More

  ಟಾಲಿವುಡ್​ನಲ್ಲಿ ಶ್ರೀಲೀಲಾ ಹವಾ: ಈ ಚಿತ್ರದಲ್ಲಿ ಕಮ್​ಬ್ಯಾಕ್​ ಮಾಡಲಿದ್ದಾರಾ ನಟಿ?

  ಆಂಧ್ರಪ್ರದೇಶ: ಟಾಲಿವುಡ್​ ಅಂಗಳದಲ್ಲಿ ಟಾಪ್​ ನಟಿಯರನ್ನು ಹಿಂದಿಕ್ಕಿ ಸ್ಟಾರ್​ ಹೀರೋಗಳ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗುತ್ತಿರುವ ಸ್ಯಾಂಡಲ್​ವುಡ್​ನ ಕಿಸ್​ ಬೆಡಗಿ ನಟಿ ಶ್ರೀಲೀಲಾ, ಸದ್ಯ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆ ಹಾಗೂ ಬ್ಯುಸಿಯೆಸ್ಟ್​​ ಹೀರೋಯಿನ್ ಆಗಿದ್ದಾರೆ.

  ಇದನ್ನೂ ಓದಿ: ಲಂಚ ಪ್ರಕರಣ: 20 ಲಕ್ಷ ಹಣ ಪಡೆಯುತ್ತಿದ್ದ ಇಡಿ ಅಧಿಕಾರಿ ಬಂಧನ!

  ಅಲ್ಪಾವಧಿಯಲ್ಲಿ ತೆಲುಗು ಚಿತ್ರರಂಗದ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿರುವ ಶ್ರೀಲೀಲಾ, ಸದ್ಯ ಅತ್ಯಂತ ಜನಪ್ರಿಯ ತಾರೆಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಟಾಲಿವುಡ್​ನ ಸ್ಟಾರ್​ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಶ್ರೀಲೀಲಾ ಅಭಿನಯದ ಇತ್ತೀಚಿನ ಎರಡು ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ ಎಂಬುದು ಸದ್ಯ ಅಭಿಮಾನಿಗಳ ಬೇಸರ.

  ರಾಮ್​ ಪೋತಿನೇನಿ ಜತೆಗೆ ಅಭಿನಯದ ‘ಸ್ಕಂದ’ ಮತ್ತು ‘ಆದಿಕೇಶವ’ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಹಿನ್ನಡೆಯನ್ನು ಕಂಡಿತು. ಈ ಮೂಲಕ ಚಿತ್ರವು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ವಿಫಲಗೊಂಡಿತು. ಸದ್ಯ ಈ ಎರಡು ಸಿನಿಮಾಗಳ ಸೋಲಿನ ನಂತರ ಮುಂಬರುವ ಸಿನಿಮಾ ‘ಎಕ್ಸ್​ಟ್ರಾರ್ಡಿನರಿ’ ಹಿಟ್​ ಆಗಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.

  ಇದನ್ನೂ ಓದಿ: ಪ್ರೊ ಕಬಡ್ಡಿ 10ನೇ ಆವೃತ್ತಿ 12 ತಂಡಗಳ ನಾಯಕರು ಯಾರು ?: ಕಣದಲ್ಲಿದ್ದಾರೆ ಏಳು ಕನ್ನಡಿಗರು, ಪವನ್ ಶೆರಾವತ್‌ ದುಬಾರಿ

  ತೆಲುಗಿನ ಹಿರಿಯ ನಟ ಬಾಲಯ್ಯ ಅವರೊಂದಿಗೆ ‘ಭಗವಂತ ಕೇಸರಿ’ ಚಿತ್ರದಲ್ಲಿ ಕಾಣಿಸಿಕೊಂಡ ಶ್ರೀಲೀಲಾ ತಮ್ಮ ಪಾತ್ರಕ್ಕೆ ಚಿತ್ರತಂಡದಿಂದ ಹಾಗೂ ಪ್ರೇಕ್ಷಕ ವರ್ಗದಿಂದ ಮೆಚ್ಚುಗೆ ಪಡೆದುಕೊಂಡರು. ಇದೀಗ ನಟ ನಿತಿನ್ ಜತೆಗೆ ಮುಖ್ಯಭೂಮಿಕೆಯಲ್ಲಿರುವ ‘ಎಕ್ಸ್‌ಟ್ರಾರ್ಡಿನರಿ ಮ್ಯಾನ್’ ಇದೇ ಡಿಸೆಂಬರ್ 8 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಈ ಚಿತ್ರವು ಬಾಕ್ಸ್​ ಆಫೀಸ್​ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

  ಈ ರಾಶಿಯವರಿಗಿಂದು ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ: ನಿತ್ಯಭವಿಷ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts