಟೀಮ್​ ಇಂಡಿಯಾವನ್ನು ರೋಹಿತ್​ ನಾಯಕನಾಗಿ ಮುನ್ನಡೆಸಬೇಕು ಎಂದು ಗಂಗೂಲಿ ತಿಳಿಸಿದ್ದಾರೆ.

"ಏಕದಿನ ವಿಶ್ವಕಪ್ ಫೈನಲ್‌ಗೆ ಭಾರತವನ್ನು ಮುನ್ನಡೆಸಿದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಸದ್ಯ ವಿರಾಮ ತೆಗೆದುಕೊಂಡಿರುವ ಕಾರಣ ಡಿಸೆಂಬರ್ 10 ರಿಂದ ಪ್ರಾರಂಭಗೊಳ್ಳುವ ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್-ಬಾಲ್ ಲೀಗ್​ ಮಿಸ್​ ಮಾಡಿಕೊಳ್ಳಲಿದ್ದಾರೆ. ಒಮ್ಮೆ ರೋಹಿತ್ ಎಲ್ಲಾ ಫಾರ್ಮ್ಯಾಟ್‌ಗಳನ್ನು ಆಡಲು ಹಿಂತಿರುಗಿದ ಬಳಿಕ, ಟೀಮ್ ಇಂಡಿಯಾಗೆ ನಾಯಕರಾಗಬೇಕು. ಏಕೆಂದರೆ ಅವರು ವಿಶ್ವಕಪ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ" ಎಂದು ಹೇಳಿದರು.

"ರೋಹಿತ್ ವಿಶ್ವಕಪ್‌ನಲ್ಲಿ ಎಷ್ಟು ಚೆನ್ನಾಗಿ ಆಡಿದ್ದಾರೆಂದು ನೀವು ನೋಡಿದ್ದೀರಿ. ಇಬ್ಬರು ಸಂಪೂರ್ಣ ಅವಿಭಾಜ್ಯ ಮತ್ತು ಭಾರತೀಯ ಕ್ರಿಕೆಟ್‌ನ ಪ್ರಮುಖ ಭಾಗವಾಗಿದ್ದಾರೆ" ಎಂದರು. ಕುತೂಹಲಕಾರಿಯಾಗಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ 2022ರ ಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನ ನಂತರ ಮತ್ತು ಬಿಸಿಸಿಐ ಟಿ-20 ಆಡಿಲ್ಲ. ಆರು ತಿಂಗಳ ಅವಧಿಯಲ್ಲಿ T20 ಜಾಗತಿಕ ಪ್ರದರ್ಶನಕ್ಕಾಗಿ ಇವರಿಬ್ಬರು ಭಾರತದ ವಿಷಯಗಳ ಯೋಜನೆಯಲ್ಲಿ ಇರಬೇಕೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

2022ರ ಟಿ-20 ವಿಶ್ವಕಪ್ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಆದರೆ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡ ಬಳಿಕ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಟಿ-20 ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net